ಕಾರವಾರ’:- ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಅಮದಳ್ಳಿ ರೈಲ್ವೆ ಟ್ರಾಕ್ ಬಳಿ ಇರುವ ಅಕೇಶಿಯ ಪ್ಲಾಙಟೇಶನ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಪಕ್ಕದಲ್ಲೇ ಇದ್ದ ಕಾರವಾರ-ಗೋವಾ ಮಾರ್ಗದ ಕೊಂಕಣ ರೈಲ್ವೆ ಹಳಿಗಳ ಬಳಿ ಬೆಂಕಿ ಆವರಿಸಿತ್ತು. ಈ ವೇಳೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣದಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ ಈ ವೇಳೆ ಮಂಗಳೂರಿನಿಂದ ಗೋವಾ ತೆರಳಬೇಕಿದ್ದ ರೈಲನ್ನು ಮುಂಜಾಗ್ರತಾ ಕ್ರಮವಾಗಿ ಕೆಲವು ಗಂಟೆಗಳ ಕಾಲ ತಡೆಹಿಡಿಯಲಾಗಿತ್ತು.
ಅದೃಷ್ಟವಶಾತ್ ಮಾಹಿತಿ ತಿಳಿದಿದ್ದರಿಂದ ಸಂಚಾರ ತಾತ್ಕಾಲಿಕ ಬಂದ್ ಮಾಡಿದ್ದರಿಂದ ಪ್ರಯಾಣಿಕರು ನಿಷ್ಟುಸಿರು ಬಿಡುವಂತಾಯಿತು.