ಚರ್ಮರೋಗ ಜ್ವರ ತೊಲಗಿಸುತ್ತೆ ಈ ಮದ್ದಾಲೆ!ಈ ಗಿಡದ ವಿಶೇಷ ತಿಳಿಯಿರಿ

258

“ಮದ್ದಾಲೆ / Alstonia scholaris ( Apocynaceae )”

ಪಶ್ಚಿಮಘಟ್ಟ ಪ್ರದೇಶದಲ್ಲಿ ಬಾನೆತ್ತರಕ್ಕೆ ಬೃಹದಾಕಾರವಾಗಿ ಬೆಳೆಯುವ ಮರ. ತೊಗಟೆಗೆ ಗಾಯ ಮಾಡಿದರೆ, ಎಲೆಯನ್ನು ಹರಿದರೆ ಹಾಲು ಬರುತ್ತದೆ. ಮದ್ದಾಲೆ ಮರ ಮೃದು ಕಾಂಡವನ್ನು ಹೊಂದಿರುವುದರಿಂದ ಬೆಂಕಿ ಕಡ್ಡಿಯನ್ನು ತಯಾರಿಸಲು ಬಳಸುತ್ತಾರೆ.

ಮರದ ತುಂಬಾ ಗೊಂಚಲು ಗೊಂಚಲಾಗಿ ಬಿಳಿಯ ಬಣ್ಣದ ಹೂವನ್ನು ಬಿಡುತ್ತವೆ.

ಜೇನ್ನೊಣಗಳು ತುಂಬಾ ಇಷ್ಟ ಪಡುತ್ತವೆ. ತುಂಬಾ ಎತ್ತರಕ್ಕೆ ಬೆಳೆಯುವ ಈ ಮರದಲ್ಲಿ ಹಜ್ಜೇನಿನ ಹಲವು ಕುಟುಂಬಗಳು ರಟ್ಟು ಕಟ್ಟುತ್ತವೆ.

ಔಷಧೀಯ ಬಳಕೆ :-

ಜ್ವರ :-

ಅಂಗುಲ ಮದ್ದಾಲೆ ತೊಗಟೆ, ಎರಡು ಅಂಗುಲ ಅಮೃತ ಬಳ್ಳಿ, ಐದು ಬೋಳು ಕಾಳು,ಐದು ಗ್ರಾಂ.ದನಿಯ, ಐದು ಗ್ರಾಂ.ಜೀರಿಗೆ ಸೇರಿಸಿ ಚೆನ್ನಾಗಿ ಜಜ್ಜಿ ಎರಡು ನೂರು ಎಂ.ಎಲ್.ನೀರಿಗೆ ಹಾಕಿ ನೂರು ಎಂ.ಎಲ್.ಗೆ ಇಳಿಸುವಷ್ಟು ಕುದಿಸಬೇಕು.

ಬಾರಿ ಐವತ್ತು ಎಂ.ಎಲ್.ಕಷಾಯ ಸೇವನೆಯಿಂದ ಜ್ವರ, ಮಲೇರಿಯಾ ಜ್ವರ ನಿಯಂತ್ರಣಕ್ಕೆ ಬರುತ್ತದೆ.

ಚರ್ಮರೋಗ :-

ಸಣ್ಣ ತುರಿ ನವೆ ಆದರೆ ಮರದ ತೊಗಟೆಗೆ ಗಾಯ ಮಾಡಿದರೆ ಬರುವ ಹಾಲನ್ನು ತಾಮ್ರದ ತಟ್ಟೆಯಲ್ಲಿ ಸಂಗ್ರಹಿಸಬೇಕು. ಕೆಲವು ಗಂಟೆಗಳ ನಂತರ ಬಿಳಿಯ ದ್ರವ ನೀಲಿ ಬಣ್ಣಕ್ಕೆ ತಿರುಗುತ್ತದೆ. ಅದಕ್ಕೆ ಸ್ವಲ್ಪ ಕೊಬ್ಬರಿಎಣ್ಣೆ ಮಿಶ್ರಣ ಮಾಡಿ ನವೆ ಇರುವ ಭಾಗದಲ್ಲಿ ಲೇಪನ ಮಾಡಬೇಕು.

ಬಹಳ ದಿವಸಗಳ ಹಳೆಯ ತುರಿಗೆ ತುಂಬಾ ಪರಿಣಾಮಕಾರಿ ಮದ್ದು.

ಸೂಚನೆ:- ” ಸ್ವಯಂ ವೈದ್ಯಕೀಯ ಅಪಾಯಕಾರಿ”

“ಪಶ್ಚಿಮ ಘಟ್ಟ ಉಳಿಸಿ ಔಷಧೀಯ ಸಸ್ಯಗಳನ್ನು ಸಂರಕ್ಷಿಸೋಣ”
Leave a Reply

Your email address will not be published. Required fields are marked *

error: Content is protected !!