BREAKING NEWS
Search

ವೈದ್ಯರ ನಿರ್ಲಕ್ಷದಿಂದ ಬಾಳಂತಿ ಸಾವು!ಡಾ .ಶಿವಾನಂದ ಕುಡ್ತರಕರ್ ವಿರುದ್ಧ 304 (A)ನಡಿ ಪ್ರಕರಣ ದಾಖಲು.

1047

ಕಾರವಾರ:ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷದಿಂದ ಬಾಣಂತಿ ಸಾವು ಕಂಡಿದ್ದಾರೆಂದು ಆರೋಪಿಸಿ ಮೃತ ಬಾಣಂತಿಯ ಸಂಬಂದಿಕರು ಹಾಗೂ ಮೃತ ಬಾಳಂತಿಯ ಕಾಲೋನಿಯ ಜನರು ಪ್ರತಿಭಟನೆ ನೆಡೆಸಿದ ಘಟನೆ ಕಾರವಾರದಲ್ಲಿ ನಡೆದಿದೆ.

ಸೆಪ್ಟೆಂಬರ್ ಮೂರರಂದು ಸಂತಾನ ಹರಣ ಚಿಕಿತ್ಸೆ ನೇಸುವಾಗ ಕಾರವಾರ ನಗರದ ಸರ್ವೂದಯ ನಗರ ನಿವಾಸಿ ಗೀತಾ ಶಿವನಾಥ ಬಾನಾವಳಿಕರ್(28) ಮೃತಪಟ್ಟಿದ್ದರು. ಇವರ ಸಾವಿಗೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಶಿವಾನಂದ ಕುಡ್ತಳಕರ್ ಕಾರಣ ಎಂದು ಆರೋಪಿಸಿರುವ ಸಂಬಂಧಿಕರು ಅನಾಸ್ಲೇಷಿಯ ಓವರ್ ಡೋಸ್ ನೀಡಿದ್ದರಿಂದ ಮೃತಳಾಗಿದ್ದು ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದ್ದಾರೆ.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಕುಡ್ತರಕರ್ ಅವರ ವಿರುದ್ಧ ಐಪಿಸಿ 302 ಅಡಿ ಪ್ರಕರಣ ದಾಖಲಿಸಿಕೊಂಡು, ಕೂಡಲೇ ಬಂಧಿಸಬೇಕು. ಅವರನ್ನು ಹುದ್ದೆಯಿಂದ ಅಮಾನತು ಮಾಡಬೇಕು ಅಥವಾ ಜಿಲ್ಲೆಯಿಂದ ವರ್ಗಾವಣೆ ಮಾಡುವ ಮೂಲಕ ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಮೃತ ಬಾಣಂತಿಯ ಕುಟುಂಬಸ್ಥರು ಹಾಗೂ ಸ್ಥಳೀಯರು
ನಗರದ ಸರ್ವೋದಯನಗರದಿಂದ ಪ್ರಾರಂಭವಾದ ರ್ಯಾಲಿಯು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತಲುಪಿ, ಎಸ್ ಪಿ ಶಿವಪ್ರಕಾಶ್ ದೇವರಾಜು ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಹಾಜರಿದ್ದ ಮೀನುಗಾರ ಮುಖಂಡ ರಾಜು ತಾಂಡೇಲ, ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ, ಬಾಣಂತಿ ಗೀತಾಳಿಗೆ ಅನಸ್ತೇಶಿಯಾ ಓವರ್ ಡೋಸ್ ಆಗಿ ಆಕೆಯ ಸಾವಿಗೆ ಕಾರಣವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಿದ್ದರೂ ಡಾ.ಶಿವಾನಂದ ಕುಡ್ತರಕರ್ ಖುದ್ದಾಗಿ ತಾವೇ ಅನಸ್ತೇಶಿಯಾವನ್ನು ಆಕೆಗೆ ನೀಡಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳನ್ನು ಹಾಗೂ ಕರ್ತವ್ಯದಲ್ಲಿಲ್ಲದವರನ್ನು ಆಪರೇಷನ್ ವೇಳೆ ಇಟ್ಟುಕೊಂಡು ಆಪರೇಷನ್ ಮಾಡಲಾಗಿದೆ. ತಮ್ಮ ಮಗನಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ತರಬೇತಿ ನೀಡುತ್ತಿದ್ದಾರೆ‌. ಈಗಾಗಲೇ ಹೆರಿಗೆಯ ವೇಳೆ ಸಾಕಷ್ಟು ಮಕ್ಕಳು ಮೃತಪಟ್ಟಿದ್ದು, ಈ ಆರೋಪ ಕೂಡ ಅವರ ಮೇಲಿದೆ ಎಂದು ಆರೋಪಿಸಿದರು.

ವೈದ್ಯರ ನಿರ್ಲಕ್ಷ್ಯತನದಿಂದ ಓರ್ವ ಗರ್ಭಿಣಿಯ ಜೀವಕ್ಕೆ ಕುತ್ತು ತಂದ ಡಾ.ಶಿವಾನಂದ ಕುಡ್ತರಕರ್ ಅವರ ವಿರುದ್ಧ ಕೊಲೆ ಆರೋಪದ 302 ಐ.ಪಿ.ಸಿ ಅಡಿ ಪ್ರಕರಣ ದಾಖಲಿಸಿಕೊಂಡು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ವೇಳೆ ಪ್ರತಿಕ್ರಿಯೆ ನೀಡಿದ ಎಸ್ ಪಿ ಶಿವಪ್ರಕಾಶ್ ದೇವರಾಜು, ವೈಯಕ್ತಿಕವಾಗಿ ಈ ಪ್ರಕರಣವನ್ನು ನಾನೇ ಖುದ್ದಾಗಿ ನಿರ್ವಹಿಸುತ್ತಿದ್ದೇನೆ. ಮರಣೋತ್ತರ ಪರೀಕ್ಷೆ ನಡೆಸಿ, ಕೂಡಲೇ ಅದೇ ದಿನ ರಾತ್ರಿ ಅವರ ವಿರುದ್ಧ 304 (A) ಐಪಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ‌. ಸಾಕ್ಷ್ಯಾಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಆದರೆ, ಅವರ ವರ್ಗಾವಣೆ ವಿಚಾರಗಳು ನನ್ನ ಕೈಯಲ್ಲಿಲ್ಲ. ಕಾನೂನಾತ್ಮಕವಾಗಿ ನಮ್ಮಿಂದ ಎಷ್ಟು ಸಾಧ್ಯವಿದೆಯೋ ಅಷ್ಟನ್ನು ಮಾಡುತ್ತೇವೆ. ಯಾರಿಗೂ ಮಣಿಯದೆ ಕರ್ತವ್ಯ ನಿರ್ವಹಿಸುತ್ತೇವೆ ಎಂದು ತಿಳಿಸಿದರು.


TAG


ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ