ಕಾರವಾರದಲ್ಲಿ ಕಟ್ಟಿಗೆ ತರಲು ಹೋದ ಮಹಿಳೆಗೆ ಗುಂಡು!

897

ಕಾರವಾರ:-ಕಟ್ಟಿಗೆ ತರಲು ಹೋಗಿದ್ದ ಮಹಿಳೆಯ ಕೈಗೆ ಗುಂಡು ತಗಲಿದೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾದ ಗೋಯಲ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.ರಸಿಕಾ(38) ಗುಂಡು ತಗಲಿ ಗಾಯಗೊಂಡ ಮಹಿಳೆಯಾಗಿದ್ದು ನಿನ್ನೆ ಸಂಜೆ ವೇಳೆ ಕಟ್ಟಿಗೆ ತರಲು ಅರಣ್ಯಕ್ಕೆ ತೆರಳಿದ್ದ ಮಹಿಳೆಗೆ ಕೈಗೆ ಗಾಯವಾಗಿತ್ತು.ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಸ್ಕ್ಯಾನ್ ಮಾಡಿ ಪರೀಕ್ಷಿಸಿದಾಗ ಆಕೆ ಕೈ ಒಳಭಾಗದಲ್ಲಿ ಗುಂಡಿನ ಚೂರುಗಳು ಪತ್ತೆಯಾಗಿದೆ. ಘಟನೆ ಸಂಬಂಧ ಕದ್ರಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಕಾಡಿನಲ್ಲಿ ಕಾಡುಪ್ರಾಣಿ ಬೇಟೆಯಾಡುವವರು ಪ್ರಾಣಿ ಎಂದು ಗುಂಡು ಹಾರಿಸಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ