ಉತ್ತರ ಕನ್ನಡ,ಶಿವಮೊಗ್ಗ ಸೇರಿ ರಾಜ್ಯದಲ್ಲಿ ಹೆಚ್ಚಾದ ಕರೋನಾ ಫಾಸಿಟಿವ್!

1629

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಹಳಿಯಾಳ,ಕಾರವಾರದಲ್ಲಿ ಸೇರಿ ಎರಡು ಕರೋನಾ ಫಾಸಿಟಿವ್ ಪ್ರಕರಣ ವರದಿಯಾಗಿದೆ.
14 ವರ್ಷದ ಬಾಲಕ ಹಾಗೂ 24 ವರ್ಷದ ಮಹಿಳೆಗೆ ಕರೋನಾ ಫಾಸಿಟಿವ್ ದೃಡಪಟ್ಟಿದೆ.
ಕತಾರ್ ನಿಂದ ಮಹಾರಾಷ್ಟ್ರ ಕ್ಕೆ ಬಂದಿದ್ದ ಪಿ.5000 ಸಂಖ್ಯೆಯ ವ್ಯಕ್ತಿಯ ಸಂಪರ್ಕ ಹೊಂದಿದ ಮಹಿಳೆ ಹಾಗೂ ಕೇರಳದಿಂದ ಮರಳಿ ಜಿಲ್ಲೆಯ ಹಳಿಯಾಳಕ್ಕೆಬಂದಿದ್ದ ಬಾಲಕನಲ್ಲಿ ಫಾಸಿಟಿವ್ ವರದಿಯಾಗಿದೆ.

ಜಿಲ್ಲಾಡಳಿತ ಸೊಂಕಿತರನ್ನು ಮೊದಲೇ ಕ್ವಾರಂಟೈನ್ ಮಾಡಿತ್ತು. ಪ್ರಸ್ತುತ 23 ಸಕ್ರಿಯ ಪ್ರಕರಣಗಳಿದ್ದು
ಬಿಡುಗಡೆ ಗೊಂಡ 73 ಮಂದಿ ಸೇರಿ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 96 ಕ್ಕೆ ಏರಿಕೆಯಾಗಿದೆ.

ಶಿವಮೊಗ್ಗದಲ್ಲಿ ಮತ್ತೆ 12 ಕೊರೋನ ಪಾಸಿಟಿವ್ ಪತ್ತೆ !

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ 12 ಕೊರೊನಾ ಸೋಂಕು ಪತ್ತೆ ಯಾಗಿದೆ. ಇದರಿಂದ ಕೊರೋನ ಪಾಸಿಟಿವ್ ಸಂಖ್ಯೆ 65 ಕ್ಕೆ ಏರಿದೆ.

12 ಜನರೂ ಸಹ ಮಹಾರಾಷ್ಟ್ರ ದಿಂದ ಬಂದವರು ಎಂದು ಹೇಳಲಾಗುತ್ತಿದ್ದು ಇವರೆಲ್ಲಾ ಜೂ.3, 4 ಹಾಗೂ 5 ರಂದು ಶಿವಮೊಗ್ಗಕ್ಕೆ ಬಂದು ಹೋಟೆಲ್ ಹಾಗೂ ವಸತಿ ನಿಲಯದಲ್ಲಿ ಕ್ವಾರಂಟೈನ್ ನಲ್ಲಿ ಇದ್ದವರು ಎಂದು ಹೇಳಲಾಗುತ್ತಿದೆ.

ಶಿಕಾರಿಪುರ ತಾಲೂಕಿನ 5ಸೊರಬ ತಾಲೂಕಿನ 3 ಹೊಸನಗರ ತಾಲೂಕಿನ 4 ಜನರಿಗೆ ಸೋಂಕು ಪತ್ತೆಯಾಗಿದೆ. ಸೋಂಕು ಪತ್ತೆ ಹಿನ್ನಲೆ 12 ಜನರನ್ನು ಶಿವಮೊಗ್ಗ ದ ಕೊವಿಡ್ ಆಸ್ಪತ್ರೆಯಾಗಿರುವ ಮೆಗ್ಗಾನ್ ಗೆ ದಾಖಲಾಗಿದ್ದಾರೆ.

65 ಕೊರೋನ ಪಾಸಿಟಿವ್ ನಲ್ಲಿ 28 ಜನ ಈಗಾಗಲೇ ಕೊರೋನದಿಂದ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ. ಇದರಲ್ಲಿ 37 ಜನ ಇನ್ನೂ ಚಿಕಿತ್ಸೆಯಲ್ಲಿರುವುದಾಗಿ ಹೆಲ್ತ್ ಬುಲಿಟಿನ್ ನಿಂದ ತಿಳಿದುಬಂದಿದೆ.

ಇಂದಿನ ರಾಜ್ಯ ಹೆಲ್ತ್ ಬುಲಟಿನ್ !
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ