add

ಕಾರವಾರದಲ್ಲಿ ಬೀದಿ ನಾಯಿಗಳ ಭಕ್ಷಣೆ! ಅಬ್ಬ ಹೀಗೂ ಇದ್ದಾರೆ ಜನ?

2323

ಕಾರವಾರ:- ಕಾರವಾರದ ಕಡಲತೀರದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ನಾಯಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ಮಾಯವಾಗುತ್ತಿದೆ.

ಕಾರವಾರದ ನಗರದ ಮೀನುಮಾರುಕಟ್ಟೆ, ಕಡಲತೀರದಲ್ಲಿರುವ ಹೋಟಲ್ ಬಳಿ ಇದ್ದ ಬೀದಿ ನಾಯಿಗಳು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿರುವುದಕ್ಕೆ ಶ್ವಾನ ಪ್ರಿಯರು ಕಂಗಾಲಾಗಿದ್ದರು.

ಬೇಯಿಸಿಟ್ಟ ನಾಯಿ ದೇಹ.

ಪ್ರತಿ ದಿನ ತಾವು ವಾಕಿಂಗ್ ಮಾಡುತಿದ್ದಾಗ ಬಾಲ ಅಲ್ಲಾಡಿಸಿ ಹಿಂದೆ ಬರುತಿದ್ದ ನಾಯಿಗಳಿಗೆ ಬಿಸ್ಕೇಟ್ ಹಾಕಿ ಹೋಗುತಿದ್ದವರಿಗೆ ನಾಯಿಗಳೇಕೆ ಮಾಯವಾಗುತ್ತಿದೆ ಎಂಬ ಪ್ರಶ್ನೆ ಕಾಡಿದೆ. ನಗರಸಭೆಗೆ ಈ ಬಗ್ಗೆ ಕೇಳಿದಾಗ ನಾಯಿಗಳನ್ನು ಹಿಡಿದಿಲ್ಲ ಎಂಬ ಉತ್ತರ ಬಂದಿತ್ತು.

ಆದ್ರೆ ಕೊನೆಗೂ ಹೇಗೆ ಮರೆಯಾಗುತ್ತಿವೆ ಎಂಬುದನ್ನು ಕಂಡುಹಿಡಿಯುವಲ್ಲಿ ಶ್ವಾನಪ್ರಿಯರಲ್ಲಿ ಒಬ್ಬರಾದ ಕಾರವಾರದ ರಮಾಕಾಂತ್ ಕೊನೆಗೂ ಸಾಕ್ಷಿ ಸಮೇತ ಕಂಡುಹಿಡಿದಿದ್ದು ನಾಯಿ ಭಕ್ಷಣೆಯನ್ನು ಸಾಕ್ಷಿ ಸಮೇತ ಹಿಡಿದು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದಾರೆ.

ಡೇರದಲ್ಲಿತ್ತು ಸುಟ್ಟ ನಾಯಿಗಳ ಮಾಂಸ!

ಕಾರವಾರದ ಕಡಲತೀರದ ಬಳಿ ಹಕ್ಕಿ ಪಿಕ್ಕಿ ಜನಾಂಗದ ಕುಟುಂಬಗಳು ಬೀಡುಬಿಟ್ಟಿವೆ. ಈ ಕುಟುಂಬಗಳು ಜೇನುತುಪ್ಪ,ಆಯುರ್ವೇದ ಔಷಧಿ ಹಾಗೂ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಕಳೆದ ಮೂರ್ನಾಲ್ಕು ದಿನದಿಂದ ಕಾರವಾರದ ಕಡಲತೀರದಲ್ಲಿ ನೆಲಸಿದ್ದಾರೆ.

ಇನ್ನು ಇವರು ಪ್ರತಿ ದಿನ ಹಸಿದು ಅನ್ನ ತಿನ್ನಲು ಇವರ ಡೇರಾಕ್ಕೆ ಬರುವ ನಾಯಿಗಳನ್ನು ಸಾಯಿಸಿ ನಂತರ ಬೇಯಿಸಿ ಅವುಗಳನ್ನು ತಿನ್ನುತಿದ್ದಾರೆ. ಹೀಗಾಗಿ ಕಳೆದ ಮೂರ್ನಾಲ್ಕು ದಿನದಿಂದ ಕಡಲತೀರದಲ್ಲಿ ಇಪ್ಪತ್ತಕ್ಕೂ ಹೆಚ್ಚು ನಾಯಿಗಳು ಹಾಗೂ ಮರಿಗಳು ಇವರ ಹೊಟ್ಟೆ ಸೇರಿವೆ.

ಇಂದು ಸ್ಥಳೀಯರು ಇವರ ಈ ಭಕ್ಷಣೆಯನ್ನು ಕಣ್ಣಾರೆ ಕಂಡು ಕಾರವಾರದಿಂದ ತೆರಳುವಂತೆ ಗದರಿಸಿ ಕಳುಹಿಸಿದ್ದಾರೆ.

ಇನ್ನು ಈ ಜನಾಂಗದವರು ಕಾಡುಪ್ರಾಣಿಗಳ ಉಗುರುಗಳು ,ಹಕ್ಕಿಗಳ ಪುಕ್ಕ ಸೇರಿದಂತೆ ವನ್ಯಜೀವಿಗಳ ಅಂಗಾಂಗ ಸಹ ಮಾರಾಟ ಮಾಡುತಿದ್ದಾರೆ ಎಂದು ಆರೋಪ ಸಹ ಕೇಳಿಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಹ ಗಮನಹರಿಸಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ