ಕಾರವಾರ:ಎಸಿಬಿ ಅಧಿಕಾರಿಗಳಿಂದ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ವಡ್ಡರ್ ಮನೆ ಮೇಲೆ ದಾಳಿ.

360

ಕಾರವಾರ :- ಮೈಸೂರಿನ ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ವಡ್ಡರ್ ಅವರ ಕಾರವಾರದ ನಿವಾಸದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ನಗರದ ಕೋಡಿಬಾಗ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಟಾಕಿಸ್ ಹಿಂಭಾಗ ಇರುವ ಅವರ ನಿವಾಸದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಮನೆಯಲ್ಲಿ ಅವರ ಸಹೋದರ ವಾಸವಿದ್ದು ಮನೆಯು ಇವರ ತಾಯಿ ಚನ್ನಮ್ಮ ವಡ್ಡರ್ ರವರ ಹೆಸರಿನಲ್ಲಿದೆ. ,ಎ.ಸಿ.ಬಿ ಡಿವೈಎಸ್ಪಿ ಮಂಜುನಾಥ್ ಕೌರಿ ನೇತೃತ್ವದ ತಂಡದಿಂದ ತನಿಖೆ ಮುಂದುವರಿದಿದ್ದು ಮನೆಯ ದಾಖಲೆ ಪತ್ರಗಳ ,ಆಸ್ತಿ ವಿವರದ ದಾಖಲೆಗಳ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ