ಉತ್ತರಕನ್ನಡ, ಶಿವಮೊಗ್ಗ ,ಬೀದರ್ ನಲ್ಲಿ ಇಂದಿನ ಕರೋನಾ ಪಾಸಿಟಿವ್ ವರದಿ ಇಲ್ಲಿದೆ.

780

ಕಾರವಾರ:- 109 ಜನರಿಗೆ ಇಂದು ಕರೋನಾ ಪಾಸಿಟಿವ್ ವರದಿಯಾಗಿದ್ದು 180 ಜನ ವಿವಿಧ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

640 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 504 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

52 ಜನ ಈವರೆಗೆ ಕರೋನಾ ಸೋಂಕಿನಿಂದ ಸಾವು ಕಂಡವರಾಗಿದ್ದು 4860 ಜನ ಈವರೆಗೆ ಜಿಲ್ಲೆಯಲ್ಲಿ ಕರೋನಾ ಸೋಂಕಿತರಾದವರಾಗಿದ್ದಾರೆ.
ತಾಲೂಕುವಾರು ವಿವರ:-
(ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಆದಾರದಲ್ಲಿ ಪ್ರಕಟಿತ)

ಬೀದರ್ ನಲ್ಲಿ 67 ಜನರಿಗೆ ಕರೋನಾ ಪಾಸಿಟಿವ್!

ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಓರ್ವ ವೃದ್ಧನ ಬಲಿಯೊಂದಿಗೆ ಕೊರೋನಾ ಸಾವಿನ ರಣಕೇಕೆ ಹಾಕಿದೆ.ಕಮಲಾನಗರ ತಾಲೂಕಿನ 72 ವರ್ಷದ ವೃದ್ಧ ಕೊರೋನಾ ಗೆ ಬಲಿಯಾಗಿದ್ದು ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲಿ ಸಾವನ್ನಪ್ಪಿದ ವೃದ್ಧನಿಗೆ ಇಂದು ಕೊರೋನಾ ಪಾಸಿಟಿವ್ ಧೃಡವಾಗಿದೆ.

ಓರ್ವ ವೃದ್ಧನ ಬಲಿಯೊಂದಿಗೆ ಇಂದು ಜಿಲ್ಲೆಯಲ್ಲಿ 67 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದೆ.
ಬೀದರ್ ನಲ್ಲಿ 21, ಭಾಲ್ಕಿಯಲ್ಲಿ 14, ಬಸವಕಲ್ಯಾಣದಲ್ಲಿ 13, ಔರಾದ್ ನಲ್ಲಿ 10, ಹುಮ್ನಬಾದ್ ನಲ್ಲಿ 9 ಜನಕ್ಕೆ ಪಾಸಿಟಿವ್ ಧೃಡವಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ‌ ಸಂಖ್ಯೆ 4505ಕ್ಕೆ ಏರಿಕೆಯಾಗಿದ್ದು ಇದರಲ್ಲಿ 3719 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ. ಇನ್ನು 648 ಜನಕ್ಕೆ ಸೋಂಕು ಸಕ್ರಿಯವಾಗಿದ್ದು ಇಲ್ಲಿಯವರೆಗೆ 134 ಜನ ಜಿಲ್ಲೆಯಲ್ಲಿ ಕೊರೋನಾ ಗೆ ಬಲಿಯಾಗಿದ್ದಾರೆ.

ಶಿವಮೊಗ್ಗ ದಲ್ಲಿ ಇಂದು 292 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು 8140 ಜನರಿಗೆ ಈವರೆಗೆ ಸೋಂಕು ದೃಡಪಟ್ಟಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕರೋನಾ ಪಾಸಿಟಿವ್ ! ರಾಜ್ಯ ಆರೋಗ್ಯ ಇಲಾಖೆಯ ವಿವರ ಇಲ್ಲಿದೆ:-

ಮಂಗಳೂರು-ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕರೋನಾ ಪಾಸಿಟಿವ್

ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರಿಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ.

ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡ ನಳಿನ್ ಕುಮಾರ್ ಕಟೀಲ್ ನನಗೆ ಯಾವುದೇ ರೋಗ ಲಕ್ಷಣಗಳಿಲ್ಲ ನಿಮ್ಮ ಆಶೀರ್ವಾದದಿಂದ ಶೀಘ್ರವೇ ಹಿಂತಿರುಗುತ್ತೇನೆ,ಸಂಪರ್ಕದಲ್ಲಿದ್ದವರು ಜಾಗರೂಕತೆಯಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ