BREAKING NEWS
Search

ಕಾರವಾರ- ಮೀನುಗಾರರಿಗೆ ಕೈಕೊಟ್ಟ ಸರ್ಕಾರ-ಹಾಲಿ ಮಾಜಿಗಳ ಜಂಗಿ ಕುಸ್ತಿಗೆ ಮೀನುಗಾರ ಆಡ ಕತ್ತರಿಯಲ್ಲಿ!

539

ಕಾರವಾರ:- ಸಾಗರಮಾಲ ಬಂದರು ವಿಸ್ತರಣೆ ಕಿರಿತು ಇದೇ ತಿಂಗಳು 31 ರಂದು ಬಂದರು ಸಚಿವ ಕೋಟ ಶ್ರೀನಿವಾಸಪೂಜಾರಿ ಕರೆದಿದ್ದ ಮೀನುಗಾರ ಮುಖಂಡರ ಸಭೆ ರದ್ದಾಗಿರುವುದಾಗಿ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರದ್ದು ಮಾಡಲು ಯಾವುದೇ ಸೂಕ್ತ ಕಾರಣ ಪ್ರಕಟಣೆಯಲ್ಲಿ ತಿಳಿಸದೇ ರದ್ದಾಗಿರುವ ಕಿರಿತು ಮಾಹಿತಿ ನೀಡಿರುವ ಪ್ರಕಟಣೆ ಇದಾಗಿದ್ದು ಮಾಜಿ ಶಾಸಕ ಸತೀಶ್ ಸೈಲ್ ರವರು ನಿನ್ನೆ ಪತ್ರಿಕಾ ಹೇಳಿಕೆಗೆ ನೀಡಿರುವ ಕುರಿತು ಆಕ್ರೋಶದ ಹೇಳಿಕೆ ನೀಡಿದ್ದಾರೆ.

ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ಕಾಮಗಾರಿಗೆ ಹೈಕೋರ್ಟ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹ. ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ ಎಂದ ಶಾಸಕಿ ರೂಪಾಲಿ ನಾಯ್ಕ ಮೀನುಗಾರರ ಬದುಕಿನ ಜತೆ ಚೆಲ್ಲಾಟ ಸರಿಯಲ್ಲಃ
ಆದರೆ ಮಾಜಿ ಶಾಸಕ ಸತೀಶ ಸೈಲ್ ತಾವೇ ತಡೆಯಾಜ್ಞೆ ತಂದಿದ್ದಾಗಿ ಬೆನ್ನುತಟ್ಟಿಕೊಳ್ಳುತ್ತಿದ್ದಾರೆ.

ಹಾಗಿದ್ದರೆ ಕಾಮಗಾರಿ ಶಿಲಾನ್ಯಾಸ ಮಾಡುವಾಗ ಅಧ್ಯಕ್ಷತೆ ವಹಿಸಿದ್ದು ಯಾಕಾಗಿ, ಆಗಲೆ ಕಾಮಗಾರಿಯನ್ನು ನಿಲ್ಲಿಸಬಹುದಿತ್ತು. ಅಧಿಕಾರದಲ್ಲಿ ಇರುವಾಗ ಕಾಣದ ದೋಷಗಳು ಈಗ ಹೇಗೆ ಕಂಡಿತು. ಅಥವಾ ಆಗ ಜಾಣ ಕುರುಡುತನ ಪ್ರದರ್ಶಿಸಿದ್ದರೇ. ಮೀನುಗಾರರ ಬದುಕಿನ ಜತೆ ಚೆಲ್ಲಾಟ ಆಡುವ ಇಂತಹ ಪ್ರವೃತ್ತಿಗೆ ಮೀನುಗಾರರು ಮಣೆಹಾಕಬಾರದು.
ತಾವೇ ಮುಂಚೂಣಿಯಲ್ಲಿ ನಿಂತು ಉದ್ಘಾಟನೆ ಸಮಾರಂಭ ನೆರವೇರಿಸಿದ ಮಾಜಿ ಶಾಸಕರು ಈಗ ಅದೆ ಯೋಜನೆಗೆ ತಡೆಯಾಜ್ಞೆ ತಂದಿರುವುದಾಗಿ ಹೇಳಿಕೊಳ್ಳಲು ನಾಚಿಕೆಯಾಗಬೇಕೆ, ಹೆಮ್ಮೆ ಪಡಬೇಕೆ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದು. ಶಿಲಾನ್ಯಾಸ ನೆರವೇರಿಸಿದ ನಂತರ ಇಲ್ಲಿಯ ತನಕದ ಮೀನುಗಾರರ ನೋವು, ಸಂಕಟಕ್ಕೆ ಯಾರು ಹೊಣೆ ಎನ್ನುವುದು ತಿಳಿಯಬೇಕಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಾಲಿ ಮಾಜಿಗಳ ಜಂಗಿ ಕುಸ್ತಿಗೆ ಮೀನುಗಾರರು ಅತಂತ್ರ;

ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಹಾಲಿ ಶಾಸಕಿ ಸತೀಶ್ ಸೈಲ್ ಮುಸುಕಿನ ಗುದ್ದಾಟ ಮೀನುಗಾರರ ಹೋರಾಟದ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ.

ಈ ಹಿಂದೆ ಶಾಸಕಿ ಹಾಗೂ ಸಂಸದರ ಭಾವಚಿತ್ರಕ್ಕೆ ಸಗಣಿ ಬಳಿದು ಚಪ್ಪಲಿಹಾರ ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದ ಮೀನುಗಾರರು ಉಗ್ರ ಹೋರಾಟ ಮುಂದುವರೆಸಿದ್ದರು.
ಇದು ಕುದ್ದು ಶಾಸಕಿ,ಹಾಗು ಸಂಸದರಿಗೆ ನೋವು ತಂದಿತ್ತು ಕೂಡ. ಹೀಗಾಗಿ ಇಬ್ಬರು ಮಾಜಿಗಳು ಮೀನುಗಾರರ ಜೊತೆ ನಿಂತಿದ್ದು ಹಾಲಿ ಶಾಸಕರಿಗೆ ತಮ್ಮ ಮೇಲೆ ರಾಜಕೀಯ ಕುತಂತ್ರ ಮಾಡುತ್ತಿರುವ ಕುರಿತು ಬೇಸರ ವ್ಯಕ್ತವಾಗಿತ್ತು. ಇಷ್ಟಾದರೂ ತಾವು ಮೀನುಗಾರರ ಜೊತೆ ಇದ್ದೇನೆ ಎಂದು ಪತ್ರಿಕಾ ಹೇಳಿಕೆ ನೀಡಿ ಅವರೇ ಕುದ್ದು ಸಭೆ ಕರೆಯಲು ಕಾರಣರಾಗಿದ್ದರು.
ಆದರೇ ನಿನ್ನೆ ದಿನ ಮಾಜಿ ಶಾಸಕರು ಮೀನುಗಾರ ಮುಖಂಡರ ಜೊತೆ ಪತ್ರಿಕಾ ಗೋಷ್ಠಿ ಮಾಡಿ ಹೇಳಿಕೆ ಬಿಡುಗಡೆ ಮಾಡಿದ್ದು ಈಗ ದೊಡ್ಡ ರಾಜಕೀಯ ಜಿದ್ದಾ ಜಿದ್ದಿಗೆ ಕಾರಣವಾಗಿದ್ದು ಇದರಿಂದ ಮೀನುಗಾರರು ಆಡು ಕತ್ತರಿಯಲ್ಲಿ ಸಿಲುಕುವಂತೆ ಆಗಿದ್ದು ಮೀನುಗಾರರ ಹೋರಾಟದ ಬೆಂಕಿಯಲ್ಲಿ ಯಾವ ರಾಜಕಾರಣಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾನೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

(ಸಭೆ ರದ್ದಾದ ಕುರಿತು ಹಾಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಅವರ ಆಪ್ತ ಕಾರ್ಯದರ್ಶಿಯನ್ನು ಸಂಪರ್ಕಿಸಲು ಪತ್ರಿಕೆ ಪ್ರಯತ್ನ ಪಟ್ಟರೂ ಕರೆ ಸ್ವೀಕರಿಸದೇ ಇರುವುದರಿಂದ ಅವರ ಪತ್ರಿಕಾ ಹೇಳಿಕೆ ಯನ್ನು ಮಾತ್ರ ಪ್ರಕಟಿಸಲಾಗಿದೆ)
Leave a Reply

Your email address will not be published. Required fields are marked *