BREAKING NEWS
Search

ರಾಜ್ಯ ಹವಾಮಾನ ವರದಿ-13-06-2022

779

ಮುಂಗಾರು ರಾಜ್ಯಕ್ಕೆ ಆಗಮಿಸಿ 10 ದಿನ ಕಳೆದಿದೆ. ಇಷ್ಟು ದಿನ ರಾಜ್ಯದಲ್ಲಿ ಚದುರಿದಂತೆ ಮಳೆ ಆಗುತ್ತಿತ್ತು. ಆದರೆ ಇಂದಿನಿಂದ ಮುಂಗಾರು ಮಳೆ ಅಬ್ಬರಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಗದಗ, ಹಾವೇರಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಶಿವಮೊಗ್ಗದಲ್ಲಿ ಭಾರೀ ಮಳೆ ಆಗುವ ಮುನ್ಸೂಚನೆ ಇದ್ದು. ಕರಾವಳಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ 3 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಮನಗರ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ

ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಮುಂಗಾರು ಮಳೆ ಚುರುಕು ಗೊಂಡಿದ್ದು ಇಂದು ಸಹ ಮಳೆಯ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಸುರಿಯುತಿದ್ದು ಕಳೆದ 24 ಘಂಟೆಯಲ್ಲಿ ಕುಮಟಾ ಭಾಗದಲ್ಲಿ 64.2 mm, ಕಾರವಾರ 38.5mm ,ಹೊನ್ನಾವರ 32.2mm, ಭಟ್ಕಳ 20.0mm ಮಳೆ ಸುರಿದರೆ,ಶಿರಸಿ15.8mm, ಮುಂಡಗೋಡು8.6 mm, ಜೋಯಿಡಾ 4.8mm, ಯಲ್ಲಾಪುರ 16.0mm ಹಳಿಯಾಳದಲ್ಲಿ ಅತೀ ಕಡಿಮೆ1.0mm ಮಳೆ ವರದಿಯಾಗಿದೆ. ಹವಾಮಾನ ಇಲಾಖೆ ಇನ್ನೂ ಎರಡು ದಿನ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಸುರಿಯುವ ಸೂಚನೆ ನೀಡಿದ್ದು ಯಲ್ಲೂ ಅಲರ್ಟ ಘೋಷಿಸಲಾಗಿದೆ.

ರಾಜ್ಯದ ಪ್ರಮುಖ ನಗರದ ಉಷ್ಣಾಂಶದ ವಿವರ:-

ಬೆಂಗಳೂರು: 29-19
ಮಂಗಳೂರು: 28-24
ಶಿವಮೊಗ್ಗ: 29-21
ಬೆಳಗಾವಿ: 27-21
ಮೈಸೂರು: 29-19
ಮಂಡ್ಯ: 31-21
ಕೊಡಗು: 24-18
ರಾಮನಗರ: 41-28
ಹಾಸನ: 27-19
ಚಾಮರಾಜನಗರ: 30-19
ಚಿಕ್ಕಬಳ್ಳಾಪುರ: 26-18
ಕೋಲಾರ: 31-21
ತುಮಕೂರು: 30-20
ಉಡುಪಿ: 29-24
ಕಾರವಾರ: 29-26
ಚಿಕ್ಕಮಗಳೂರು: 26-18
ದಾವಣಗೆರೆ: 31-22
ಚಿತ್ರದುರ್ಗ: 31-21
ಹಾವೇರಿ: 30-22
ಬಳ್ಳಾರಿ: 34-23
ಗದಗ: 31-22
ಕೊಪ್ಪಳ: 33-23
ರಾಯಚೂರು: 36-25
ಯಾದಗಿರಿ: 36-25
ವಿಜಯಪುರ: 33-23
ಬೀದರ್: 33-24
ಕಲಬುರಗಿ: 35-24
ಬಾಗಲಕೋಟೆ: 33-23




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!