ಕನ್ನಡವಾಣಿ ಡೆಸ್ಕ್ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮೂರು ಜನ ಪುರುಷರಲ್ಲಿ ಕರೋನಾ ಫಾಸಿಟಿವ್ ದೃಡಪಟ್ಟಿದೆ. ಮಹಾರಾಷ್ಟ್ರದಿಂದ ವಾಪಸ್ಸಾಗಿ ಕ್ವಾರಂಟೈನ್ ಇದ್ದ
P-9413 ಸಂಖ್ಯೆಯ 45 ವರ್ಷದ ಪುರುಷ, p-9414 ಸಂಖ್ಯೆಯ 18 ವರ್ಷದ ಪುರುಷ p-9415 ಸಂಖ್ಯೆಯ 31 ವರ್ಷದ ಮೂರು ಜನ ಪುರುಷರಲ್ಲಿ ಕರೋನಾ ದೃಡಪಟ್ಟಿದೆ.
ಇವರಲ್ಲಿ ಹಳಿಯಾಳ ,ಕುಮಟಾ ಹಾಗೂ ಭಟ್ಕಳ ಭಾಗದವರಾಗಿದ್ದು ಎಲ್ಲರೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದು ಕರೋನಾ ದೃಡಪಟ್ಟ ನಂತರದಲ್ಲಿ ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ ಗೆ ರವಾನೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 147 ಕ್ಕೆ ಏರಿಕೆಯಾಗಿದ್ದಯ 112 ಜನ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಸದ್ಯ 35 ಸಕ್ರಿಯ ಪ್ರಕರಣಗಳಿವೆ.
ಶಿವಮೊಗ್ಗದಲ್ಲಿ ಇವತ್ತು ಮತ್ತೆ ಐವರಿಗೆ ಕರೋನ ಸೋಂಕು ತಗುಲಿರುವುದು ದೃಢವಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 116ಕ್ಕೆ ಏರಿಕೆಯಾಗಿದೆ.
ಯಾರಿಗೆಲ್ಲ ಸೋಂಕು ತಗುಲಿದೆ?
ಪಿ9546 – 75 ವರ್ಷದ ಮಹಿಳೆ – ತೀವ್ರ ಉಸಿರಾಟದ ಸಮಸ್ಯೆ (SARI)
ಪಿ9547 – 27 ವರ್ಷದ ಪುರುಷ – ಪಿ6414 ಸಂಪರ್ಕ
ಪಿ9548 – 21 ವರ್ಷದ ಪುರುಷ – ಪಿ7802 ಸಂಪರ್ಕ
ಪಿ9549 – 35 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ಹಿಂತಿರುಗಿದ್ದಾರೆ
ಪಿ9550 – 21 ವರ್ಷದ ಪುರುಷ – ಪಿ8063 ಸಂಪರ್ಕ
ಮೂವರು ಆಸ್ಪತ್ರೆಯಿಂದ ಬಿಡುಗಡೆ
ಈ ನಡುವೆ ಇವತ್ತು ಕರೋನದಿಂದ ಗುಣವಾಗಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪಿ6410, ಪಿ6413 ಮತ್ತು ಪಿ6859 ಅವರು ಸೋಂಕಿನಿಂದ ಗುಣವಾಗಿದ್ದಾರೆ.
ಇನ್ನೆಷ್ಟು ಮಂದಿಗೆ ಚಿಕಿತ್ಸೆ ಆಗ್ತಿದೆ?
ಇವತ್ತು ಐವರು ಸೋಂಕಿತರನ್ನು ಸೇರಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 116ಕ್ಕೆ ಏರಿಕೆ ಆಗಿದೆ. ಈ ಪೈಕಿ ಇವತ್ತು ಮೂವರು ಡಿಸ್ಚಾರ್ಜ್ ಆಗಿದ್ದು, ಗುಣವಾದವರ ಒಟ್ಟು ಸಂಖ್ಯೆ 88ಕ್ಕೆ ಏರಿಕೆಯಾಗಿದೆ. 27 ಮಂದಿಗೆ ಚಿಕಿತ್ಸೆ ನಡೆಯುತ್ತಿದೆ. ಒಬ್ಬರು ಮಾತ್ರ ಮೃತರಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯದ ವಿವರ ಈ ಕೆಳಗಿನಂತಿದೆ:-


ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲಾ ಸುದ್ದಿಗಾಗಿ ವಾಟ್ಸ್ ಅಪ್ ಮಾಡಿ 9632889634
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ |
Kannadavaninewsportal@gmail.com