ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದ ಕರೋನಾ ಸೊಂಕಿತ ಕಳ್ಳ! ಅಮೇಲೆ ಆಗಿದ್ದೇನು ಗೊತ್ತಾ?

1349

ಕಾರವಾರ :- ಶಿರಸಿಯಲ್ಲಿ ವಾಹನ ಕಳ್ಳತನ ಆರೋಪದಡಿ ಬಂಧಿಯಾಗಿದ್ದ ಕರೋನಾ ಸೊಂಕಿತ ಕಾರವಾರದ ಕ್ರಿಮ್ಸ್ ಕೋವಿಡ್ ವಾರ್ಡ್ ನಿಂದ ತಪ್ಪಿಸಿಕೊಂಡು ಪರಾರಿಯಾಗಿ ಕಾರವಾರದ ಕದ್ರಾ ಗ್ರಾಮದಲ್ಲಿ ಪೊಲೀಸರ ಅಥಿತಿಯಾದ ಘಟನೆ ಇಂದು ನಡೆದಿದೆ.

ವಾಹನ ಕಳ್ಳತನ ಕೇಸ್ ನಲ್ಲಿ ಭಾಗಿಯಾಗಿದ್ದ ಧಾರವಾಡ ಮೂಲದ ಆರೋಪಿಗೆ ನಿನ್ನೆ ಪಾಸಿಟಿವ್ ಬಂದಿತ್ತು.ಈ ಆರೋಪಿಯನ್ನ ನಿನ್ನೆ ಕಾರವಾರದ ಕ್ರಿಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೇ ನಿನ್ನೆ ರಾತ್ರಿ ವೇಳೆ
ಕಾರವಾರದ ಕ್ರಿಮ್ಸ್ ಕೋವಿಡ್ ವಾರ್ಡ ನ ಗಾಜನ್ನು ವಡೆದು ಅಲ್ಲಿಂದ ಎರಡು ಮೊಬೈಲ್ ಎಗರಿಸಿ ಸೋಂಕಿತ ಎಸ್ಕೇಪ್ ಆಗಿದ್ದ. ಪೊಲೀಸರ ಹರಸಾಹಸದ ನಂತರ ಇಂದು ಕಾರವಾರದ ಕದ್ರ ಗ್ರಾಮದ ಬಳಿ ಪತ್ತೆ ಯಾಗಿದ್ದು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಕಾರವಾರಕ್ಕೆ ಕರೆತಂದಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ