BREAKING NEWS
Search

ಅಪ್ರಾಪ್ತ ಬಾಲಕಿ ಅತ್ಯಾಚಾರ! ಕಾರವಾರದಲ್ಲಿ ನ್ಯಾಯಾಧೀಶರು ಕೊಟ್ಟ ಶಿಕ್ಷೆ ಏನು ಗೊತ್ತಾ?

1866

ಕಾರವಾರ: ಮಾವಿನ ತೋಟದಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪವೆಸಗಿದ್ದ ಮುಂಡಗೋಡದ ಚೌಡಳ್ಳಿ ಗ್ರಾಮದ ಆರೋಪಿ ಸುಭಾಸ ರಾಜಪ್ಪ ತಹಸೀಲ್ದಾರ್ ಈತನಿಗೆ ಎಫ್.ಟಿ.ಎಸ್.ಸಿ.-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಮುಂಡಗೋಡ ತಾಲೂಕಿನ ಚೌಡಳ್ಳಿ ಗ್ರಾಮದ ನಿವಾಸಿಯಾಗಿರುವ ಆರೋಪಿ ಸುಭಾಸ ರಾಜಪ್ಪ ತಹಸೀಲ್ದಾರ್ ಈತನು ದಿನಾಂಕ: 29-04-2017 ರಂದು ಮಧ್ಯಾನ 3.00 ಗಂಟೆಯ ಸುಮಾರಿಗೆ ಗ್ರಾಮದ ಮಾವಿನ ತೋಟದಲ್ಲಿ ಅಪ್ರಾಪ್ತ ಬಾಲಕಿ ಒಬ್ಬಳೇ ಇರುವುದನ್ನು ಕಂಡು ತೋಟಕ್ಕೆ ಹೋಗಿ ಬಲಾತ್ಕಾರ ಮಾಡಿದ್ದ.

ಈ ಕುರಿತಂತೆ ಮುಂಡಗೋಡ ಪೋಲೀಸರು ಪ್ರಕರಣ ದಾಖಲಿಸಿ ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ರಿ ಪ್ರಕರಣದ ಕುರಿತು ಅಂದಿನ ಸಿ.ಪಿ.ಐ. ಕಿರಣ ಕುಮಾರ ತನಿಖೆ ಜರುಗಿಸಿ ಐ.ಪಿ.ಸಿ. ಕಲಂ: 376, 506(1) ಹಾಗೂ ಪೋಕ್ಸೋ ಕಾಯಿದೆ ಕಲಂ: 4 ಮತ್ತು 10 ಅಡಿಯಲ್ಲಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸುಧೀರ್ಘವಾಗಿ ವಿಚಾರಣೆ ನಡೆಸಿದ ಎಫ್.ಟಿ.ಎಸ್.ಸಿ.-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಆರೋಪಿತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತನಿಗೆ 10 ವರ್ಷ ಕಠಿಣ ಸೆರೆಮನೆವಾಸ ಹಾಗೂ ರೂಪಾಯಿ 10 ಸಾವಿರ ದಂಡ ಭರಿಸಲು ಜೂನ್ 29 ರಂದು ಅಂತಿಮ ತೀರ್ಪು ನೀಡಿದ್ದು ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸುಭಾಷ ಪಿ. ಕೈರನ್ನ ವಾದ ಮಂಡಿಸಿದ್ದು ನೊಂದ ಬಾಲಕಿಗೆ ನ್ಯಾಯ ವದಗಿಸಿಕೊಟ್ಟಿದ್ದಾರೆ.
Leave a Reply

Your email address will not be published. Required fields are marked *