BREAKING NEWS
Search

ರಾಜ್ಯದಲ್ಲೇ ಬಡ ಜಿಲ್ಲೆಯ ಪಟ್ಟಿಯಲ್ಲಿ 15 ನೇ ಸ್ಥಾನ ಪಡೆದ ಉತ್ತರ ಕನ್ನಡ,16 ನೇ ಸ್ಥಾನ ಪಡೆದ ಶಿವಮೊಗ್ಗ!ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?ವಿವರ ನೋಡಿ.

1410

ನವದೆಹಲಿ: ಕೇಂದ್ರ ನೀತಿ ಆಯೋಗ ಬಹು ಆಯಾಮದ ಬಡತನ ಸೂಚ್ಯಂಕ ವರದಿ ಪ್ರಕಟವಾಗಿದೆ. ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಭಾರತದಲ್ಲೇ ಅತಿ ಬಡವರನ್ನು ಹೊಂದಿರುವ ರಾಜ್ಯ ಎಂಬ ಹಣೆಪಟ್ಟಿಗೆ ಭಾಜನವಾಗಿದ್ದರೆ ಪಟ್ಟಿಯಲ್ಲಿ ಕರ್ನಾಟಕ 19ನೇ ಸ್ಥಾನವನ್ನು ಪಡೆದಿದೆ.

ಸೂಚ್ಯಂಕ ಪಟ್ಟಿಯಲ್ಲಿ ಬಿಹಾರ ಮೊದಲ ಸ್ಥಾನ ಪಡೆದಿದೆ. ಇಲ್ಲಿನ ಜನಸಂಖ್ಯೆಯಲ್ಲಿ 51.91% ಬಡವರಿದ್ದಾರೆ. ನಂತರದ ಸ್ಥಾನಗಳನ್ನು ಪಡೆದ ಜಾರ್ಖಂಡ್ 42.16%, ಉತ್ತರ ಪ್ರದೇಶ 37.79%, ಮಧ್ಯಪ್ರದೇಶ 36.65% ಹಾಗೂ ಮೇಘಾಲಯದಲ್ಲಿ 32.67% ಬಡವರನ್ನು ಹೊಂದಿದೆ.

ಕೇರಳ ರಾಜ್ಯ ಅತಿ ಕಡಿಮೆ ಬಡವರನ್ನು ಹೊಂದಿರುವ ಪಟ್ಟಿಗೆ ಸೇರಿದೆ. ಕೇರಳದ ಒಟ್ಟು ಜನಸಂಖ್ಯೆಯಲ್ಲಿ 0.71ರಷ್ಟು ಮಾತ್ರ ಬಡವರಿದ್ದಾರೆ. ನಂತರದ ಸ್ಥಾನಗಳನ್ನು ಗೋವಾ (3.76%), ಸಿಕ್ಕಿಂ(3.82%), ತಮಿಳುನಾಡು(4.89%), ಹಾಗೂ ಪಂಜಾಬ್ (5.59%) ಪಡೆದುಕೊಂಡಿದೆ.

ಬಡತನ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ 19ನೇ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ 13.16% ರಷ್ಟು ಬಡವರಿದ್ದಾರೆ. ಕರ್ನಾಟಕ ಜಿಲ್ಲೆಗಳಲ್ಲಿ ಯಾದಗಿರಿ ಅತಿ ಹೆಚ್ಚು ಬಡವರನ್ನು ಹೊಂದಿರುವ ಜಿಲ್ಲೆಯಾಗಿದೆ. ನಂತರದ ಸ್ಥಾನಗಳಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಿವೆ. ಹಾಗೆಯೇ ಶ್ರೀಮಂತ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದ್ದರೇ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.

ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?


ನಂ.1 ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ 41.67%ರಷ್ಟು ಜನರು ಬಡವರಾಗಿದ್ದಾರೆ. ನಂತರದ ಸ್ಥಾನಗಳಲ್ಲಿರುವ ರಾಯಚೂರು (32.19%), ಕೊಪ್ಪಳ (24.6%), ಹೊಸದಾಗಿ ಸ್ಥಾಪನೆಯಾದ ವಿಜಯನಗರ ಜಿಲ್ಲೆ ಸೇರಿದಂತೆ ಬಳ್ಳಾರಿ(23.4%), ಬಿಜಾಪುರ(22.4%) ಕಲಬುರಗಿ (21.8%), ಗದಗ (20.27%), ಬಾಗಲಕೋಟೆ (20.23%), ಬೀದರ್ (19.42%), ಚಾಮರಾಜನಗರ (18.91%), ಚಿತ್ರದುರ್ಗ (15.79%), ಹಾವೇರಿ (15.61%), ಚಿಕ್ಕಬಳ್ಳಾಪುರ (15.16%), ತುಮಕೂರು (14.00%), ಉತ್ತರಕನ್ನಡ(13.21%), ಶಿವಮೊಗ್ಗ (12.72%), ಬೆಳಗಾವಿ (12.26%), ದಾವಣಗೆರೆ (11.71%), ಚಿಕ್ಕಮಗಳೂರು(11.19%), ಉಡುಪಿ(10.32%), ಕೋಲಾರ (10.30%), ಧಾರವಾಡ (9.65%), ರಾಮನಗರ (8.77%), ಕೊಡಗು (8.74%), ಬೆಂಗಳೂರು ಗ್ರಾಮಾಂತರ(8.39%), ಮೈಸೂರು(7.79%), ದಕ್ಷಿಣಕನ್ನಡ (6.69%), ಹಾಸನ(6.64%), ಮಂಡ್ಯ(6.62%), ಬೆಂಗಳೂರು (2.31) ಬಡವರಿದ್ದಾರೆ.

 ಮಾನದಂಡ ಏನು?


ಜಾಗತಿಕ ಮನ್ನಣೆ ಪಡೆದ ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ ಹಾಗೂ ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆಯ ಸಮೀಕ್ಷಾ ಮಾನದಂಡವನ್ನು ಅನುಸರಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ ಎಂದು ನೀತಿ ಆಯೋಗ ತಿಳಿಸಿದೆ.
ಇದನ್ನೂ ಓದಿ: https://kannadavani.news/uttarakannada-dc-covid-strict-action-kannada-news/

ಆರೋಗ್ಯ, ಶಿಕ್ಷಣ ಹಾಗೂ ಜೀವನ ಮಟ್ಟವನ್ನು ಆಧರಿಸಿ ಬಡತನವನ್ನು ಅಳೆಯಲಾಗಿದೆ. ಇವುಗಳಲ್ಲಿ ಪೌಷ್ಟಿಕತೆ, ಶಿಶು ಮರಣ, ಕುಡಿಯುವ ನೀರು, ನೈರ್ಮಲ್ಯ, ವಿದ್ಯುತ್, ಬ್ಯಾಂಕ್ ಖಾತೆ ಇತ್ಯಾದಿಗಳನ್ನು ಒಳಗೊಂಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!