ಗೃಹ ಬಳಕೆ ವಸ್ತುಗಳ ಮೇಲೆ ಡಿಸ್ಕೌಂಟ್ ಪೊಲೀಸರು ಸೇರಿದಂತೆ ಅನೇಕರನ್ನು ವಂಚಿಸಿದ್ದ ಆರೋಪಿ ಬಂಧನ!

791

ಕಾರವಾರ :- ಗ್ರಾಹಕರಿಗೆ ಗೃಹೋಪಯೋಗಿ ವಸ್ತುಗಳನ್ನು ಕಡಿಮೆ ದರಕ್ಕೆ ನೀಡುವ ಆಮಿಷ ನೀಡಿ 130 ಕ್ಕೂ ಹೆಚ್ಚು ಗ್ರಾಹಕರಿಗೆ 12₹ ಲಕ್ಷಕ್ಕೂ ಹೆಚ್ಚು ವಂಚಿಸಿದ ತಮಿಳುನಾಡು ಮೂಲದ ವ್ಯಾಪಾರಿಯನ್ನು ಕಾರವಾರ ಶಹರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ತಮಿಳುನಾಡು ಮೂಲದ ತಾಂಜಾವೂರಿನ ಶಿವರಾಜ್ ಎಂಬುವವನಾಗಿದ್ದು , ಈತ ಹಾಗೂ ಇತನೊಂದಿಗಿದ್ದ ನಾಸೀರ್ ,ಗೋವಿಂದರಾಜು ಎಂಬುವವರು ಸೇರಿ ಕಾರವಾರ ನಗರದ ಕಾಜುಬಾಗ್ ನಲ್ಲಿ ಗಣಪತಿ ಅಣ್ವೇಕರ್ ಎಂಬುವವರಿಂದ ಮಳಿಗೆ ಬಾಡಿಗೆ ಪಡೆದು, ಅಮೋಘ ಟ್ರೇಡರ್ಸ್ ಎಂಬ ಹೆಸರಿನಲ್ಲಿ ಗೃಹೋಪಯೋಗಿ ವಸ್ತುಗಳನ್ನು 45% ಕಡಿಮೆ ದರದಲ್ಲಿ ನೀಡುವುದಾಗಿ ಹೇಳಿ ಮುಂಗಡ ಹಣ ಪಡೆದು ಗ್ರಾಹಕರಿಗೆ ವಂಚಿಸಿ ಪರಾರಿಯಾಗಿದ್ದನು.

ಈ ಕುರಿತು ಇದೇ ತಿಂಗಳು 12 ರಂದು ನರೇಶ್ ನೇತಾಳಕರ್ ಎಂಬುವವರು ಈತನಿಂದ 1,13000₹ ಮುಂಗಡ ಹಣ ನೀಡಿ ವಂಚನೆಗೊಳಗಾದ ಕುರಿತು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಕುರಿತು ತನಿಖೆ ಕೈಗೊಂಡ ಸಿ.ಪಿ.ಐ ಸಂತೋಷ್ ಶಟ್ಟಿ, ಪಿ.ಎಸ್.ಐ ಸಂತೋಷ್ ಕುಮಾರ್ ಹಾಗೂ ಪಿ.ಎಸ್.ಐ ಎಸ್.ಬಿ ಪೊಜಾರಿ ನೇತ್ರತ್ವದ ತಂಡ ಈತನ ಮೊಬೈಲ್ ನಂಬರ್ ಟ್ರಾಕ್ ಮಾಡಿ ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ.

ಪೊಲೀಸರಿಗೆ ವಂಚಿಸಿದ್ದ ಕಿರಾತಕರು!

ಕಾರವಾರ ನಗರದಲ್ಲಿ 45% ಡಿಸ್ಕೌಂಟ್ ನೀಡುವ ಜೊತೆ ಮೊದಲು ಬಂದ ಗ್ರಾಹಕರಿಗೆ ತಕ್ಷಣ ಡಿಲವರಿ ನೀಡುವ ಆಮಿಷದ ಜಾಹೀರಾತನ್ನು ಸ್ಥಳೀಯ ಪತ್ರಿಕೆಯೊಂದರಲ್ಲಿ ನೀಡಿ, ಬ್ರಾಂಡೆಡ್ ಗೃಹಬಳಕೆ ವಸ್ತುಗಳನ್ನು ಅಂಗಡಿಯಲ್ಲಿ ಇರಿಸಿದ್ದ. ಇದನ್ನು ನೋಡಿದ ಹಲವು ಗ್ರಾಹಕರು ಈ ಅಂಗಡಿಗೆ ಬಂದು ಮುಂಗಡ ಹಣ ನೀಡಿದ್ದರು.

ಮೊದಲು ಗ್ರಾಹಕರನ್ನು ನಂಬಿಸಲು ಹಲವರಿಗೆ ಈತ ಗೃಹ ಬಳಕೆ ವಸ್ತುಗಳನ್ನು ಕಮ್ಮಿ ದರದಲ್ಲಿ ನೀಡಿದ್ದ.

ಹೀಗಾಗಿ ಇದನ್ನು ನಂಬಿದ ಹಲವರು ಈತನ ತಂಡಕ್ಕೆ ಮುಂಗಡ ಹಣ ನೀಡಿದ್ದರು. ಈ ಸಾಲಿನಲ್ಲಿ ಕಾರವಾರ ನಗರದ ಡಿ.ಆರ್ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಹ ಸೇರಿದ್ದಾರೆ. ಸದ್ಯ ವಂಚನೆ ಮಾಡಿದ ತಂಡದಲ್ಲಿದ್ದ ಓರ್ವನನ್ನು ಹಿಡಿಯಲಾಗಿದ್ದು ,ಉಳಿದ ಇಬ್ಬರಿಗಾಗಿ ಬಲೆ ಬೀಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ