ಉತ್ತರಕನ್ನಡಕ್ಕೆ ಹೆಬ್ಬಾರ್ ಸರದಾರ-ಯಾವ ಜಿಲ್ಲೆಗೆ ಯಾರಿಗೆ ಉಸ್ತುವಾರಿ ಪಟ್ಟ ಗೊತ್ತಾ?

973

ಬೆಂಗಳೂರು:- ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ಸೋಂಕು ನಿವಾರಣೆಗೆ ಜಿಲ್ಲೆಗಳಲ್ಲಿ ಇದ್ದು ಜಿಲ್ಲಾಡಳಿತದೊಂದಿಗೆ ಕಾರ್ಯ ನಿರ್ವಹಣೆ ಮಾಡುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇಮಕ ಮಾಡಿದ್ದಾರೆ.

ಬೆಂಗಳೂರು ನಗರದ ಉಸ್ತುವಾಗಿರಿಯನ್ನೇ ಯಡಿಯೂರಪ್ಪ ಅವರೇ ವಹಿಸಿಕೊಂಡಿದ್ದು, ಕೆಲ ಸಚಿವರಿಗೆ ಹಿಂದೆ ಇದ್ದಂತೆ ಎರಡು ಜಿಲ್ಲೆಗಳ ಉಸ್ತುವಾರಿ ಮುಂದುವರಿಸಿದ್ದಾರೆ. ಕೆಲವರನ್ನು ಬದಲಿಸಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.

ಮಂಡ್ಯ ಜಿಲ್ಲೆ ಉಸ್ತುವಾರಿಯನ್ನು ಆರ್. ಅಶೋಕ್ ಬದಲಿಗೆ ನಾರಾಯಣಗೌಡ ಅವರಿಗೆ ನೀಡಲಾಗಿದೆ. ಸೋಮಣ್ಣ ಅವರನ್ನು ಕೇವಲ ಕೊಡಗಿಗೆ ಸೀಮಿತ ಮಾಡಿ ಎಸ್.ಟಿ.ಸೋಮಶೇಖರ್ ಅವರಿಗೆ ಮೈಸೂರಿನ ಹೊಣೆ ವಹಿಸಲಾಗಿದೆ. ಶಶಿಕಲಾ ಜೊಲ್ಲೆ ಅವರನ್ನು ಉತ್ತರ ಕನ್ನಡದಿಂದ ವಿಜಯಪುರಕ್ಕೆ ವರ್ಗಾವಣೆ ಮಾಡಲಾಗಿದ್ದು ಆ ಸ್ಥಾನವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಗೆ ನೀಡಲಾಗಿದೆ.

ಅಶ್ವತ್ಥನಾರಾಯಣ್ ಹಾಗೂ ಸುಧಾಕರ್ ನಡುವೆ ಉಸ್ತುವಾರಿಗೆ ನಡೆದಿದ್ದ ಜಿದ್ದಾಜಿದ್ದಿಗೆ ಕೊನೆಗಾಣಿಸಲಾಗಿದ್ದು ಲಕ್ಷ್ಮಣ ಸವದಿ ಹಿಡಿತದಲ್ಲಿದ್ದ ಬಳ್ಳಾರಿಯ ಉಸ್ತುವಾರಿಯನ್ನು ಆನಂದಸಿಂಗ್ ಅವರಿಗೆ ನೀಡಲಾಗಿದೆ.

ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾದವರ ಪೈಕಿ ರಮೇಶ್ ಜಾರಕಿಹೊಳಿ, ಗೋಪಾಲಯ್ಯ ಹಾಗೂ ಶ್ರೀಮಂತ ಪಾಟೀಲ್ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಸಿಕ್ಕಿಲ್ಲ.

ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಪಟ್ಟಿ ಇಲ್ಲಿದೆ.

ಬಿ.ಎಸ್.ಯಡಿಯೂರಪ್ಪ-ಬೆಂಗಳೂರು
ಡಾ.ಸಿ.ಎನ್.ಅಶ್ವತ್ಥನಾರಾಯಣ- ರಾಮನಗರ
ಲಕ್ಷ್ಮಣ ಸವದಿ- ರಾಯಚೂರು
ಗೋವಿಂದ ಕಾರಜೋಳ-ಬಾಗಲಕೋಟೆ, ಕಲಬುರಗಿ
ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ
ಆರ್.ಅಶೋಕ್- ಬೆಂಗಳೂರು ಗ್ರಾಮಾಂತರ
ಜಗದೀಶ ಶೆಟ್ಟರ್- ಬೆಳಗಾವಿ, ಧಾರವಾಡ
ಬಿ.ಶ್ರೀರಾಮುಲು- ಚಿತ್ರದುರ್ಗ
ಎಸ್. ಸುರೇಶ್‌ಕುಮಾರ್- ಚಾಮರಾಜನಗರ
ವಿ.ಸೋಮಣ್ಣ- ಕೊಡಗು
ಸಿ.ಟಿ.ರವಿ- ಚಿಕ್ಕಮಗಳೂರು
ಬಸವರಾಜ ಬೊಮ್ಮಾಯಿ- ಹಾವೇರಿ, ಉಡುಪಿ
ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ
ಜೆ.ಸಿ. ಮಾಧುಸ್ವಾಮಿ- ತುಮಕೂರು, ಹಾಸನ
ಸಿ.ಸಿ. ಪಾಟೀಲ್-ಗದಗ
ಎಸ್. ನಾಗೇಶ್- ಕೋಲಾರ
ಪ್ರಭು ಚವ್ಹಾಣ್- ಬೀದರ್, ಯಾದಗಿರಿ
ಶಶಿಕಲಾ ಜೊಲ್ಲೆ- ವಿಜಯಪುರ
ಶಿವರಾಮ ಹೆಬ್ಬಾರ್- ಉತ್ತರ ಕನ್ನಡ
ಎಸ್.ಟಿ. ಸೋಮಶೇಖರ್- ಮೈಸೂರು
ಡಾ. ಕೆ. ಸುಧಾಕರ್- ಚಿಕ್ಕಬಳ್ಳಾಪುರ
ಕೆ.ಸಿ. ನಾರಾಯಣಗೌಡ- ಮಂಡ್ಯ
ಆನಂದಸಿಂಗ್- ಬಳ್ಳಾರಿ
ಬಿ.ಎ. ಬಸವರಾಜು- ದಾವಣಗೆರೆ
ಬಿ.ಸಿ. ಪಾಟೀಲ್- ಕೊಪ್ಪಳ

ಹೆಬ್ಬಾರ್ ಗೆ ಪ್ರಾಯಾಸದ ನಂತರ ಒಲಿದ ಸ್ವ ಜಿಲ್ಲೆ ಉಸ್ತುವಾರಿ!

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆಲುವನ್ನ ಪಡೆದ ನಂತರ ಹಲವು ದಿನಗಳ ನಂತರದ ಪ್ರಾಯಾಸದ ನಂತರ ಶಿವರಾಮ್ ಹೆಬ್ಬಾರ್ ರವರಿಗೆ ಸಚಿವ ಸ್ಥಾನ ಸಿಕ್ಕಿತ್ತು.

ಜಿಲ್ಲಾ ಉಸ್ತುವಾರಿ ಮೇಲೆ ಹೆಬ್ಬಾರ್ ಕಣ್ಣಿಟ್ಟಿದ್ದರೂ ಈ ಹಿಂದೆ ಇದ್ದ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಯನ್ನು ಬದಲಿಸುವ ಮನಸ್ಸು ಮಾಡಿರಲಿಲ್ಲ ಸಿಎಂ.
ಇನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಶಿವರಾಮ್ ಹೆಬ್ಬಾರ್ ನಡುವೆ ಮುಸುಕಿನ ಗುದ್ದಾಟ ಸಹ ನಡೆಯುತಿದ್ದು ಜಿಲ್ಲಾ ಉಸ್ತುವಾರಿ ಸಚಿವೆ ಕ್ಷೇತ್ರಕ್ಕೆ ಬಂದರೂ ಹೆಬ್ಬಾರ್ ಅವರೊಂದಿಗೆ ಸಂಪರ್ಕಿಸುತ್ತಿರಲಿಲ್ಲ.ಸಿ.ಎಂ ಬಳಿ ತನ್ನ ಊರಿನ ಜಿಲ್ಲಾ ಉಸ್ತುವಾರಿಯನ್ನೇ ಬೇಡಿಕೆ ಇಟ್ಟಿದ್ದ ಹೆಬ್ಬಾರ್ ಅದಕ್ಕಾಗಿ ಅಕಾಡ ಸಿದ್ದಮಾಡಿಕೊಂಡಿದ್ದರು.
ಹೀಗಾಗಿ ತಾನು ಜಂಗಿ ಕುಸ್ತಿಯಲ್ಲಿ ಸೋಲುವ ಕುರಿತು ಕೆಲಸವನ್ನೇ ಮಾಡದ ಶಶಿಕಲಾ ಜೊಲ್ಲೆ ಕ್ಷೇತ್ರದ ಬಗ್ಗೆ ಅಸಡ್ಡೆ ತೋರುವ ಮೂಲಕ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ತನ್ನ ಸಚಿವಸ್ಥಾನ ಉಳಿಸಿಕೊಳ್ಳುವ ರಾಜಕೀಯಕ್ಕೆ ಮುಂದಾದರು.ಇದರ ಪ್ರತಿಫಲವಾಗಿ ಸ್ಥಾನ ಉಳಸಿಕೊಂಡು ಬೇರೆಡೆ ವರ್ಗವಾಗಿದ್ದು ಜಿಲ್ಲೆ ಜನ ನಿಟ್ಟುಸಿರು ಬಿಡುವಂತಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ