ಸಮುದ್ರ ಕಲ್ಮಶ ಶುದ್ಧಿ ಮಾಡುವ ಅಳವಿನಂಚಿನಲ್ಲಿರುವ ಫೆಸಿಫಿಕ್ ರಿಟ್ಲೆ ಕಡಲಾಮೆ ಕಳಬರಹ ಪತ್ತೆ

682

ಕಾರವಾರ :- ಅಳಿವಿನಂಚಿನಲ್ಲಿರುವ ಫೆಸಿಫಿಕ್ ರಿಟ್ಲೆ ಕಡಲಾಮೆಯೊಂದು ಮೀನುಗಾರರು ಬೀಸಿದ ಬಲೆಗೆ ಸಿಲುಕಿ ಮೃತಪಟ್ಟಿದ್ದು ಕಾರವಾರದ ಕೋಡಿಭಾಗ್ ಬ್ರಿಡ್ಜ್ ಬಳಿ ಇದರ ಕಳೆಬರಹ ಪತ್ತೆಯಾಗಿದೆ.

ಸಮುದ್ರದ ಕಲ್ಮಶಗಳನ್ನು ಶುದ್ದಿ ಮಾಡುವ ಫಿಲ್ಟರ್ ಎಂದೇ ಕರೆಯುವ ಈ ಆಮೆಗಳು ಭಾರತದ ಕರಾವಳಿ ಉದ್ದಕ್ಕೂ ಕಂಡುಬರುತ್ತವೆ. ಒರಿಸ್ಸಾ ಕಡಲ ಭಾಗದಲ್ಲಿ ಅತೀ ಹೆಚ್ಚು ಇದರ ಸಂತತಿ ಉಳಿದಿದೆ.ಆದರೇ ಕರ್ನಾಟಕದ ಕರಾವಳಿ ಭಾಗದಲ್ಲಿ ಇದರ ಸಂತತಿ ಕ್ಷೀಣವಾಗಿದ್ದು ಇದು ಲೆಪಿಡೊಕೆಲಿಸ್ ಓಲಿವೆಸಿ ಎಂದು ವೈಜ್ಞಾನಿಕವಾಗಿ ಕರೆಯುವ ಈ ಕಡಲಾಮೆ ಐ. ಸಿ.ಯು.ಎನ್. ಪ್ರಕಾರ ಇದರ ಸಂತತಿಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗಿದೆ.


ಹೆಚ್ಚಾಗಿ ಸಮಶೀತೋಷ್ಣ ವಲಯದ ಸಮುದ್ರದಲ್ಲಿ ವಾಸಿಸುವ ಇವು 2 ರಿಂದ 2.5 ಫೂಟಿನಸ್ವು ದೊಡ್ಡದಾಗಿ ಬೆಳೆಯುತ್ತದೆ. ಇವು 150 ಮೀಟರ್ ನಷ್ಟು ಆಳದವರೆಗೂ ವಾಸಿಸಬಲ್ಲವು. ಇವುಗಳ ಜೀವಿತಾವಧಿ 50 ವರ್ಷದಿಂದ 60 ವರ್ಷಗಳಿದ್ದು ಪ್ರತಿ ಹದಿನೈದು ನಿಮಿಷಕ್ಕೆ ಸಮುದ್ರದಾಳದಿಂದ ಹೊರಬಂದು ಸಮುದ್ರದ ಹೊರಭಾಗದಲ್ಲಿ ಉಸಿರಾಟಕ್ಕೆ ಆಮ್ಲಜನಕವನ್ನು ತೆಗೆದುಕೊಳ್ಳುತ್ತವೆ.ಸಮುದ್ರದಲ್ಲಿ ಜಲ್ಲಿ ಫಿಷ್ ಗಳು ಸತ್ತ ಸಮುದ್ರ ಜೀವಿಗಳ ಕಳೆಬರಹ ಹಾಗು ಕೆಲವೊಮ್ಮೆ ಚಿಕ್ಕಪುಟ್ಟ ಮೀನುಗಳನ್ನು ಭಕ್ಷಿಸುವ ಇವು ಸಮುದ್ರದ ಕಲ್ಮಶವನ್ನು ಶುದ್ಧೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತದೆ. ಗಾತ್ರದಲ್ಲಿ ಚಿಕ್ಕದಿರುವ ಇವು ಕಡಲ ದಂಡೆಯಲ್ಲಿ 100 ರಿಂದ 150ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ ಎಂದು ಟೆರ್ರಾ ಸಾಗರ ಸಂಶೋಧನಾ ಸಂಸ್ಥೆ.
ಸಮುದ್ರ ಆಮೆಗಳು ಮತ್ತು ಕರಾವಳಿ ಸಂಪನ್ಮೂಲಗಳ ಸಹ ಸಂಸ್ಥಾಪಕರು ಮತ್ತು ಕಾರ್ಯಕ್ರಮ ನಿರ್ದೇಶಕರಾಗಿರುವ ಕಡಲ ಜೀವ ವಿಜ್ಞಾನಿ ಡಾ.ಅನ್ನಿ ಕುರಿಯನ್ ರವರು ತಿಳಿಸಿದ್ದಾರೆ.

ಮೀನುಗಾರಿಕೆ ಅವೈಜ್ಞಾನಿಕ ಕ್ರಮದಿಂದ ಸಂತತಿ ಕ್ಷೀಣ.

ಕರ್ನಾಟಕದ ಕರಾವಳಿ ಭಾಗದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ಆಮೆಗಳ ಸಂತತಿಗೆ ಹೊಡೆತ ಕೊಡುತ್ತಿದೆ.

ಮೀನುಗಾರರು ಸಮುದ್ರಭಾಗದಲ್ಲಿ ಮೀನುಗಾರಿಕೆ ನಡೆಸುವಾಗ ಹಾಳಾದ ಬಲೆಗಳನ್ನು ಸಮುದ್ರದಲ್ಲಿಯೇ ಬಿಟ್ಟು ಹೋಗುತ್ತಾರೆ. ಇದರಿಂದಾಗಿ ಸಮುದ್ರದಾಳದಿಂದ ಉಸಿರಾಟಕ್ಕೆ ಮೇಲೆಬರುವ ಈ ಆಮೆಗಳು ಈ ಬಲೆಗಳಿಗೆ ಸಿಲುಕಿ ಮೃತಪಡುತ್ತಿವೆ. ಇದಲ್ಲದೇ ಇವುಗಳ ಭಕ್ಷಣೆ ಸಹ ಮಾಡಲಾಗುತಿದ್ದು ಇದು ಕೂಡ ಇವುಗಳ ಸಂತತಿ ಕ್ಷೀಣಿಸಲು ಕಾರಣವಾಗಿದೆ.
ಅರಣ್ಯ ಇಲಾಖೆ ಇಂದ ಇವುಗಳ ಭಕ್ಷಣೆಗೆ ನಿಷೇಧ ಹೇರಿದೆ.ಆದರೇ ಕರ್ನಾಟಕದ ಕರಾವಳಿ ಭಾಗದಲ್ಲಿ ಇವುಗಳ ಭಕ್ಷಣೆ ನಡೆಯುತಿದ್ದು ಸಂತತಿ ಕ್ಷೀಣಿಸುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ