BREAKING NEWS
Search

ರಾಜ್ಯ ಪೊಲೀಸರಿಗೆ ಗುಡ್ ನ್ಯೂಸ್|ವಾರದ ರಜೆ ಕಡ್ಡಾಯ.

756

ಬೆಂಗಳೂರು: ಪೊಲೀಸರಿಗೆ ವಾರದ ರಜೆ ಕಡ್ಡಾಯಗೊಳಿಸುವಂತೆ ಡಿಜಿ ಆಂಡ್ ಐಜಿಪಿ ಪ್ರವೀಣ್ ಸೂದ್​ ಸುತ್ತೋಲೆ ಹೊರಡಿಸಿದ್ದಾರೆ. ನಗರ ಪೊಲೀಸ್ ಆಯುಕ್ತರು, ಎಲ್ಲಾ ವಲಯಗಳ IGP ಮತ್ತು ಎಲ್ಲಾ ಎಸ್.ಪಿ ಗಳಿಗೆ ಈ ಸೂಚನೆ ನೀಡಿದ್ದಾರೆ.

ತುರ್ತು ಪರಿಸ್ಥಿತಿ ಬಿಟ್ಟು ಎಲ್ಲ ಸಂದರ್ಭದಲ್ಲಿ ವಾರದ ರಜೆ‌ ಕಡ್ಡಾಯವಾಗಿ ನೀಡಬೇಕು ಎಂದಿರುವ ಅವರು ಈ ಹಿಂದೆಯೂ ವಾರದ ರಜೆ ಕಡ್ಡಾಯಗೊಳಿಸುವಂತೆ ಆದೇಶ ನೀಡಲಾಗಿತ್ತು. ಆದ್ರೆ, ಕೆಲ ಸಿಬ್ಬಂದಿಗಳು ತಮಗೆ ಠಾಣಾಧಿಕಾರಿಗಳು ವಾರದ ರಜೆಯನ್ನ ನೀಡುತ್ತಿಲ್ಲ ​ಎಂದು DG & IGP ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದು ನೋವು ತೋಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅವರು ಕಡ್ಡಾಯವಾಗಿ ರಜೆ ನೀಡುವಂತೆ ವಲಯ IGP ಮತ್ತು ಜಿಲ್ಲಾ ಎಸ್.ಪಿ ಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!