BREAKING NEWS
Search

ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆಯಲ್ಲಿ ಶತಕ ದಾಟಿದ ಕರೋನಾ! ಸಭೆ ಸಮಾರಂಭ ಸೇರಿದಂತೆ ಕಾರ್ಯಕ್ರಮಗಳಿಗೆ ನಿರ್ಬಂಧ!

1677

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 139 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಕಾರವಾರದಲ್ಲಿ 74 ವರ್ಷದ ವೃದ್ಧೆ ಕರೋನಾ ಕ್ಕೆ ಬಲಿಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಇಂದಿನ ತಾಲೂಕುವಾರು ವಿವರ ಈ ಕೆಳಗಿನಂತಿದೆ:-

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 146 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ತಾಲೂಕುವಾರು ವಿವರ ಈ ಕೆಳಗಿನಂತಿದೆ.

ಕರೋನಾ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ ಜಾರಿ ಹೊಸ ನಿಯಮಗಳೇನು ವಿವರ ನೋಡಿ

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕರೋನಾ ಪಾಸಿಟಿವ್ ವರದಿ ಹೆಚ್ಚಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರು ಆದೇಶ ಮಾಡಿದ್ದು ,ಈ ಆದೇಶದಂತೆ ಮದುವೆ ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 200 ಮೀರದಂತೆ ಹಾಗೂ ಕಲ್ಯಾಣ ಮಂಟಪ ಇತರೆ ಪ್ರದೇಶದಲ್ಲಿ 100 ಮೀರದಂತೆ ನಡೆಸಬೇಕು.
ಜನ್ಮದಿನ ಹಾಗೂ ಇತರೆ ಕಾರ್ಯಕ್ರಮವನ್ನು ಹೊರಭಾಗದಲ್ಲಿ 50 ಹಾಗೂ ಮುಚ್ಚಿದ ಪ್ರದೇಶದಲ್ಲಿ 25 ಜನ ಮೀರದಂತೆ ಆಚರಿಸಬೇಕು.
ನಿಧನ /ಶವಸಂಸ್ಕಾರ -50 ತೆರೆದ ಪ್ರದೇಶ ,25 ಒಳಾಂಗಣ ಹಾಗೂ ಅಂತ್ಯ ಕ್ರಿಯೆಗೆ 25 ಜನ ಮೀರದಂತೆ ನಡೆಸಬೇಕು. ಇತರೆ ಸಮಾರಂಭಗಳು -50 ಮೀರದಂತೆ (ಹಾಲ್ ವಿಸ್ತೀರ್ಣ ಕ್ಕೆ ಅನುಗುಣವಾಗಿ ),ಧಾರ್ಮಿಕ ಸಭೆ ,ಆಚರಣೆಗಳನ್ನು ನಿಷೇಧಿಸಲಾಗಿದೆ,ರಾಜಕೀಯ ಸಮಾರಂಭ/ಸಭೆ -200 ಮೀರದಂತೆ ನಡೆಸಬೇಕು.

ಕಠಿಣ ಕ್ರಮ !

ಮಧುವೆ ಸಮಾರಂಭಗಳಿಗೆ ಮುಂದಿನ ದಿನದಲ್ಲಿ ಪಾಸ್ ಗಳನ್ನು ಕಡ್ಡಾಯ ಗೊಳಿಸಲು ಸೂಚಿಸಲಾಗಿದೆ. ಒಂದುವೇಳೆ ಇಂತಹ ಕಾರ್ಯಕ್ರಮಗಳಲ್ಲಿ ಸೋಂಕು ಹರಡಿದಲ್ಲಿ ಇದಕ್ಕೆ ಜಿಲ್ಲಾಧಿಕಾರಿ,ರಕ್ಷಣಾಧಿಕಾರಿ ಹೊಣೆ ಮಾಡಿ ಕಠಿಣ ಕ್ರಮ ಜಾರಿ ಮಾಡಲು ಸೂಚಿಸಲಾಗಿದೆ.

ಸಚಿವ ಆರ್.ಅಶೋಕ್ ಹೇಳಿದ್ದೇನು?

ಇಂದಿನ ಸಭೆಯಲ್ಲಿ ಗೃಹ ಸಚಿವರು, ಚೀಫ್ ಸೆಕ್ರೆಟರಿ, ಹೆಲ್ತ್ ಸೆಕ್ರೆಟರಿ ಸೇರಿ ಎಲ್ಲ ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಬಹಳಷ್ಟು ಕಠಿಣ ನಿಲುವು ತೆಗೆದುಕೊಂಡಿದ್ದೇವೆ,

ಯಾವುದೇ ಜಾತ್ರೆ ಕಾರ್ಯಕ್ರಮ ನಡೆಯುವುದಕ್ಕೆ ಅವಕಾಶ ಇಲ್ಲ, ನಡೆದರೆ ಅದಕ್ಕೆ ಡಿಸಿ ಅಧಿಕಾರಿಗಳು ಜವಾಬ್ದಾರಿ ಮಾಡುತ್ತೇವೆ.

ಒಂದು ತಿಂಗಳ ಮೊದಲೇ ಸ್ಥಳ ಪರಿಶೀಲನೆ ಮಾಡಿ ನಿರ್ಬಂಧಿಸಬೇಕು, ಮದುವೆ ಕಾರ್ಯಕ್ರಮಕ್ಕೆ ಪಾಸ್ ಕೊಡಬೇಕು, ಸಂಬಂಧಪಟ್ಟ ವ್ಯಾಪ್ತಿ ಪೊಲೀಸ್ ಸ್ಟೇಷನ್ ಗಳಿಗೆ ಮಾಹಿತಿ ನೀಡಬೇಕಿ. ಇಲ್ಲದಿದ್ದರೆ ಕಲ್ಯಾಣ ಮಂಟಪ ಮುಚ್ಚಿಸಲಾಗುವುದು.

ಯಾವುದೇ ಕಾರಣಕ್ಕೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಶಾರ್ಟೇಜ್ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚುವರಿ ಬೆಡ್ ಗಳಿಗೆ ಬೇಕಾದ ವ್ಯವಸ್ಥೆ ಈಗಲೇ ಮಾಡಿಕೊಳ್ಳಲು ಸೂಚಿಸಲಾಗಿದೆ.

ಡಾಟಾ ಆಪರೇಟರ್ ಶಾರ್ಟೇಜ್ ಆಗಬಾರದು, ಈಗಲೇ ನೇಮಲ ಮಾಡಿಕೊಳ್ಳಲು ಅಧಿಕಾರ ಡಿಸಿಗಳಿಗೆ ಕೊಟ್ಟಿದ್ದೇವೆ,ಸೋಮವಾರ ಜಿಲ್ಲೆಗಳಿಗೆ ಕೋವಿಡ್ ನಿರ್ವಹಣೆಗೆ ಹಣ ಬಿಡುಗಡೆ ಮಾಡಲಾಗುತ್ತದೆ.

ಶವ ಸಂಸ್ಕಾರ ಗೌರವಯುತವಾಗಿ ಆಗಬೇಕು
ಹೂಳುವುದರಲ್ಲಿ ಸುಡುವುದರಲ್ಲಿ ಯಾವುದೇ ತೊಂದರೆ ಆಗಬಾರದು, ಕೆಲವು ದೇಶದಲ್ಲಿ ಮೂರನೇ ಅಲೆ ಬಂದಿದೆ. ವಿಕೋಪಕ್ಕೆ ಹೋಗದಂತೆ ಬಹಳ ಎಚ್ಚರಿಕೆಯಿಂದ ವ್ಯಾಕ್ಸಿನೇಷನ್ ಟೆಸ್ಟ್ ಮಾಡಿದರೆ ಕಂಟ್ರೋಲ್ ಮಾಡಬಹುದು,ವಾರ್ ಫೂಟಿಂಗ್ ನಲ್ಲಿ ಕೆಲಸ ಮಾಡಬೇಕು,ಯಾವ ಯಾವ ಜಾತ್ರೆ ನಿರ್ಬಂಧ ವಿಧಿಸಿದ್ದೀರಾ, ಕಲ್ಯಾಣ ಮಂಟಪ‌ ಮುಚ್ಚಿಸಿದ್ದೀರಾ ಎಂಬ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಬಳಿ ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದು.

ಬೆಂಗಳೂರಿಗೆ ಸಂಬಂಧಿಸಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮಾಡಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸದ್ಯ ಲಾಕ್ ಡೌನ್ ,ನೈಟ್ ಕರ್ಫ್ಯೂ ಬಗ್ಗೆ ಸೋಮವಾರ ತೀರ್ಮಾನ ಕೈಗೊಳ್ಳಲಾಗುವು ಎಂದಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!