ಕಾರವಾರದ ಡ್ರೈವಿನ್ ಹೋಟಲ್ ಮಾಲೀಕನ ಬೈಕ್ ಕದ್ದ ಕರೋನಾ ಸೋಂಕಿತ ಕಳ್ಳ ಅಂದರ್ :ಈತನ ಪ್ರತಾಪ ಕೇಳಿದ್ರೆ ಶಾಕ್ ಆಗೋದು ಖಂಡಿತ!

759

ಕಾರವಾರ:- ಕಳೆದ ಒಂದು ತಿಂಗಳ ಹಿಂದೆ ಕಾರವಾರದ ಡ್ರೈವಿನ್ ಹೋಟಲ್ ನಲ್ಲಿ ಹೋಟೆಲ್ ಮಾಲೀಕ ನಿಲ್ಲಿಸಿದ್ದ ಬುಲೆಟ್ ಕಳ್ಳತನ ಮಾಡಿದ್ದ ಕಳ್ಳನನ್ನು ಕಾರವಾರ ನಗರ ಪೊಲಿಸರು ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಕಾರಿಪುರ ಮೂಲದ ಸೈಯದ್ ಇಸ್ರಾರ್ ಎಂಬ ವ್ಯಕ್ತಿಯೇ ಬಂಧಿತನಾದವನಾಗಿದ್ದು.ಈ ಹಿಂದೆ ಮುಂಡಗೋಡಿನ ಅರಣ್ಯ ಇಲಾಖೆ ಪ್ರಕರಣದಲ್ಲಿ ಬಂಧಿಯಾಗಿದ್ದ ಈತನಿಗೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಕಾರವಾರದ ಕೋವಿಡ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೇ ಅಲ್ಲಿಂದ ತಪ್ಪಿಸಿಕೊಂಡ ಈತ ಪರಾರಿಯಾಗಲು ಬೀಚ್ ಬಳಿ ಇರುವ ಡ್ರೈವಿನ್ ಹೋಟಲ್ ನ ಮಾಲೀಕನ ಬೈಕ್ ಕದ್ದಿದ್ದ.ಇದಲ್ಲದೇ ಬೈಕ್ ನ ಬಣ್ಣ,ಆಕಾರ ಬದಲಿಸಿ ತಾನು ಬಳಕೆ ಮಾಡಿಕೊಳ್ಳುತಿದ್ದ.ಈ ಕುರಿತು ತನಿಖೆ ಕೈಗೊಂಡ ಕಾರವಾರ ನಗರದ ಸಿಪಿಐ ಸಂತೋಷ್ ನೇತ್ರತ್ವದ ತಂಡ ಕಳ್ಳನನ್ನು ಹಿಡಿದು ಹೆಡೆಮುರಿ ಕಟ್ಟಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ