BREAKING NEWS
Search

ಯಡಿಯೂರಪ್ಪ ಸರ್ಕಾರದದಲ್ಲಿ ಪಾಲಾದ ಖಾತೆ! ಹಂಚಿಕೆ ಗೆ ಗರಂ ಆದ ಸಿ.ಟಿ ರವಿ

763

ಬೆಂಗಳೂರು: ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿ ವಾರ ಕಳೆದ ಬಳಿಕ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಇಂದು ಬಿಡುಗಡೆಯಾಗಿದೆ.

ಸಿಎಂ ಬಿಎಸ್​ವೈ ಸಂಪುಟದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ. ಯಾವೆಲ್ಲಾ ಸಚಿವರಿಗೆ, ಯಾವ ಖಾತೆ ದೊರೆಯಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

 1. ಆರ್.ಅಶೋಕ್ – ಕಂದಾಯ ಖಾತೆ
 2. ವಿ.ಸೋಮಣ್ಣ – ವಸತಿ, ನಗರಾಭಿವೃದ್ಧಿ ಖಾತೆ
 3. ಬಸವರಾಜ್‌ ಬೊಮ್ಮಾಯಿ – ಗೃಹ ಖಾತೆ
 4. ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ
 5. ಜಗದೀಶ್ ಶೆಟ್ಟರ್ – ಬೃಹತ್ & ಮಧ್ಯಮ ಕೈಗಾರಿಕೆ
 6. ಲಕ್ಷ್ಮಣ ಸವದಿ – ಸಾರಿಗೆ ಇಲಾಖೆ
 7. ಗೋವಿಂದ ಕಾರಜೋಳ – ಲೋಕೋಪಯೋಗಿ, ಸಮಾಜ ಕಲ್ಯಾಣ
 8. ಡಾ. ಅಶ್ವತ್ಥ್‌ ನಾರಾಯಣ – ಉನ್ನತ ಶಿಕ್ಷಣ & ಐಟಿ-ಬಿಟಿ
 9. ಜೆ.ಸಿ. ಮಾಧುಸ್ವಾಮಿ – ಕಾನೂನು & ಸಂಸದೀಯ, ಸಣ್ಣ ನೀರಾವರಿ
 10. ಬಿ. ಶ್ರೀರಾಮುಲು – ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ
 11. ಸುರೇಶ್ ಕುಮಾರ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
 12. ಪ್ರಭು ಚೌಹಾಣ್‌ – ಪಶು ಸಂಗೋಪನಾ ಖಾತೆ
 13. ಹೆಚ್. ನಾಗೇಶ್ – ಅಬಕಾರಿ
 14. ಸಿ.ಸಿ. ಪಾಟೀಲ್ – ಗಣಿ & ಭೂ ವಿಜ್ಞಾನ ಇಲಾಖೆ
 15. ಸಿ.ಟಿ. ರವಿ – ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
 16. ಕೋಟ ಶ್ರೀನಿವಾಸ ಪೂಜಾರಿ – ಮುಜರಾಯಿ, ಮೀನುಗಾರಿಕೆ, ಬಂದರು
 17. ಶಶಿಕಲಾ ಜೊಲ್ಲೆ- ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ

ಮೂವರಿಗೆ ಡಿಸಿಎಂ ಪಟ್ಟ

 1. ಗೋವಿಂದ ಕಾರಜೋಳ
 2. ಅಶ್ವಥ್​ ನಾರಾಯಣ
 3. ಲಕ್ಷ್ಮಣ್​ ಸವದಿ

ಸಿಎಂ ಬಳಿ ಉಳಿದ ಪ್ರಮುಖ ಖಾತೆಗಳು ಹೀಗಿವೆ:-

ಹಣಕಾಸು, ಸಹಕಾರ, ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ, ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಖಾತೆ.

ಖಾತೆ ಹಂಚಿಗೆ ಬೆನ್ನಲ್ಲೇ ಬಿನ್ನಮತ ಸ್ಪೋಟ!

ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಭಿನ್ನಮತ ಶುರುವಾಗಿದೆ. ತಮಗೆ ಉತ್ತಮ ಖಾತೆ ಸಿಗದ ಹಿನ್ನೆಲೆಯಲ್ಲಿ ಸಿ.ಟಿ.ರವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದಾರೆ.

ಸಿಎಂ ಬಿಎಸ್​ವೈ ಸಂಪುಟದ ಸಚಿವರ ಖಾತೆ ಹಂಚಿಕೆಯನ್ನು ಸೋಮವಾರ ರಾತ್ರಿ ಮಾಡಲಾಯಿತು. ಸಿಎಂ ಕಚೇರಿಯಿಂದ ಅಧಿಕೃತ ಪಟ್ಟಿ ಹೊರಬಿದ್ದ ಹಿನ್ನೆಲೆಯಲ್ಲಿ ಉತ್ತಮ ಖಾತೆಯ ನಿರೀಕ್ಷೆಯಲ್ಲಿದ್ದ ಸಚಿವ ಸಿ.ಟಿ.ರವಿ ಅವರಿಗೆ ಪ್ರವಾಸೋದ್ಯಮ ಜತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಕ್ಕಿದ್ದರಿಂದ ನಿರಾಶೆಯಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿರುವ ರವಿ ಅವರು ಸಮಾಜ ಕಲ್ಯಾಣ ಖಾತೆ ನೀಡುವ ಬಗ್ಗೆ ಸಿಎಂ ಕಡೆಯಿಂದ ‌ಮಾಹಿತಿಯಿತ್ತು. ಆದರೆ, ಪ್ರವಾಸೋದ್ಯಮ ಜತೆ ಕನ್ನಡ & ಸಂಸ್ಕೃತಿ ಇಲಾಖೆ ಖಾತೆ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮಗೆ ನೀಡಿರುವ ಸರ್ಕಾರಿ ಕಾರನ್ನು ವಾಪಸ್ಸು ಕಳುಹಿಸಿದ್ದಾರೆ ಎಂದು ಹೇಳಲಾಗಿದ್ದು ನಾಳೆ ಯಾವೆಲ್ಲಾ ಸಚಿವರು ಮುನಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Leave a Reply

Your email address will not be published. Required fields are marked *