ಪೊಲೀಸರಿಗೆ ಲಾಕ್ ಡೌನ್ ಕಂಟಕ!ಲಾಕ್ ಡೌನ್ ನಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ.ವಿವರ ನೋಡಿ.

392

ಲಾಕ್ ಡೌನ್ ಡ್ಯೂಟಿಯಲ್ಲಿರುವ ಪೊಲೀಸರನ್ನು ಕರೋನ ಮಹಾಮಾರಿ ಮತ್ತೊಮ್ಮೆ ಬಾಧಿಸಲು ಶುರು ಮಾಡಿದೆ.

ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಕರ್ತವ್ಯದಲ್ಲಿ ಹೆಚ್ಚು ಇದ್ದ ಪೊಲೀಸರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ. ಅದ್ರಲ್ಲೂ ಕೋವಿಡ್ ಲಸಿಕೆ ತೆಗೆದುಕೊಂಡ ಪೊಲೀಸ್ ಸಿಬ್ಬಂದಿಯಲ್ಲಿ ಕರೋನಾ ಕಾಣಿಸಿಕೊಂಡಿದ್ದು ಇದರ ರಿಪೋಟ್ ಇಲ್ಲಿದೆ.

ಶಿವಮೊಗ್ಗ ಜಿಲ್ಲೆಯ ಅಂಕಿ ಅಂಶ :-

ಶಿವಮೊಗ್ಗ ಜಿಲ್ಲೆಯ 51 ಪೊಲೀಸರಿಗೆ ಸೋಂಕು ತಗುಲಿದೆ. ಈ ಪೈಕಿ 48 ಮಂದಿ ಕೋವಿಡ್ ಲಸಿಕೆ ಪಡೆದಿದ್ದರು.

ಸದ್ಯ ಜಿಲ್ಲೆಯ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರವ 51 ಪೊಲೀಸರಿಗೆ ಕರೋನ ಪಾಸಿಟಿವ್ ಬಂದಿದೆ. ಈ ಪೈಕಿ 50 ಮಂದಿ ಹೋಂ ಐಸೊಲೇಷನ್‍ಗೆ ಒಳಗಾಗಿದ್ದಾರೆ. ಒಬ್ಬರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕಿ ಅಂಶ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ 144 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿತ್ತು.
ಆದ್ರೆ ಈ ವರ್ಷ ಲಾಕ್ ಡೌನ್ ನಂತರದಲ್ಲಿ ಸೋಂಕಿನ ಸಂಖ್ಯೆ ಹೆಚ್ವಾಗಿದೆ.

ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ಕೇವಲ ಒಂದು ಪಾಸಿಟಿವ್ ವರದಿಯಾಗಿದ್ದರೆ ,ಪೆಬ್ರವರಿಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಮಾರ್ಚ ನಲ್ಲಿ ಇಬ್ಬರಿಗೆ ಮಾತ್ರ ಪಾಸಿಟಿವ್ ವರದಿಯಾಗಿತ್ತು. ನಂತರ ಏಪ್ರಿಲ್ ತಿಂಗಳಲ್ಲಿ 22 ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ವರದಿಯಾಗಿದೆ.ಮೇ ತಿಂಗಳಲ್ಲಿ 81ಜನರಿಗೆ ಪಾಸಿಟಿವ್ ವರದಿಯಾಗಿದ್ದು ಆರು ಜನ ಗುಣಮುಖರಾಗಿದ್ದಾರೆ. ಸಕ್ರಿಯ 75 ಪ್ರಕರಣವಿದ್ದು ಎಲ್ಲರೂ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ 90% ಲಸಿಕೆ ನೀಡಲಾಗಿದೆ. 10 % ಲಸಿಗೆಯನ್ನು ಸಿಬ್ಬಂದಿಗಳು ನಾನಾ ಕಾರಣದಿಂದ ತೆಗೆದುಕೊಂಡಿಲ್ಲ. ಆದರೇ ಬಹುತೇಕರು ಲಸಿಕೆ ಪಡೆದವರಲ್ಲಿ ಕರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಲಸಿಕೆ ಪಡೆದುಕೊಂಡಿದ್ದರಿಂದ ಬಹುತೇಕರು ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಮರಣದ ಪ್ರಮಾಣ ಶೂನ್ಯವಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರಿಗೆ ಸೋಂಕು ತಗಲಲು ಕಾರಣಗಳಿವು:-

ಪೊಲೀಸರು ಅಂದಮೇಲೆ ಅವರಿಗೆ ಒತ್ತಡದ ಕೆಲಸಗಳು ಮಾಮೂಲು. ದಾರಿ ತಪ್ಪುವ ಜನರನ್ನ ಸಂಬಾಳಿಸುವಲ್ಲೇ ಬಿಪಿ ಷುಗರ್ ಗೆ ತುತ್ತಾಗುವ ಪೊಲೀಸರಿಗೆ ಈ ಬಾರಿ ಲಾಕ್ ಡೌನ್ ದೊಡ್ಡ ಹೊಡೆತ ಕೊಟ್ಟಿದೆ.

ಬಿಡುವಿಲ್ಲದ ಶ್ರಮದ ಕೆಲಸ,ಒತ್ತಡ ಒಂದುಕಡೆಯಾದರೇ ಪೊಲೀಸ್ ಇಲಾಖೆ ಮೇಲಾಧಿಕಾರಿಗಳ ಸಿಬ್ಬಂದಿಗಳ ಮೇಲಿನ ನಿರ್ಲಕ್ಷ ಪೊಲೀಸ್ ಸಿಬ್ಬಂದಿಗಳ ಬದುಕನ್ನ ಕತ್ತಲಾಗಿಸುತ್ತಿದೆ.

ದಾವಣಗೆರೆ ವಿಭಾಗ (ಶಿವಮೊಗ್ಗ)ಮಂಗಳೂರು ವಿಭಾಗ(ಉತ್ತರ ಕನ್ನಡ) ಈ ಎರಡು ವಿಭಾಗ ಗಮನಿಸಿದರೆ .ಶಿವಮೊಗ್ಗ ಜಿಲ್ಲೆಯ ಪೊಲೀಸರು ಅತ್ಯಂತ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ಇಲಾಖೆಯಿಂದ ಕೊವಿಡ್ ವಾರ್ಡ ಗಳ ಬಳಿ, ಹಾಗೂ ಇತರೆ ಭಾಗದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸ್ಯಾನಿಟೈಸ್ ,ರಕ್ಷಣಾ ಸಾಮಗ್ರಿಗಳನ್ನು ಅನುದಾನಗಳಿದ್ದರೂ ಬಿಡುಗಡೆ ಮಾಡಿಲ್ಲ. ಮಂಗಳೂರು ವಿಭಾಗದಲ್ಲಿ ಅನುದಾನ ಬಿಡುಗಡೆಯಾಗಿದ್ದು ಸಿಬ್ಬಂದಿಗಳಿಗೆ ರಕ್ಷಣಾ ಸಾಮಗ್ರಿ ಕೈಗೆ ಸಿಗುವಲ್ಲಿ ವಿಳಂಬವಾಗಿದೆ.

ಇನ್ನು ಪೊಲೀಸರು ಕರೋನಾ ಸೋಂಕು ತಡೆಗಟ್ಟಲು ಬಹುತೇಕ ಪಾಲಿಸಬೇಕಾದ ನಿಯಮಗಳನ್ನು ಪಾಲಿಸುತ್ತಿಲ್ಲ. ಹಲವು ಸಂದರ್ಭಗಳಲ್ಲಿ ನಿಯಮಗಳನ್ನು ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ಪೊಲೀಸರು ಸುರಕ್ಷಿತವಲ್ಲದ ಮಾಸ್ಕ ಧರಿಸುವುದು ಕಂಡುಬಂದಿದೆ. ಕರ್ತವ್ಯದ ಸಂದರ್ಭದಲ್ಲಿ ಜನರ ಮಧ್ಯೆ ಹೆಚ್ಚು ಇರುವುದರಿಂದ ಹಾಗೂ ಬಳಸಿದ ಸುರಕ್ಷಿತವಲ್ಲದ ಮಾಸ್ಕಗಳನ್ನೇ ಮರಳಿ ಬಳಸುತ್ತಿರುವುದು, ಸೊಂಕಿನ ಪ್ರದೇಶದಲ್ಲಿ ಕರ್ತವ್ಯ ಹೀಗೆ ಹಲವು ಕಾರಣಗಳು ಪೊಲೀಸರನ್ನ ಕರೋನ ಆವರಿಸುತ್ತಿದೆ.

ಒಟ್ಟಿನಲ್ಲಿ ಈ ಬಾರಿ ಪೊಲೀಸರಿಗೆ ಲಾಕ್ ಡೌನ್ ಸಂದರ್ಭದಲ್ಲೇ ಕರೋನಾ ಆವರಿಸುತ್ತಿರುವುದು ನಿಜವಾಗಿಯೂ ಆತಂಕಕಾರಿ ಬೆಳೆವಣಿಗೆ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ