ಮಹಾರಾಷ್ಟ್ರಕ್ಕೆ ಸೇರಿದ ಕಾರವಾರ:ಕನ್ನಡ ಸಂಘಟನೆ ಮೌನ!

1614

ಕಾರವಾರ:- ಬೆಳಗಾವಿ, ನಿಪ್ಪಾಣಿ, ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದಾಗಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ ಪವಾರ ಇತ್ತೀಚೆಗೆ ನೀಡಿದ ಹೇಳಿಕೆ ಕನ್ನಡಿಗರ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಆದರೆ, ಬಿಎಸ್​ಎನ್​ಎಲ್ ಆಗಲೇ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಬಿಟ್ಟಿದೆ. ಹೌದು ಕಾರವಾರ ನಗರದಲ್ಲಿರುವ ಬಿಎಸ್​ಎನ್​ಎಲ್ ಮೊಬೈಲ್ ನೆಟ್​ವರ್ಕ್ ಬಳಕೆದಾರರಿಗೆ ವೆಲ್​ಕಮ್ ಟು ಮಹಾರಾಷ್ಟ್ರ ಎಂಬ ಸಂದೇಶ ಬರುತ್ತಿದೆ. ಇದರಿಂದಾಗಿ ಕಾರವಾರದ ಬಿಎಸ್ಎನ್ ಎಲ್ ಗ್ರಾಹಕರು ಹೌಹಾರುವಂತೆ ಮಾಡಿದೆ.

ನವೆಂಬರ್ 27ರ ರಾತ್ರಿ ನಗರದ ಕೆಎಚ್​ಬಿ ಭಾಗದ ಕೆಲ ಬಿಎಸ್​ಎನ್​ಎಲ್ ಗ್ರಾಹಕರಿಗೆ ಈ ರೀತಿ ಸಂದೇಶ ಬಂದಿದೆ. ಇದೇನು ಮೊದಲ ಬಾರಿಯಲ್ಲ. ಗೋವಾ ಗಡಿಯಲ್ಲಿರುವ ದೇವಬಾಗ, ಮಾಜಾಳಿ, ಸದಾಶಿವಗಡ ಯಾವುದೇ ಪ್ರದೇಶಕ್ಕೆ ಹೋದರೂ ನಿಮ್ಮ ಮೊಬೈಲ್ ಗೆ ಈ ಮೆಸೇಜ್ ಬರುತ್ತದೆ.

ಗೋವಾಕ್ಕೆ ಹೋದರೆ ಮೊಬೈಲ್​ಫೋನ್​ಗೆ ವೆಲ್​ಕಮ್ ಟು ಮಹಾರಾಷ್ಟ್ರ ಎಂಬ ಸಂದೇಶ ಬರುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಕಾರವಾರ ನಗರದಲ್ಲೂ ಈ ರೀತಿ ಸಂದೇಶ ಬಂದಿದ್ದು, ಇದರ ಸ್ಕ್ರೀನ್ ಶಾಟ್ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಸಂಘಟನೆ ,ಕನ್ನಡ ಸಾಹಿತ್ಯ ಪರಿಷತ್ ಮೌನ!

ಕನ್ನಡಿಗರು ಶಾಂತಿ ಪ್ರಿಯರೇನೋ ಹೌದು.ಅದ್ರಲ್ಲೂ ಕಾರವಾರದಲ್ಲಿ ಗೋವಾದವರ ರಂಪಾಟ ಮಾಡಿದರೂ “ಅಮ್ಮಗೇಲೆ ಲೋಗ್” ಎಂಬ ಅಭಿಮಾನ ಬಿಡದ ಕಾರವಾರದವರು “ಕೊಂಕಣಿ ಲೋಗ್ ಚೂಕ್ ಕೆಲರ್ ಬಿ ಕಾಯ್ ತೊಂದ್ರರ್ ನಾ” ಎಂಬ ಅಭಿಮಾನವಿದೆ. ಆದರೇ ಕೊಂಕಣಿ,ಮರಾಠಿ ಭಾಷೆ ಮಾತನಾಡುತ್ತೇವೆ ಎಂಬುದಕ್ಕೆ ಕನ್ನಡ ಮರೆಯಲು ಸಾಧ್ಯವೇ?ಅದ್ರಲ್ಲೂ ಕಾರವಾರ ಭಾಗದಲ್ಲಿ ಗೋವಾ ರಾಜ್ಯಕ್ಕೆ ಸೇರಬೇಕು ಎಂಬ ಹೋರಾಟ ಸಹ ನಡೆದಿದ್ದು ಕೆಲವೇ ತಿಂಗಳ ಹಿಂದೆ ಕಾರವಾರವನ್ನು ಗೋವಾಕ್ಕೆ ಸೇರಿಸಬೇಕು ಎಂಬ ಒತ್ತಾಯದ ಮನವಿಯನ್ನು ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನಿಗಳಿಗೆ ಕೆಲವು ಕೊಂಕಣಿ,ಮರಾಟಿ ಸಂಘಟನೆಗಳು ಮಾಡಿದ್ದವು.ಈ ಹೋರಾಟ ಬಿಸಿ ಇರುವಾಗಲೇ ಈಗ ಕಾರವಾರ ನಗರದಲ್ಲಿ ಮೆಲ್ ಕಮ್ ಟು ಮಹರಾಷ್ಟ್ರ ಎಂಬ ಸಂದೇಶಗಳು ಬಿಎಸ್ಎನ್ಎಲ್ ನಿಂದ ಬರತ್ತಿದೆ. ಈಬಗ್ಗೆ ಕನ್ನಡ ಸಂಘಟನೆಗಳು ಮೌನ ತಾಳಿವೆ. ಇನ್ನು ಕನ್ನಡದ ಸಾಹಿತ್ಯ ಬೀಜ ಬಿತ್ತಬೇಕಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವವಿಲ್ಲದೇ ಸೂತ್ರ ಹರಿದ ಗಾಳಿಪಟದಂತಿದೆ.ಈ ಬಗ್ಗೆ ಗೊತ್ತಿದ್ದರು ಕೂಡ ತಮಗೆ ಸಂಬಂಧವಿಲ್ಲದಂತಿರುವುದು ಕಾರವಾರದ ಕನ್ನಡಿಗರ ಕೆಚ್ಚು ಉಪ್ಪು ನೀರಿನಲ್ಲಿ ಬಸ್ಮವಾಗಿರುವುದು ವಿಷಾಧನೀಯ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ