add

ಬಿಜೆಪಿ ಇಡೀ ಆಡಳಿತ ವ್ಯವಸ್ಥೆಯನ್ನು ದುರ್ಭಳಕೆ ಮಾಡಿಕೊಂಡು ಆಡಳಿತ ನಡೆಸುತ್ತಿದೆ-ಹೆಚ್.ಕೆ ಪಾಟೀಲ್ ಆರೋಪ!

132

ಕಾರವಾರ :- ಮೋದಿಯವರ ಯಾವ ಆಶ್ವಾಸನೆ ಕೂಡ ನಿಜವಾಗಿಲ್ಲ,ದೇಶ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದೆ.2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂತಾ ಉದ್ಯೋಗ ನಷ್ಟ ಮಾಡಿದ್ರು,ಉದ್ಯೋಗ ನಷ್ಟದ ಬಗ್ಗೆ ಮಾತನಾಡಿದ್ರೆ ಕೊರೊನಾ ಅಂತಾ ಕಾರಣ ಕೊಡ್ತಾರೆ ಎಂದು ಕಾರವಾರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಬಿಜೆಪಿಯನ್ನು ದೂರಿದರು.ಬಿಜೆಪಿ ಸುಳ್ಳು ಹೇಳಿಕೊಂಡು ಜನರ ದೃಷ್ಟಿ ತನ್ನತ್ತ ಸೆಳೆಯುತ್ತಿದೆ.

ಇಡೀ ಆಡಳಿತ ವ್ಯವಸ್ಥೆಯನ್ನು ದುರ್ಭಳಕೆ ಮಾಡಿಕೊಂಡು ಆಡಳಿತ ನಡೆಸುತ್ತಿದೆ,
ಅನ್ಯಾಯದ ವಿರುದ್ದ ಧ್ವನಿ ಎತ್ತಿದ್ರೆ ಅವರ ಧ್ವನಿ ಹತ್ತಿಕ್ಕುವ ಪ್ರಯತ್ನವಾಗುತ್ತಿದೆ.ಉತ್ತರಪ್ರದೇಶದ ಹತ್ರಾಸ್ ವಿಚಾರದಲ್ಲಿ ಇದೇ ಆಗಿದ್ದು. ಬಿಹಾರ ಚುನಾವಣೆಯಲ್ಲಿ ವ್ಯಾಕ್ಸಿನ್ ಕೊಡುವ ವಿಚಾರದಲ್ಲೂ ರಾಜಕೀಯಕ್ಕೆ ಇಳಿದಿದ್ದಾರೆ,ತಮ್ಮ ಪಕ್ಷಕ್ಕೆ ಓಟ್ ಹಾಕಿದ್ರೆ ಮಾತ್ರ ಲಸಿಕೆ ಉಚಿತ ಅಂತಾರೆ,
ಬಿಹಾರ ಚುನಾವಣಾ ಕಣದಲ್ಲಿ ಈ ರೀತಿ ಆಮಿಷ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬೀಮಣ್ಣ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ