BREAKING NEWS
Search

ಯಾವ ಜಿಲ್ಲೆಯಲ್ಲಿ ಇಂದು ಎಷ್ಟು ಕರೋನಾ ಪಾಸಿಟಿವ್ ! ಜಿಲ್ಲಾವಾರು ವಿವರ ಇಲ್ಲಿದೆ.

586

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಹೆಲ್ತ್ ಬುಲಟಿನ್ ಪ್ರಕಾರ ಇಂದು 106 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.79 ಜನ ಗುಣಮುಖರಾಗಿದ್ದು 688 ಜನ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 482 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದು ಕರೋನಾ ದಿಂದ 53 ಜನ ಈವರೆಗೆ ಮೃತರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ 4966 ಜನ ಜಿಲ್ಲೆಯಲ್ಲಿ ಕರೋನಾ ಸೋಂಕಿತರಾದವರಾಗಿದ್ದಾರೆ.

ತಾಲೂಕು ವಾರು ವಿವರ:- (ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ)

ಬೀದರ್ ನಲ್ಲಿ 30 ಜನರಿಗೆ ಕರೋನಾ ಪಾಸಿಟಿವ್!

ಬೀದರ್ :- ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಓರ್ವ ವೃದ್ಧನ ಬಲಿಯೊಂದಿಗೆ ಕೊರೋನಾ ತನ್ನ ಅಟ್ಟಹಾಸ‌ ಮೇರೆದಿದೆ.

ಬೀದರ್ ತಾಲೂಕಿನ 65 ವರ್ಷದ ವೃದ್ಧೆಯ ಬಲಿಯೊಂದಿಗೆ ಇಂದು 30 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದೆ.

ತಾಲೂಕುವಾರು ವಿವರ:-

ಭಾಲ್ಕಿಯಲ್ಲಿ 9, ಬೀದರ್ ನಲ್ಲಿ 7, ಔರಾದ್ ನಲ್ಲಿ 7, ಬಸವಕಲ್ಯಾಣದಲ್ಲಿ 4, ಹುಮ್ನಬಾದ್ ನಲ್ಲಿ 3 ಜನಕ್ಕೆ ಪಾಸಿಟಿವ್ ಧೃಡವಾಗಿದೆ… ಪ್ರಾಥಮಿಕ ಹಾಗೂ ಕಂಟೈನ್ಮಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4535ಕ್ಕೆ ಏರಿಕೆಯಾದ್ದು ಇದರಲ್ಲಿ 3839 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ.

ಇನ್ನು 557 ಜನಕ್ಕೆ ಸೋಂಕು ಸಕ್ರಿಯವಾಗಿದ್ದು ಇಲ್ಲಿಯವರೆಗೆ 135 ಜನರನ್ನು ಮಹಾಮಾರಿ ಬಲಿ ಪಡೆದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 168 ಜನರಲ್ಲಿ ಕರೋನಾ ಪಾಸಿಟಿವ್

ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯದ ಆರೋಗ್ಯ ಇಲಾಖೆಯ ಇಂದಿನ ಜಿಲ್ಲಾವಾರು ವಿವರ ಈ ಕೆಳಗಿನಂತಿದೆ.

ವರದಿ- ಪ್ರದೀಪ್ .ಜಿ.ಎಸ್.
Leave a Reply

Your email address will not be published. Required fields are marked *