ಕುಂದಗೋಳ ಚುನಾವಣೆ:ಮೈತ್ರಿ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂಪಡೆತ!

96

ಹುಬ್ಬಳ್ಳಿ: ಕುಂದಗೋಳದಲ್ಲಿ ಟಿಕೆಟ್ ಸಿಗದ್ದಕ್ಕೆ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಆರು ಮಂದಿ ಕಾಂಗ್ರೆಸಿಗರೊಂದಿಗೆ ಸಚಿವ ಜಮೀರ್ ಅಹ್ಮದ್ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ.

ಕುದ್ದು ಸಚಿವ ಜಮೀರ್, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜತೆ ತಹಸೀಲ್ದಾರ್ ಕಚೇರಿಗೆ ಬಂದ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.

ಕುಂದಗೋಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸುರೇಶ್ ಸವಣೂರ, ಎಚ್.ಎಲ್. ನದಾಫ್, ಚಂದ್ರಶೇಖರ್ ಜುಟ್ಟಲ್, ಜೆ.ಡಿ. ಘೋರ್ಪಡೆ, ವಿಶ್ವನಾಥ ಕುಬಿಹಾಳ ಸೇರಿ ಎಂಟು ಮಂದಿ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಕಾಂಗ್ರೆಸ್ಗೆ ಭಾರಿ ಇರಿಸುಮುರಿಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಸಚಿವ ಜಮೀರ್ ಅಹ್ಮದ್ ಅವರನ್ನು ಸಂಧಾನಕಾರರಾಗಿ ಕುಂದಗೋಳಕ್ಕೆ ಆಗಮಿಸಿದ್ದರು.

ಬಂಡಾಯ ಅಭ್ಯರ್ಥಿಗಳೊಂದಿಗೆ ಸುದೀರ್ಘ ಸಮಾಲೋಚನೆ, ಚರ್ಚೆ ಮಾಡಿದ ಜಮೀರ್ ಅಹ್ಮದ್ ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾದರು. ಅಲ್ಲದೆ,ವಿನಯ್ ಕುಲಕರ್ಣಿ ಜತೆಗೂಡಿ ಎಲ್ಲ ಬಂಡಾಯ ಅಭ್ಯರ್ಥಿಗಳನ್ನು ಕುಂದಗೋಳ ತಹಸೀಲ್ದಾರ್ ಕಚೇರಿಗೆ ಕರೆತಂದು ನಾಮಪತ್ರ ಹಿಂಪಡೆಯುವಂತೆ ಮಾಡಿದರು.

ನಾಮಪತ್ರ ಹಿಂಪಡೆದ 14 ಅಭ್ಯರ್ಥಿಗಳು!

ಕುಂದಗೋಳ ಉಪ ಸಮರದಲ್ಲಿ 14 ಜನ ನಾಮಪತ್ರ ಹಿಂಪಡೆದಿದ್ದಾರೆ.ಅಂತಿಮವಾಗಿ ಕಣದಲ್ಲಿ ಉಳಿದದ್ದು 8 ಅಭ್ಯರ್ಥಿಗಳುಮಾತ್ರ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿಗ್ ಪೈಟ್ ಎದುರಾಗಿದೆ.
ಕಾಂಗ್ರೆಸ್‌ನಿಂದ ಕುಸುಮಾ ಶಿವಳ್ಳಿ, ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡ್ರ ಕಣದಲ್ಲಿ ಸಮರಕ್ಕೆ ಸಿದ್ದರಾಗಿ ಅಕಾಡದಲ್ಲಿದ್ದಾರೆ.ಸದ್ಯ ಕಾಂಗ್ರೆಸ್ ಬಿ ಜೆ ಪಿ ಮಧ್ಯೆ ನೇರ ಹಣಾಹಣಿ ಎದುರಾಗಲಿದೆ.

ಚಲುವರಾಯ ಸ್ವಾಮಿ ಪರ ಬ್ಯಾಟಿಂಗ್ ಮಾಡಿದ ಜಮೀರ್!

ಸುಮಲತಾ ಅವರ ಜೊತೆಯಲ್ಲಿ ಯಾವುದೇ ಗುಪ್ತ ಸಭೆಯನ್ನು ಚಲುವರಾವಸ್ವಾಮಿ ಮಾಡಿಲ್ಲ. ಬದಲಿಗೆ ಅವರು ಔತಣ ಕೂಟಕ್ಕೆ ಹೋಗಿದ್ದು ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ ಇಂದು ಹುಬ್ಬಳ್ಳಿಗೆ ಟ್ರಬಲ್ ಶೂಟರ್ ಆಗಿ ಆಗಮಿಸಿದ್ದ ಅವರು ಕುಂದಗೋಳ ಬೈ ಎಲೆಕ್ಷನ್ ನಲ್ಲಿ ಕೈ ಬಂಡಾಯ ಅಭ್ಯರ್ಥಿಗಳನ್ನು ಕರೆದುಕೊಂಡು ಬಂದು ನಾಮಪತ್ರ ವಾಪಸ್ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕರೆದರೂ ಊಟಕ್ಕೆ ಹೋಗುತ್ತಿದೆ. ಅದರಲ್ಲಿ ಅನ್ಯತಾ ಭಾವಿಸಬಾರದು ಎಂದರು.
Leave a Reply

Your email address will not be published. Required fields are marked *

error: Content is protected !!