ಕಾರವಾರ ದಲ್ಲಿ ಕರೋನಾ ಗೆ 35 ವರ್ಷದ ಯುವಕ ಬಲಿ!

4575

ಕಾರವಾರ :- ಕೋವಿಡ್ -19ನಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನೊಂದು ಸಾವು ಸಂಭವಿಸಿದೆ.ಈ ಮೂಲಕ ಜಿಲ್ಲೆಯಲ್ಲಿ ನಾಲ್ಕಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ‌

35 ವರ್ಷದ ಕಾರವಾರ ನಿವಾಸಿ ನಿನ್ನೆ ರಾತ್ರಿ ಸಾವು ಕಂಡಿದ್ದಾರೆ.ಬ್ರೈನ್ ಟ್ಯೂಮರ್ ಹಾಗೂ ಇತರ ಕಾಯಿಲೆಯಿಂದ ಈಗಾಗಲೇ ಬಳಲುತ್ತಿದ್ದ ವ್ಯಕ್ತಿಯು ಕೊರೊನಾ ಸೋಂಕಿಗೆ ಒಳಗಾಗಿದ್ದ 71 ವರ್ಷದ ವೃದ್ಧೆಯ ಪಕ್ಕದ ಬೆಡ್‌ನಲ್ಲಿದ್ದ ಈ ರೋಗಿಗೆ ಸೊಂಕು ತಗುಲಿತ್ತು.

ಕೊರೊನಾದಿಂದಾಗಿ ಮೊನ್ನೆ‌ ವೃದ್ಧೆ ಸಾವಿಗೀಡಾಗಿದ್ದರು .ವೃದ್ಧೆಯಿಂದ ಹಬ್ಬಿದ ಸೋಂಕು ಬ್ರೈನ್‌ ಟ್ಯೂಮರ್ ಹೊಂದಿದ್ದ‌ ವ್ಯಕ್ತಿಗೂ ತಗಲಿತ್ತು. ಈ ಕಾರಣದಿಂದ ನಿನ್ನೆ ರಾತ್ರಿ‌ ರೋಗಿ ಸಾವಿಗೀಡಾಗಿದ್ರು

ನಿನ್ನೆ ರಾತ್ರಿಯೇ ಕೋವಿಡ್‌ನಿಂದ ಮೃತಗೊಂಡ ವ್ಯಕ್ತಿಯ ಶವಸಂಸ್ಕಾರವನ್ನು ಜಿಲ್ಲಾಡಳಿತ ನಡೆಸಿದೆ.

71 ವರ್ಷದ ವೃದ್ದೆ ಯಿಂದ ಹಬ್ಬಿದ್ದು ಹಲವರಿಗೆ!

ಮಂಗಳೂರು ತೆರಳಿದ್ದ ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟಿದ್ದ 71 ವರ್ಷದ ವೃದ್ಧೆಯಿಂದಾಗಿ
ಆಸ್ಪತ್ರೆ‌ಯ ಸಿಬ್ಬಂದಿ ಸೇರಿ ಸುಮಾರು 8 ಮಂದಿಗೆ ಕೊರೊನಾ‌ ಸೋಂಕು ತಗುಲಿದೆ.ಈಕೆಯಿಂದಾಗಿಯೇ ಸಾಕಷ್ಟು ಜನರಿಗೆ ಹಬ್ಬಿದ್ದು ನಿನ್ನೆಯಿಂದ 48 ಗಂಟೆಗಳ ಕಾಲ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಸೇವೆಗಳನ್ನು ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಸ್ಥಗಿತಗೊಳಿಸಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ