ಬೆಂಗಳೂರು :-ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಪ್ರತಿ ಭಾನುವಾರ ಕರ್ಫ್ಯೂ ಎಂದು ಘೋಷಿಸಿದ್ದ ಸರ್ಕಾರ ನಾಳೆ ಕರ್ಫ್ಯೂ ಸಡಿಲಿಕೆ ಮಾಡಿದೆ.
ಜನರ ಹಿತದೃಷ್ಟಿಯಿಂದ ನಾಳೆ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

ನಾಳೆ ಎಂದಿನಂತೆ ಎಲ್ಲವೂ ಓಪನ್ ಇರಲಿದೆ. ಮದ್ಯದಂಗಡಿ, ಮಾರ್ಕೆಟ್, ಸಂಚಾರ, ಆಟೋ, ಕ್ಯಾಬ್, ಪಾರ್ಕ್ ಯಾವುದಕ್ಕೂ ನಿರ್ಬಂಧ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಸರ್ಕಾರಿ ಸಾರಿಗೆ ಕೂಡ ಸೇವೆ ನೀಡಲಿದ್ದು, ಭಾನುವಾರದ ಲಾಕ್ಡೌನ್ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.