add

ರಾಜ್ಯದ ರಾಜಕಾರಣವನ್ನೇ ಬದಲಿಸಿದ ಬೇಲಿಕೇರಿ,ಕಾರವಾರ ಬಂದರಿನಲ್ಲಿ ಸಮುದ್ರ ಅದಿರು ನುಂಗಿತ್ತು!ಒಂದು ಅದಿರಿನ ಇಂದಿನ ಕಥೆ!

364

ಸಮುದ್ರಪಾಲಾಗುತಿದ್ದ ಅದಿರಿಗೆ ಕೊನೆಗೂ ಮುಕ್ತಿ ನೀಡಲು ಹೊರಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆ :-

ಕಾರವಾರ :- ಬೇಲಿಕೇರಿ ಹಾಗೂ ಕಾರವಾರ ಅಧಿರು ಹಗರಣ ಇಡೀ ದೇಶದಲ್ಲೇ ಸದ್ದುಮಾಡುವ ಜೊತೆ 2010 ರಲ್ಲಿ ಯಡಿಯೂರಪ್ಪನವರ ಸರ್ಕಾರ ಪಥನಗೊಂಡು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತಹ ಬದಲಾವಣೆ ತಂದಿತ್ತು.ಆದ್ರೆ ಈಗ ಅದೇ ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ ಕಾರವಾರ ಬದರಿನಲ್ಲಿರುವ ಕಬ್ಬಿಣದ ಅದಿರಿನ ಹರಾಜಿಗೆ ಈಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಬೇಲಿಕೇರಿ ಬಂದರು ಹಾಗೂ ಕಾರವಾರದ ಬಂದರಿನಲ್ಲಿ ಕಬ್ಬಿಣದ ಅದಿರು ನಾಪತ್ತೆ ಹಾಗೂ ಅಕ್ರಮ ಸಾಗಾಟ ಸಾಕಷ್ಟು ಸದ್ದು ಮಾಡಿತ್ತು.

ಇದಾದ ನಂತದ ಅಂದಿನ ಲೋಕಾಯುಕ್ತ ಸಂತೋಷ್ ಹೆಗಡೆಯವರು ಹಗರಣವನ್ನು ಬಯಲಿಗೆ ತರುವ ಮೂಲಕ 2010 ರಲ್ಲಿ ಯಡಿಯೂರಪ್ಪನವರ ಸರ್ಕಾರ ಪಥನವಾಗುವಂತೆ ಮಾಡಿದ್ದರು.ಮಾಜಿ ಸಚಿವ ಜನಾರ್ಥನ ರೆಡ್ಡಿಗೆ ಜೈಲುವಾಸ ಮಾಡುವಂತೆ ಮಾಡಿದ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಪಟ್ಟ ತಂದುಕೊಟ್ಟ ಕೀರ್ತಿ ಈ ಬೇಲಿಕೇರಿ ಹಗರಣಕ್ಕೆ ಸಲ್ಲುತ್ತದೆ.

ಈಗ ಹೇಗಿದೆ ಅಲ್ಲಿನ ಸ್ಥಿತಿ!ಅದಿರು ಹರಾಜಿಗೆ ಮುಂದಾಗಿರೋದು ಏಕೆ?

ಬೇಲಿಕೇರಿ ಬಂದರಿನಲ್ಲಿ 56 ಅದರಿನ ರಾಶಿಗಳಿದ್ದು ಇದರಲ್ಲಿ ಎರಡುಲಕ್ಷದ ಎಪ್ಪತ್ತೊಂದು ಸಾವಿರದ ಒಂಬೈನೂರ ಹದಿನೈದು ಮೆಟ್ರಿಕ್ ಟನ್ ಅದಿರು ಇದೆ.

ಕಾರವಾರ ಬಂದರಿನಲ್ಲಿ ಒಟ್ಟು 22 ರಾಶಿಗಳಿದ್ದು ಇದರಲ್ಲಿ 60,887 ಮೆಟ್ರಿಕ್ ಟನ್ ಅಧಿರುಗಳಿದ್ದು ಇದರಲ್ಲಿ ರಾಜ್‍ಮಾಲ್ ಸಿಲ್ಕ್ ಗೆ ಈಗಾಗಲೇ ಎರಡು ರಾಶಿಗಳನ್ನು ಹರಾಜಿನಲ್ಲಿ ನೀಡಲಾಗಿದೆ.

ಇನ್ನು ಉಳಿದ 18 ಅದಿರು ರಾಶಿಗಳ ಹರಾಜು ಮಾಡುವಂತೆ ಕಾರವಾರ ನ್ಯಾಯಾಲಯ ಆದೇಶಿಸಿದೆ.

ಈ ಆದೇಶದ ಪ್ರಕಾರ 16 ರಾಶಿಯಿ 31099.29 ಮೆಟ್ರಿಕ್ ಟನ್ ಅಧಿರು ಇ-ಹರಾಜು ಪ್ರಕ್ರಿಯೆಗೆ ರಾಜ್ಯ ಗಣಿ ಮತ್ತು ಭೂ ವಿಜ್ಯಾನ ಇಲಾಖೆಗೆ ಕಳುಹಿಸಿಕೊಡಲಾಗಿದೆ.

ಹರಿದುಹೋದ ಟಾರ್ಪಲ್ .

ಉಳಿದ ಎರಡು ರಾಶಿಗಳಲ್ಲಿ ನೀರು ತುಂಬಿದ್ದರಿಂದಾಗಿ ಇವುಗಳನ್ನು ಕೈ ಬಿಡಲಾಗಿದೆ.ಸದ್ಯ ಸ್ಟೇಟ್ ಮಾನಟರಿಂಗ್ ಕಮಿಟಿಯಿಂದ ಈ ಹರಾಜು ದಿನಾಂಕ ಪ್ರಕಟಗೊಳ್ಳಬೇಕಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರವಾರ ನಿರ್ದೇಶಕರಾದ ಸೋಮಶೇಖರ್ ಮಾಹಿತಿ ನೀಡಿದ್ದಾರೆ.

ಕೊಚ್ಚಿ ಹೋದ ಅದಿರು-ಅಧಿಕಾರಿಗಳ ನಿರ್ಲಕ್ಷಕ್ಕೆ ಕೋಟಿ ಕೋಟಿ ನಷ್ಟ

2010 ರಲ್ಲಿ ಲೋಕಾಯುಕ್ತ ದಲ್ಲಿ ಪ್ರಕರಣ ದಾಖಲಾಗುತಿದ್ದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಅಕ್ರಮ ಅಧಿರನ್ನು ವಶಕ್ಕೆ ಪಡೆದಿತ್ತು.

2010 ರಲ್ಲಿ ಡ್ರೀಮ್ ಲಾಜಿಸ್ಟಿಕ್ ಕಂಪನಿ,ಪ್ರಿಂಟೆಕ್ಸ್,ದೊಡ್ಡನ್ನ ಬ್ರದರ್ಸ್,ಕೊಟಾರಿ ಎಂಟರ್ ಪ್ರಸಸ್,ಎ.ಸಿ.ಇ.,ಸಾಯಿ ಎಂಟರ್ ಪ್ರೈಸಸ್.ಶ್ರೀ ವೆಂಕಟೇಶ್ವರ ಟ್ರಾನ್ಸ್ಫೋರ್ಟ ಗಳಿಂದ ಅಕ್ರಮ ಅಧಿರನ್ನು ಜಪ್ತಿ ಮಾಡಿ ಕಾರವಾರದ ಬಂದರು ಹಾಗೂ ಬೇಲಿಕೇರಿ ಬಂದರಿನಲ್ಲಿ ಇಟ್ಟಿದೆ.

ಇನ್ನು ಬೇಲಿಕೇರಿಯಲ್ಲಿರುವ ಅಧಿರುಗಳ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿ ಈವರೆಗೂ ಆದೇಶವಾಗಿರದ ಕಾರಣ ಕೇವಲ ಕಾರವಾರ ಬಂದರಿನಲ್ಲಿರುವ ಅದಿರನ್ನು ಮಾತ್ರ ನ್ಯಾಯಾಲಯದ ಆದೇಶದಂತೆ ಗಣಿ ಇಲಾಖೆ ಹರಾಜಿಗೆ ಮುಂದಾಗಿದೆ.

ಇದನ್ನೂ ಓದಿ:-

ಕಳೆದ ಹತ್ತು ವರ್ಷದಿಂದ ಬೇಲಿಕೇರಿ ಹಾಗೂ ಕಾರವಾರದ ಬಂದರಿನಲ್ಲಿ ಕಬ್ಬಿಣದ ಅದಿರು ಕೊಳೆಯುತ್ತಾ ಬಿದ್ದಿದೆ. ಇನ್ನು ಈ ಹಿಂದೆ ಪಬ್ಲಿಕ್ ಟಿವಿ ವರದಿ ಪ್ರಸಾರದ ನಂತರ ಅದಿರನ್ನು ರಕ್ಷಿಸಲು ಟಾರ್ಪಲ್ ಹಾಕಲಾಗಿತ್ತು. ಆದರೇ ಕಳೆದ ಮೂರು ವರ್ಷಗಳಿಂದ ಅದಿರನ್ನು ರಕ್ಷಿಸುವ ಗೋಜಿಗೆ ಗಣಿ ಇಲಾಖೆಯಾಗಲಿ,ಅರಣ್ಯ ಇಲಾಖೆಯಾಗಲಿ ಹೋಗಿಲ್ಲ,ಹೀಗಾಗಿ ಮಳೆಗಾಲದಲ್ಲಿ ಅದಿರು ಟನ್ ಗಟ್ಟಲೇ ನೀರಿನಲ್ಲಿ ಕೊಚ್ಚಿಹೋಗಿ ಸಮುದ್ರ ಸೇರಿದ್ದರೆ, ಇರುವ ಅದಿರಿ‌ನ ಭಾಗದಲ್ಲಿ ಮರಗಳು,ಹುಲ್ಲುಗಳು ಬೆಳೆದು ನಿಂತಿದ್ದು ಇದರ ಉಸ್ತುವಾರಿ ಸಮರ್ಪಕವಾಗಿ ನಿರ್ವಹಿಸದೇ ಕಬ್ಬಿಣದ ಅದಿರು ಪೊಲಾಗಿದೆ.

ಗಣಿ ಇಲಾಖೆ ನಿರ್ಲಕ್ಷದಿಂದ ಸಾವಿರಾರು ಟನ್ ಕಬ್ಬಿಣದ ಅಧಿರು ಸಮುದ್ರಪಾಲಾಗಿಹೋಗಿದೆ.ಸದ್ಯ 31099.29 ಮೆಟ್ರಿಕ್ ಟನ್ ಗೆ ಇ-ಹರಾಜಿಗೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ.

ಆದ್ರೆ ಮಳೆ ಸೇರಿದಂತೆ ಇಲಾಖೆ ನಿರ್ಲಕ್ಷದಿಂದ ನೂರಾರು ಟನ್ ನೀರುಪಾಲಾಗುವ ಜೊತೆ ಈ ಹಿಂದೆ ಇದ್ದ ಅದಿರಿನ ಗುಣಮಟ್ಟ ಸಹ ಕೆಳಮಟ್ಟಕ್ಕಿಳಿದಿದೆ.ಇದರಿಂದಾಗಿ ಕೋಟಿ ನಷ್ಟ ಸರ್ಕಾರ ಅನುಭವಿಸುಂತಾಗಿದ್ದು ಇನ್ನಾದರೂ ಎಚ್ಚೆತ್ತು ಉಳಿದ ಅಳಿದುಳಿದ ಅಧಿರನ್ನು ರಕ್ಷಿಸಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ