BREAKING NEWS
Search

ಕೊಲ್ಲೂರು ದೇವಸ್ಥಾನದಲ್ಲಿ ಇಂದು ಸಾರ್ವಜನಿಕರಿಗೆ ದರ್ಶನ ಬಂದ್ !ಯಾಕೆ ಗೊತ್ತಾ?

505

ಉಡುಪಿ:- ಸದಾ ಭಕ್ತರಿಂದ ಗಿಜುಗುಡುತಿದ್ದ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಇಂದು ಭಕ್ತರ ಪಾಲಿಗೆ ನೋ ಎಂಟ್ರಿ.

ಬೆಳಗ್ಗೆ ಒಂಬತ್ತರಿಂದ ಸಂಜೆ ಆರು ಘಂಟೆ ವರೆಗೆ ದೇವಸ್ಥಾನ ಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ದೇವಸ್ಥಾನದ ಸುತ್ತಮುತ್ತ ಪೊಲೀಸ್ ಬಂದವಸ್ತ್ ಏರ್ಪಡಿಸಲಾಗಿದ್ದು ಗನ್ ಹಿಡಿದ ಪೊಲೀಸರೇ ಇಡೀ ದೇವಸ್ಥಾನ ವನ್ನು ಸುತ್ತುವರೆದಿದ್ದು ಯಾರೂ ದೇವಸ್ಥಾನ ದತ್ತ ಬರದಂತೆ ಬಿಗಿ ಬಂದವಸ್ತ್ ಕೈಗೊಳ್ಳಲಾಗಿದೆ.

ಹೌದು ಅರೇ ಇದೇನು ದೇವಸ್ಥಾನ ಕ್ಕೆ ಭಕ್ತರಿಗೆ ಪ್ರವೇಶ ನಿಷೇಧ ಎಂದು ನೀವು ಕೇಳಬಹುದು ಹೌದು ಇಂದು
ಕೊಲ್ಲುರು ಮೂಕಾಂಬಿಕಾ ದರ್ಶನಕ್ಕೆ ಲಂಕಾ ಪ್ರಧಾನಿ ಭೇಟಿ ನೀಡಲಿದ್ದಾರೆ.

ಶ್ರೀಲಂಕ ಪ್ರಧಾನಿ ಆಗಮಿಸುತ್ತಿರುವುದು.

ಶ್ರೀಲಂಕ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಆಗಮಿಸಲಿದ್ದಾರೆ.

ದೇವಿಯ ದರ್ಶನ ಬಳಿಕ ದೇಗುಲದೊಳಗೆ ನವಚಂಡಿಯಾಗ ನಡೆಯಲಿದ್ದು ನವಚಂಡಿಯಾಗದ ಪೂರ್ಣಾಹುತಿಯಲ್ಲಿ ಶ್ರೀಲಂಕಾ ಪ್ರಧಾನಿ ಭಾಗವಹಿಸಲಿದ್ದಾರೆ.

ಈ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಬಿಗಿ ಬಂದವಸ್ತ್ ಕಲ್ಪಿಸಲಾಗಿದ್ದು ಭಕ್ತರಿಗೆ ದರ್ಶನಕ್ಕೆ ಇಂದು ನಿರ್ಭಂದ ಹೇರಲಾಗಿದೆ.




Leave a Reply

Your email address will not be published. Required fields are marked *