ಈ ಬಾರಿಯ ಬಿಜೆಪಿ ರಾಜ್ಯಸಭಾ ಟಿಕೆಟ್ ಯಾರಿಗೆ ಗೊತ್ತಾ!

978

ಕನ್ನಡವಾಣಿ ಡೆಸ್ಕ್:- ಬಿಜೆಪಿ ಯಲ್ಲಿ ರಾಜ್ಯಸಭೆ ಟಿಕೆಟ್ ಗಾಗಿ ತಿಕ್ಕಾಟಕ್ಕೆ ಇದೀಗ ಬ್ರೇಕ್ ಬಿದ್ದಿದೆ.

ಒಂದು ಸೀಟಿಗೆ ಮಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರು ಗಟ್ಟಿ ಆಗಿರುವ ಸುದ್ದಿಗಳು ಕೋರ್ ಕಮಿಟಿ ಸಭೆ ಯಿಂದ ಬರುತ್ತಿದ್ದರೆ. ಎರಡನೇ ಸ್ಥಾನಕ್ಕಾಗಿ ಕತ್ತಿ – ಕೋರೆ ಮಧ್ಯೆ ನಿಕಾಲಿ ಕುಸ್ತಿ ಮುಂದುವರೆದಿತ್ತು.


ಆಂತರಿಕ ಭಿನ್ನಾಭಿಪ್ರಾಯದ ಒಂದು ಭಾಗವಾಗಿ ರಮೇಶ್ ಕತ್ತಿ ಗೆ ರಾಜ್ಯಸಭೆ ಯ ಟಿಕೆಟ್ ಬೇಡಿಕೆ ಬಂದಿತ್ತು. ಇದು ಎಷ್ಟು ಪ್ರಬಲ ಬೇಡಿಕೆಯಾಗಿತ್ತು ಅಂದರೆ ಲಿಂಗಾಯತ ಸಮುದಾಯದ ಅತಿ ದೊಡ್ಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾದ ಪ್ರಭಾಕರ್ ಕೋರೆ ಯ ಸಂಸತ್ತಿನ ಸ್ಥಾನಕ್ಕೆ ಸಂಚಕಾರ ತಂದಿಟ್ಟಿದೆ.ಬೆಳಗಾವಿಯ ರಾಜಕಾರಣ ದ ಕುಸ್ತಿ ಮೋದಿ – ಶಾ ಎದುರಿಗೆ ಪೇಚು ಹಾಕುತಿತ್ತು.


೧೮ ವರುಷ ರಾಜ್ಯಸಭೆ, ಒಂದು ಬಾರಿ ಲೋಕಸಭೆ, ಒಂದು ವಿಧಾನ ಪರಿಷತ್ ಇಷ್ಟೆಲ್ಲ ಅವಕಾಶ ಸಿಕ್ಕರೂ, ಅದೇಕೋ ಕೋರೆ ಗೆ ಮಂತ್ರಿ ಆಗುವ ಯೋಗ ಒದಗಿ ಬರಲಿಲ್ಲ. ಈ ಹಿಂದೆ ಕೆ.ಎಲ್. ಇ ಸಂಸ್ಥೆ ಯ ವಕೀಲ ರಾಗಿದ್ದ ಹಿರಿಯ ನಾಯಕ ಅರುಣ್ ಜೇಟ್ಲಿ, ಯಾವಾಗಲೂ ಕೋರೆ ಗೆ ಸಾಥ್ ನೀಡುತ್ತಿದ್ದರು.

ಹೀಗಾಗಿ ಜೇಟ್ಲಿ ಇರುವ ವರೆಗೂ ಕೋರೆ ದೆಹಲಿ ಯ ಸ್ಥಾನಕ್ಕೆ ಯಾರು ಪಿಟ್ ಎನ್ನಲಿಲ್ಲ. ಈಗ ಕೋರೆ ದೆಹಲಿ ಲಾಬಿ ಬಲ ಬಿದ್ದಿದೆ.ಇದನ್ನೇ ಅರ್ಥ ಮಾಡಿಕೊಂಡ ಕತ್ತಿ ಸಹೋದರ ರೂ ತಮ್ಮ ವರಸೆ ಶುರು ಹಚ್ಚಿಕೊಂಡಿದ್ದಾರು.ತಮ್ಮ ರಾಜಕೀಯ ಜೀವನದ ಬಹುತೇಕ ಕೊನೆಯ ಇನಿಂಗ್ಸ್ ಆಡುತ್ತಿರುವ ಯಡಿಯೂರಪ್ಪ ಇವರನ್ನೆಲ್ಲ ದೆಹಲಿ ನಾಯಕರೇ ಸಂಭಾಲಿಸಲಿ ಎಂದು ಕೈ ಎತ್ತಿದ್ದರು. ಕಷ್ಟಕಾಲದಲ್ಲಿ ಜೊತೆ ನಿಂತ ಕೋರೆ ನೂ ದೂರ ಮಾಡುವ ಹಾಗಿಲ್ಲ.

ಈ ಸರಕಾರ ಉಳಿದಿರುವ ಅವಧಿ ಪೂರ್ಣ ಆಗಬೇಕಾದರೆ ಕತ್ತಿ ಬಿಟ್ಟುಕೊಡುವ ಹಾಗೇನೂ ಇಲ್ಲ.ಒಟ್ಟಾರೆ ಯಡಿಯೂರಪ್ಪ ಅವರದ್ದು ದ್ವಂದ್ವ ಪರಿಸ್ಥಿತಿಯಲ್ಲಿದ್ದರು.

ಆದರೆ ಯಡಿಯೂರಪ್ಪ ನಂತರದ ಲಿಂಗಾಯತ ನಾಯಕತ್ವದ ಹುಡುಕಾಟ ನಡೆಸಿರುವ ಆರ್ ಎಸ್ ಎಸ್ ಮತ್ತು ಬಿಜೆಪಿ ಗೆ ಕತ್ತಿ ಕೋರೆ ಜಗಳ ಒಂದು ಅವಕಾಶ ಒದಗಿಸಿತ್ತು. ಈಗ ಬಿಜೆಪಿ ಎಲ್ಲರಿಗೂ ಶಾಕ್ ನೀಡಿದ್ದು ಈ ಬಾರಿಯ ಟಿಕೆಟ್ ಅನ್ನು ಅಶೋಕ್ ಗಸ್ತಿ, ಈರಣ್ಣ ಕಡಾಡಿ ಎಂಬ ಬಿಜಿಪಿ ಯ ಕಟ್ಟಾ ಕಾರ್ಯಕರ್ತರಿಗೆ ನೀಡಿ ಶಾಕ್ ನೀಡಿದೆ.

ಆಂತರಿಕ ವಲಯದಿಂದ ಬರುತ್ತಿರುವ ವರ್ತಮಾನ ಗಳ ಪ್ರಕಾರ ಕತ್ತಿ ಕೋರೆ ಇಬ್ಬರಿಗೂ ಹಿರಿ ಮನೆಯ ಪ್ರವೇಶದ ಕನಸಿಗೆ ತಣ್ಣೀರು ಬಿಟ್ಟಂತಾಗಿದೆ. ಈ ಇಬ್ಬರ ಹೊರತಾಗಿ ಮತ್ತೊಬ್ಬ ಲಿಂಗಾಯತ ನಾಯಕ ಹಿರಿಮನೆಗೆ ಹೋಗುವ ಎಲ್ಲ ಸಾಧ್ಯತೆ ಗಳು ಇದ್ದವು. ಯತ್ನಾಳ್, ಶೆಟ್ಟರ್, ನಿರಾಣಿ, ಅಂಗಡಿ ಮುಂತಾದ ಲಿಂಗಾಯತ ಸಮುದಾಯದ ನಾಯಕರು ಬಿಜೆಪಿ ಯಲ್ಲಿ ಇದ್ದರೂ ತಮ್ಮ ಪ್ರಭಾ ವಲಯದ ವಿಸ್ತಾರ ಇವರುಗಳು ಮಾಡಿಕೊಳ್ಳಲೇ ಇಲ್ಲ.

ಈ ಎಲ್ಲ ಕಾರಣ ಗಳಿಂದ ರಾಜ್ಯ ಸಭೆ ಚುನಾವಣೆ ಯಾನ್ನು ಬಿಜೆಪಿ ಒಂದು ಅವಕಾಶ ಆಗಿ ಬಳಸಿಕೊಳ್ಳುವ ಮೂಲಕ ಚದುರಂಗದಾಟ ಆಡಿದೆ. ಯಾರದ್ದೋ ಜಗಳ ಯಾರಿಗೋ ಲಾಭ ಅನ್ನುವುದು ಇದಕ್ಕೆ ಅಲ್ಲವೇ.

ಇನ್ನು ಈ ಬಾರಿಯ ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಕರ್ಗೆ ,ಜೆಡಿಎಸ್ ನಿಂದ ಹೆಚ್.ಡಿ ದೇವೇಗೌಡ ಸ್ಪರ್ಧೆಗೆ ಇಳಿದಿದ್ದು ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ