ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲ್ ಕಾರು ಅಡ್ಡಗಟ್ಟಿ ಜೀವ ಬೆದರಿಕೆ!

1952

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲೆ ರವರಿಗೆ ಇಂದು ಕಾರನ್ನು ಅಡ್ಡಹಾಕಿ ಜೀವ ಬೆದರಿಕೆ ಹಾಕಿದ ಘಟನೆ ಕಾರವಾರ ನಗರದ ಸದಾಶಿವಗಡದ ಬರ್ಗಿಬೀರ್ ನಲ್ಲಿ ನಡೆದಿದೆ.

ರಾಜು ತಾಂಡೇಲ್ ರವರು ಇಂದು ತಮ್ಮ ಬೋಟಿನ ಕೆಲಸಗಾರರಿಗೆ ಹಣ ಕೊಟ್ಟು ಮನೆಗೆ ಹಿಂತಿರುಗುವಾಗ ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದ ತುಕಾರಾಮ್ ಚಂಡೇಕರ್ ಹಾಗೂ ಭರತ್ ಖಾರ್ವಿ ಎಂಬುವವರು ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂಧಿಸಿದಲ್ಲದೇ ಇಷ್ಟಕ್ಕೆ ಬಿಡುವುದಿಲ್ಲ ನಿನ್ನನ್ನು ಮುಗುಸುತ್ತೇವೆ ಎಂದು ಜೀವಬೆದರಿಕೆ ಹಾಕಿದ್ದಾರೆ. ಈ ಕುರಿತು ರಾಜು ತಾಂಡೇಲ್ ರವರು ಚಿತ್ತಾಕುಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ