ಉತ್ತರ ಕನ್ನಡ,ಬೀದರ್ ,ಶಿವಮೊಗ್ಗ ಜಿಲ್ಲೆಯಲ್ಲಿ ಇಂದಿನ ಕರೋನಾ ಪಾಸಿಟಿವ್ ವಿವರ ಇಲ್ಲಿದೆ.

674

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ 139 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 48 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕಾರವಾರದಲ್ಲಿ 40, ಅಂಕೋಲಾದಲ್ಲಿ 4,, ಕುಮಟಾದಲ್ಲಿ 16, ಹೊನ್ನಾವರದಲ್ಲಿ 5, ಭಟ್ಕಳದಲ್ಲಿ 3, ಶಿರಸಿಯಲ್ಲಿ 3, ಯಲ್ಲಾಪುರದಲ್ಲಿ 43, ಮುಂಡಗೋಡಿನಲ್ಲಿ 3, ಹಾಗೂ ಹಳಿಯಾಳದಲ್ಲಿ 22 ಮಂದಿಗೆ ಸೋಂಕು ದೃಢಪಟ್ಟಿದೆ.
ಇನ್ನು, ಕಾರವಾರದಲ್ಲಿ 16, ಅಂಕೋಲಾದಲ್ಲಿ 4, ಕುಮಟಾದಲ್ಲಿ 5, ಹೊನ್ನಾವರದಲ್ಲಿ 1, ಭಟ್ಕಳದಲ್ಲಿ 7, ಹಳಿಯಾಳದಲ್ಲಿ 5 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ ಜಿಲ್ಲೆಯ 4319 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 3235 ಮಂದಿ ಗುಣಮುಖರಾಗಿದ್ದಾರೆ. 1039 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯ ಹಳಿಯಾಳದಲ್ಲಿ ಕೊರೋನಾ ಸೊಂಕಿಗೆ ಒರ್ವ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 45ಕ್ಕೆ ಏರಿಕೆಯಾಗಿದೆ.

ಬೀದರ್ ನಲ್ಲಿ ಇಬ್ಬರು ಕರೋನಾಗೆ ಬಲಿ- 43 ಜನರಿಗೆ ಇಂದು ಕರೋನಾ ಪಾಸಿಟಿವ್

ಬೀದರ್ ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಇಬ್ಬರ ಬಲಿಯೊಂದಿಗೆ ಕೊರೋನಾ ತನ್ನ ಮರಣ ಮೃದಂಗ ಮುಂದುವರಿಸಿದೆ. ಬೀದರ್ ಪಟ್ಟಣದ 70 ವರ್ಷದ ವೃದ್ಧ ಹಾಗೂ ಭಾಲ್ಕಿ ತಾಲೂಕಿನ 65 ವೃದ್ಧೆ ಕೊರೋನಾ ಗೆ ಬಲಿಯಾಗಿದ್ದಾಳೆ.

ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲಿ ಇಬ್ಬರು ಸಾವನ್ನಪ್ಪಿದ್ದು ಇಂದು ಇಬ್ಬರಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ.

ಇಂದು ಇಬ್ಬರ ಬಲಿಯೊಂದಿಗೆ 43 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದೆ.

ಬೀದರ್ ನಲ್ಲಿ‌ 17, ಔರಾದ್ ನಲ್ಲಿ 11, ಭಾಲ್ಕಿಯಲ್ಲಿ 5, ಬಸವಕಲ್ಯಾಣದಲ್ಲಿ 5, ಹುಮ್ನಬಾದ್ ನಲ್ಲಿ 5 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದೆ… ಪ್ರಾಥಮಿಕ ಹಾಗೂ ಕಂಟೈನ್ಮಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ… ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 4256ಕ್ಕೆ ಏರಿಕೆಯಾಗಿದ್ದು ಇದರಲ್ಲಿ 3487 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ… ಇನ್ನು 635ಕ್ಕೆ ಸೋಂಕು ಸಕ್ರಿಯವಾಗಿದ್ದು ಇಲ್ಲಿಯವರೆಗೆ 130 ಜನ ಕೊರೋನಾ ಮಹಾಮಾರಿ ಜಿಲ್ಲೆಯಲ್ಲಿ ಬಲಿಯಾಗಿದ್ದಾರೆ.
ವರದಿ-ಸಂದೀಪ್ .ಜಿ.ಎಸ್.

ಕರ್ನಾಟಕದ ಜಿಲ್ಲಾವಾರು ಕರೋನಾ ಪಾಸಿಟಿವ್ ವಿವರ ಇಲ್ಲಿದೆ:-
Leave a Reply

Your email address will not be published. Required fields are marked *