ಉತ್ತರ ಕನ್ನಡ ಜಿಲ್ಲೆಯಲ್ಲಿ ಇಳಿಮುಖವಾದ ಕರೋನಾ ಸಾವಿನ ಸಂಖ್ಯೆ!ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದ ಸಾವಾಗಿದೆ ವಿವರ ಇಲ್ಲಿದೆ

997

ಕಾರವಾರ:-ಉತ್ತರ ಕನ್ನಡ ಜಿಲ್ಲೆಯಲ್ಲಿ 238 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.
97 ಜನ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದು 4298 ಜನ ಜಿಲ್ಲೆಯಲ್ಲಿ ಈವರೆಗೆ ಗುಣಮುಖರಾದವರಾಗಿದ್ದಾರೆ.

804 ಜನರಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 840 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆನೀಡಲಾಗುತ್ತಿದೆ.
57 ಜನ ಈವರೆಗೆ ಕರೋನಾ ದಿಂದ ಸಾವುಕಂಡಿದ್ದು 5999 ಜನ ಈವರೆಗೆ ಜಿಲ್ಲೆಯಲ್ಲಿ ಕರೋನಾ ಸೋಂಕಿತರಾದವರಾಗಿದ್ದಾರೆ.

ತಾಲೂಕುವಾರು ವಿವರ ಇಲ್ಲಿದೆ:-

ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆ ರಾಜ್ಯಕ್ಕೆ ಮಾದರಿಯಾದ ಉತ್ತರ ಕನ್ನಡ ಜಿಲ್ಲೆ.!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.

ರಾಜ್ಯದಲ್ಲಿ ಧಾರವಾರ ಶೇಕಡ 2.9 ಪರ್ಸೆಂಟ್ ಸಾವಿನ ಸಂಖ್ಯೆ ಮೂಲಕ ಮೊದಲ ಸ್ಥಾನದಲ್ಲಿ ಇದ್ದರೆ ಶಿವಮೊಗ್ಗ ಜಿಲ್ಲೆ 2.5% ಬರುವ ಮೂಲಕ ನಾಲ್ಕನೆ ಸ್ಥಾನದಲ್ಲಿದೆ.ಬೀದರ್ 1.4 % ಮೂಲಕ 17 ನೇ ಸ್ಥಾನದಲ್ಲಿದ್ದು ಉತ್ತರ ಕನ್ನಡ ಜಿಲ್ಲೆ 0.1% ಮೂಲಕ 28 ನೇ ಸ್ಥಾನದಲ್ಲಿದ್ದು ಸಾವಿನ ಸಂಖ್ಯೆಯಲ್ಲಿ ಏಳು ದಿನದಲ್ಲಿ ಕಡಿಮೆಯಾಗಿದೆ.ಇನ್ನು ಕೊಡಗು ಜಿಲ್ಲೆಯು ಕೊನೆಯ ಸ್ಥಾನದಲ್ಲಿದ್ದು 0.0% ಸೂಚ್ಯಾಂಕ ಹೊಂದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮೂರು ಸಾವಿನೊಂದಿಗೆ 125 ಜನರಿಗೆ ಕರೋನಾ ಪಾಸಿಟಿವ್!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 125 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಇಂದು ಕರೋನಾ ಸೋಂಕಿಗೆ ಮೂರು ಜನ ಸಾವುಕಂಡಿದ್ದಾರೆ.
ತಾಲೂಕುವಾರು ವಿವರ ಈ ಕೆಳಗಿನಂತಿದೆ:-

ಬೀದರ್ ನಲ್ಲಿ ಇಂದು 83 ಜನರಿಗೆ ಕರೋನಾ ಪಾಸಿಟಿವ್! ಓರ್ವ ಬಲಿ

ಬೀದರ್ :- ಗಡಿ ಜಿಲ್ಲೆ ಬೀದರ್‌ನಲ್ಲಿ ಇಂದು 50 ವರ್ಷದ ವ್ಯಕ್ತಿ ಕೊರೋನಾ ಗೆ ಬಲಿಯಾಗಿದ್ದಾನೆ.

ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲಿ ಸಾವನ್ನಪ್ಪಿದ ವ್ಯಕ್ತಿ ಗೆ ಇಂದು ಪಾಸಿಟಿವ್ ಧೃಡಪಟ್ಟಿದ್ದು ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಗೆ ಬಲಿಯಾದವರ‌ ಸಂಖ್ಯೆ 140ಕ್ಕೆ ಏರಿಕೆಯಾಗಿದೆ.

ಓರ್ವ ವ್ಯಕ್ತಿ ಬಲಿಯೊಂದಿಗೆ ಇಂದು ಜಿಲ್ಲೆಯಲ್ಲಿ 83 ಜನಕ್ಕೆ‌ ಪಾಸಿಟಿವ್ ಧೃಡಪಟ್ಟಿದ್ದು

ಬೀದರ್ – 40, ಬಸವಕಲ್ಯಾಣ – 20, ಔರಾದ್ – 10, ಹುಮ್ನಬಾದ್ – 8, ಭಾಲ್ಕಿ – 5 ಜನರಿಗೆ ಸೋಂಕು ಧೃಡಪಟ್ಟಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4959ಕ್ಕೆ ಏರಿಕೆಯಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ