BREAKING NEWS
Search

ಸಚಿವ ಸಂಪುಟ ಸೇರಿದ ಹತ್ತುಜನ ಶಾಸಕರು-ಎಲ್ಲರಿಗಿಂತ ಮೊದಲು ಬಂದ ಶಿವರಾಮ್ ಹೆಬ್ಬಾರ್!

1158

ಬೆಂಗಳೂರು :- ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಂಪುಟ ಇಂದು ವಿಸ್ತರಣೆಯಾಗಿದೆ.

ನೂತನ ಸಚಿವರಾಗಿ 10 ಮಂದಿ ಇಂದು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜ್ಯಪಾಲ ವಿ.ಆರ್.ವಾಲಾ ಸಚಿವರಿಗೆ ಪ್ರಮಾಣವಚನ ಬೋಧನೆ ಮಾಡಿದರು.

10 ಮಂದಿಯೂ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಯಡಿಯೂರಪ್ಪ ಸಂಪುಟದಲ್ಲಿ ಮುಂದುವರಿಯಲಿದ್ದಾರೆ.

ಸಚಿವರಲ್ಲಿ ಕೆಲವರು ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ನೂತನ ಸಚಿವರು ಇವರು:-

  • ಎಸ್.ಟಿ.ಸೋಮಶೇಖರ್
  • ರಮೇಶ್ ಜಾರಕಿಹೊಳಿ
  • ಆನಂದ್ ಸಿಂಗ್
  • ಕೆ. ಸುಧಾಕರ್
  • ಬೈರತಿ ಬಸವರಾಜ್
  • ಶಿವರಾಂ ಹೆಬ್ಬಾರ್
  • ಬಿಸಿ ಪಾಟೀಲ್
  • ಗೋಪಾಲಯ್ಯ
  • ನಾರಾಯಣಗೌಡ
  • ಶ್ರೀಮಂತ್ ಪಾಟೀಲ್

ಇವರಲ್ಲಿ ರಮೇಶ್ ಜಾರಕಿಹೊಳಿ ಅವರು 3 ನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದವರಾಗಿದ್ದಾರೆ ಇನ್ನು ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.
ಇದಲ್ಲದೇ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಎಲ್ಲರಿಗಿಂತ ಮೊದಲು ಕುಟುಂಬ ಸಮೇತ ಆಗಮಿಸಿದವರಲ್ಲಿ ಮೊದಲಿಗರಾಗಿದ್ದು ಬಿಳಿ ವಸ್ತ್ರದ ಮೇಲೆ ಕಪ್ಪು ಕೋಟ್ ಹಾಕಿ ಮಿಂಚಿದರು.

ಇನ್ನು ಯಾರಿಗೆ ಯಾವ ಖಾತೆ ಹಂಚಲಿದ್ದಾರೆ ಎಂಬ ತೀರ್ಮಾನ ಯಡಿಯೂರಪ್ಪನವರು ದೆಹಲಿಯಲ್ಲಿ ಹೈಕಮಾಂಡ್ ಬೇಟಿ ನಂತರ ತಿಳಿದುಬರಲಿದೆ.
Leave a Reply

Your email address will not be published. Required fields are marked *