ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆ ಉಲ್ಬಣ- ಒಂದೇ ದಿನಕ್ಕೆ ಐದು ಪ್ರಕರಣ ಪತ್ತೆ

1009

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೊಂಕಿಯ ಸಂಖ್ಯೆಯಂತೆಯೇ ಮಂಗನಕಾಯಿಲೆಯ ಸೊಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಇಂದೂ ಕೂಡ 5 ಪ್ರಕರಣ ಕಾಣಿಸಿಕೊಳ್ಳುವುದರೊಂದಿಗೆ, ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಭಾನುವಾರ ಒಂದೇ ದಿನ ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ ನಾಲ್ಕು ಕೆ.ಎಫ್.ಡಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು.

ಇದು ಮುಂದುವರೆದು ಇಂದೂ ಕೂಡ ಒಂದೇ ದಿನ 5 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕೋರ್ಲಕೈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲೇ ಈ 5 ಪ್ರಕರಣಗಳು ಪತ್ತೆಯಾಗಿದ್ದು ಅಲ್ಲಿನ ಜನರು ಮತ್ತಷ್ಟು ಆತಂಕ ಪಡುವಂತೆ ಮಾಡಿದೆ.

ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲೇ 32 ಕೆ.ಎಫ್.ಡಿ ಪ್ರಕರಣಗಳು ದೃಢಪಟ್ಟಿವೆ.

ಕೋರ್ಲಕೈ ಆರೋಗ್ಯ ಕೇಂದ್ರಕ್ಕೆ ಬೆಳಗಾವಿ ಜಂಟಿ ನಿರ್ದೇಶಕರು ಭೇಟಿ ನೀಡಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.

ಸಂಜೆ ರಾಜ್ಯ ಆರೋಗ್ಯ ಮಹಾನಿರ್ದೇಶಕರ ಜೊತೆ ವಿಡಿಯೋ ಸಂವಾದ ನಡೆಯಲಿದ್ದು, ಮಂಗನಕಾಯಿಲೆಯ ಪರಿಸ್ಥಿತಿಗಳ ಬಗ್ಗೆ ಜಂಟಿ ನಿರ್ದೇಶಕರು ವರದಿ ಸಲ್ಲಿಸೋ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಚಿಕಿತ್ಸೆಗೆ ತೊಂದರೆ!


ಸಿದ್ದಾಪುರದಲ್ಲಿ ದಿನ ದಿಂದ ದಿನಕ್ಕೆ ಕೆ.ಎಫ್.ಡಿ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತ ಭಟ್ಕಳದಲ್ಲಿ ಕೊರೋ‌ನಾ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಗಮನ ಅತ್ತಕಡೆ ನೆಟ್ಟಿದೆ. ಹೀಗಾಗಿ ಪೆಬ್ರವರಿ ತಿಂಗಳಲ್ಲಿ ಸಿದ್ದಾಪುರ ಭಾಗದಲ್ಲಿ ಆರೋಗ್ಯ ಇಲಾಖೆ ತೆಗೆದುಕೊಂಡಿದ್ದ ಕ್ರಮಗಳು ಈಗ ಇಲ್ಲವಾದಂತಾಗಿದ್ದು ಆರೋಗ್ಯ ಇಲಾಖೆ ಕೊರೋನಾ ಕಡೆ ಹೆಚ್ಚು ಗಮನ ಕೊಟ್ಟಿದೆ.

ಇನ್ನು ಈ ಭಾಗದಲ್ಲಿ ಹೆಚ್ಚು ಕೃಷಿಕರು ಇರುವುದರಿಂದಾಗಿ ಕಾಡು ಭಾಗದಲ್ಲಿ ದರಕುಗಳನ್ನು ತರಲು ಹೋಗುತಿದ್ದಾರೆ. ಇದಲ್ಲದೇ ಕಾಡಿನ ಮಧ್ಯೆ ಗ್ರಾಮಗಳಿರಿವುದರಿಂದ ಹೆಚ್ವು ಸೊಂಕು ಹರಡುತ್ತಿದೆ.

ಈ ಬಗ್ಗೆ ಗಮನ ಹರಿಸಬಧಕಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ತೆಗೆದುಕೊಂಡ ಕ್ರಮದಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ತೆಗೆದುಕೊಳ್ಳುವ ಅವಷ್ಯಕತೆಗಳಿವೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ