BREAKING NEWS
Search

ಎದೆಹಾಲು ಕುಡಿಸುತಿದ್ದ ನಾಯಿ ಮರಿಯನ್ನು ಹೊತ್ತೊಯ್ದ ಚಿರುತೆ- ಮನಕಲಕುವ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆ.

4954

ಬೈತಖೋಲ್ ನಲ್ಲಿ ನಾಯಿಮರಿ ಹೊತ್ತೊಯ್ದ ಚಿರುತೆ ವೀಡಿಯೋ ನೋಡಿ:-

ಕಾರವಾರ:-ತಾಯಿಯಿಯ ಎದೆಹಾಲು ಕುಡಿಯುತಿದ್ದ ಚಿಕ್ಕ ನಾಯಿಮರಿಯನ್ನು ಚಿರತೆ ದಾಳಿಮಾಡಿ ಹೊತ್ತೊಯ್ದ ಮನಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈಖೋಲ್ ನ ಇಂಡಿಯನ್ ಆಯಿಲ್ ಸ್ಟೊರೇಜ್ ಕಚೇರಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ತನ್ನ ಐದು ಮರಿಗಳಿಗೆ ನಾಯಿಯೊಂದು ಹಾಲು ಕುಡಿಸುತಿತ್ತು.ಈ ಸಂದರ್ಭದಲ್ಲಿ ಕಳ್ಳ ಹೆಜ್ಜೆಯನ್ನಿಟ್ಟು ಬಂದ ಚಿರುತೆ ಏಕಾ ಏಕಿ ನಾಯಿಮೇಲೆ ದಾಳಿ ನಡೆಸಿದೆ.ನಂತರ ನಾಯಿಕೂಡ ದಾಳಿ ನಡೆಸಿದ್ದು ಈವೇಳೆ ನಾಯಿ ದಾಳಿಯಿಂದ ತಪ್ಪಿಸಿಕೊಂಡ ಚಿರುತೆ ಮರಿಗೆ ಬಾಯಿಹಾಕಿ ಮರಿಯನ್ನು ಹೊತ್ತೊಯ್ದಿದೆ.ತಾಯಿ ನಾಯಿ ಚಿರುತೆಯನ್ನು ಅಟ್ಟಿಸಿಕೊಂಡು ಹೋದರೂ ಒಂದು ಮರಿ ಮಾತ್ರ ಚಿರುತೆ ಪಾಲಾಗಿದ್ದು ಸಿ.ಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಎಲ್ಲರ ಮನ ಕಲಕುವಂತಿತ್ತು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ