BREAKING NEWS
Search

ನಾಳೆ ಮೀನುಗಾರರ ಹೋರಾಟಕ್ಕೆ ವಿರಾಮ- ರಾಜಕೀಯ ಹೊರತುಪಡಿಸಿ ನನ್ನ ಹೋರಾಟ- ಸೈಲ್

975

ಕಾರವಾರ:- ಹತ್ತು ದಿನಗಳಿಗೂ ಹೆಚ್ಚು ಕಾಲ ಸಾಗರಮಾಲಾ ಯೋಜನೆ ಕಾಮಗಾರಿ ವಿರೋಧಿಸಿ ನಡೆಯುತಿದ್ದ ಮೀನುಗಾರರ ಪ್ರತಿಭಟನೆ ನಾಳೆ ಕೊನೆಗೊಳ್ಳಲಿದೆ. ಈ ಕುರಿತು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸತೀಶ್ ಸೈಲ್ ಹಾಗೂ ಮೀನುಗಾರ ಮುಖಂಡರ ಹೇಳಿಕೆ ಇಲ್ಲಿದೆ.

ರಾಜಕೀಯ ಹೊರತುಪಡಿಸಿ ನನ್ನ ಹೋರಾಟ- ಸತೀಶ್ ಸೈಲ್

ನಾವು ಯಾವುದೇ ಹೋರಾಟ ಮಾಡಬೇಕಾದರೆ ರಾಜಕೀಯ ಹೊರತಾಗಿ ಮಾಡಬೇಕು ,ರಾಜಕೀಯ ಬಣ್ಣ ಕೊಟ್ಟರೆ ಅದಕ್ಕೆ ಪ್ರತಿಕ್ರಿಯಿಸಲಾರೆ ಎಂದು ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಹೇಳಿದರು. ಇಂದು ಕಾರವಾರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಮೇಲೆ ಗೋಬೆ ಕೂರಿಸಿ ಶಾಸಕಿ ವಿಧಾನಸೌದದ ವರೆಗೆ ಹೆಸರು ಕೆಡಿಸಿದರು. ಅವರು ಸಾಗರಮಾಲಾ ಯೋಜನೆಯನ್ನು ವಿರೋಧಿಸುವುದಾಗಿದ್ದರೆ ಸಾಕಷ್ಟು ಅವಕಾಶಗಳಿದ್ದವು,ಆದರೇ ಅವರು ಆಕ್ಷೇಪ ಸಹ ಮಾಡಲಿಲ್ಲ.

ಕಷ್ಟ ಬಂದಾಗ ನನ್ನಮೇಲೆ ಸುಖ ಬಂದಾಗ ತಾವೇ ಮಾಡಿದ್ದು ಎಂದು ತಮ್ಮಮೇಲೆ ಹಾಕಿಕೊಳ್ಳುವ ಕೆಲಸ ಮಾಡಬಾರದು. ಈ ಹಿಂದೆ ಸಿಬರ್ಡ ನಿರಾಶ್ರಿತರಿಗೆ ಪರಿಹಾರ ಸಿಗಲು ನಾನು ಶ್ರಮಿಸಿದ್ದೆ ಆದರೇ ನಾನು ಮಾಡಿದ ಕೆಲಸ ಅವರು ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ರಾಜಕಾರಣವನ್ನು ಯಾವುದಕ್ಕೆ ಉಪಯೋಗಿಸಬೇಕು ಎಂಬುದನ್ನು ಶಾಸಕರೇ ಅರಿಯಬೇಕು.

ಬೇರೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯೇ ಎಂಬುದನ್ನು ಅವರೇ ಅರಿಯಲಿ
ರಾಜಕೀಯ ಬಣ್ಣ ತೋರಿಸಲು ನಾನು ಜೀವಮಾನದಲ್ಲಿ ಹೋಗುವುದಿಲ್ಲ ಎಂದು ತಮ್ಮ ಮೇಲೆ ಶಾಸಕಿ ರೂಪಾಲಿ ನಾಯ್ಕ ಮಾಡಿರುವ ಆರೋಪಕ್ಕೆ ಬೇಸರ ವ್ಯಕ್ತಪಡಿಸಿದರು.
ಇನ್ನು ಸಾಗರ ಮಾಲಾ ಯೋಜನೆ ವಿರೋಧಿಸಿ ಕೋರ್ಟ ನಲ್ಲಿ ತಾತ್ಕಾಲಿಕ ತಡೆಯಾಜ್ಞೆ ತರಲಾಗಿದೆ,ಮೀನುಗಾರರ ಪರ ರಾಜಕೀಯ ಹೊರತುಪಡಿಸಿ ಅವರು ಕರೆಯದಿದ್ದರೂ ಅವರೊಂದಿಗೆ ನಾನು ಇರುತ್ತೇನೆ.ನಾನು ಸದಾ ಹೋರಾಟ ಮಾಡಲು ಸಿದ್ದನಿದ್ದೇನೆ. ಯೋಜನೆ ವಿರೋಧಿಸಿ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಬೇಟಿ ಮಾಡಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ,ಸಂಸದ ಅನಂತಕುಮಾರ್ ಹೆಗಡೆಯವರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಮೀನುಗಾರ ಮುಖಂಡ
ರಾಜು ತಾಂಡೇಲ್ ಮಾತನಾಡಿ ಹೋರಾಟಕ್ಕೆ
ನಾವು ಯಾವ ರಾಜಕೀಯವ್ಯಕ್ತಿಗಳನ್ನು ಕರೆದಿಲ್ಲ ಅವರೇ ಸ್ವಯಂ ಪ್ರೇರಿತವಾಗಿ ಬಂದಿದ್ದರು.
ರೂಪಾಲಿ ನಾಯ್ಕ ಬಳಿ ಮನೆಗೆ ಹೋಗಿ ಕೇಳಿದ್ರು ಸಿಗಲಿಲ್ಲ,ಬೇಟಿಯಾಗಲೂ ಅವಕಾಶ ನೀಡಲಿಲ್ಲ.
ನಮಗೆ ಯಾರಾದರು ಸಹಾಯದ ಅವಷ್ಯಕತೆಯಿತ್ತು,ಸತೀಶ್ ಸೈಲ್ ಬಳಿ ಕೇಳಿಕೊಂಡೆವು ಆಗ ನಾನು ರಾಜಕೀಯ ದೂರ ಇಟ್ಟು ನಿಮಗೆ ಸಹಾಯ ಮಾಡುತ್ತೇನೆ ಎಂದರು. ಕೋರ್ಟ ನಲ್ಲಿ ಕೇಸ್ ಹಾಕಿ ಸಹಕಾರ ಮಾಡಿದರು.
ಎಂದರು.
ಇನ್ನು ಕೋರ್ಟ ನಲ್ಲಿ ಮಧ್ಯಂತರ ತಡೆ ಬಂದಿರುವುದರಿಂದಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು,ಇದೇ ತಿಂಗಳು 31 ರಂದು ಬಂದರು ಸಚಿವರು ಸಭೆ ಕರೆದಿದ್ದಾರೆ. ಇದು ನಮ್ಮ ಪರವಾಗಿ ಆಗಬಹುದೆಂಬ ನಂಬಿಕೆ ಇದೆ ಈ ಸಭೆಗೆ ಹಾಜುರಾಗಿ ಯೋಜನೆ ಕೈ ಬಿಡುವಂತೆ ಕೇಳಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಟಿ.ಬಿ ಹರಿಕಾಂತ್ ,ಶಂಭು ಶಟ್ಟಿ, ಟಿ.ಟಿ ತಾಂಡೇಲ್ ಸೇರಿದಂತೆ ಮೀನುಗಾರ ಮುಖಂಡರು ಹಾಜುರಿದ್ದರು.
Leave a Reply

Your email address will not be published. Required fields are marked *