ಕೊಲ್ಲೂರಿನಿಂದ ಕೊಡಚಾದ್ರಿಗೆ ಕೇಬಲ್ ಕಾರ್ !

615

ಉಡುಪಿ :- ಕೊಡಚಾದ್ರಿ ಬೆಟ್ಟ ಏರಿ ಅಲ್ಲಿನ ಪರಿಸರ ವೀಕ್ಷಣೆ ಮಾಡಬೇಕು ಎಂದ್ರೆ ಅಲ್ಲಿಗೆ ಬರುವ ಪ್ರವಾಸಿಗರ ಪರದಾಟವೇ ಕೇಳತೀರದು. ಅಲ್ಲಿನ ಬೆಟ್ಟ ಏರಲು ರಸ್ತೆ ಇದ್ದರೂ, ಜೀಪ್ ಬಿಟ್ಟರೆ ಬೇರೆ ವಾಹನ ಇಲ್ಲ.ಬೈಕ್ ನಲ್ಲಿ ಹೋಗುವುದು ಸಹ ದುಸ್ತರ. ಕಡಿದಾದ ರಸ್ತೆ ವಿಸ್ತರಣೆಗೆ ಪರಿಸರ ನಾಶ, ಬೆಟ್ಟದ ಸವಕಳಿ ಹಾಗೂ ಪರಿಸರ ಸೌಂದರ್ಯಕ್ಕೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಸಂಪರ್ಕ ವ್ಯವಸ್ಥೆಗೆ ಹಿನ್ನೆಡೆಯಾಗಿತ್ತು.

ಆದರೆ ಈಗ ಶೀಘ್ರದಲ್ಲಿ ಕೇಬಲ್ ಕಾರ್ ಮೂಲಕ ಸಂಪರ್ಕದಿಂದ ಸುಲಭವಾಗಿ ಕೊಡಚಾದ್ರಿ ಬೆಟ್ಟದ ನೆತ್ತಿ ಮೇಲೆ ಏರಬಹುದಾಗಿದೆ.

ಹೌದು ಈ ಮಹತ್ವಾಕಾಂಕ್ಷಿ ಯೋಜನೆಯ ಡಿಪಿಆರ್‌ಗೆ ಸೆ.15ರಂದು ಬೆಳಗ್ಗೆ 8ಕ್ಕೆ ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಈ ಯೋಜನೆ ಅನುಷ್ಠಾನವಾದರೆ, ಕೊಲ್ಲೂರಿಂದ ಕೊಡಚಾದ್ರಿ ಬೆಟ್ಟದ ತುದಿ ಏರಲು 15 ನಿಮಿಷಗಳು ಮಾತ್ರ ಸಾಕು.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ವ್ಯಾಪ್ತಿಯ ಕೊಡಚಾದ್ರಿ ಬೆಟ್ಟದಿಂದ ಕೊಲ್ಲೂರಿಗೆ ಕೇಬಲ್ ಕಾರು ಸಂಪರ್ಕ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಸಂಸದ ಬಿ.ವೈ.ರಾಘವೇಂದ್ರ ಅವರ ಮೊದಲು ಪ್ರಯತ್ನಿಸಿದ್ದರು . ಇದರ ಪ್ರತಿಫಲವಾಗಿ ಕೊಲ್ಲೂರು ಮತ್ತು ಕೊಡಚಾದ್ರಿ ರಸ್ತೆ ಮಾರ್ಗ 32 ಕಿ.ಮೀ ಇದ್ದು, ಕೇಬಲ್ ಕಾರ್ ಮೂಲಕ ಹೋದರೆ 11 ಕಿ.ಮೀ. ಪರಿಸರದ ರಮ್ಯ ನೋಟಗಳ ನಡುವೆ ರೋಚಕ ಪ್ರಯಾಣದ ಅನುಭವ ಸಿಗುವ ಜತೆಗೆ, ಸಮಯವೂ ಉಳಿಯಲಿದೆ.

ಪ್ರವಾಸೋದ್ಯಮ ಇಲಾಖೆ ಕೇಬಲ್ ಕಾರ್ ಯೋಜನೆಯ ಅನುಷ್ಠಾನ ಬಗ್ಗೆ ಸಮೀಕ್ಷೆ ನಡೆಸಿ ಪರಿಸರ ಅರಣ್ಯ ಇಲಾಖೆಗಳಿಂದ ನಿರಾಕ್ಷೇಪಣ ಪತ್ರ ಹಾಗೂ ಕೇಂದ್ರ ಸರ್ಕಾರದ ಅನುಮತಿಗೆ ಕಳುಹಿಸಲಾಗಿದ್ದು ಶೀಘ್ರದಲ್ಲಿ ಅನುಮತಿ ಸಿಗುವ ನಿರೀಕ್ಷೆಗಳಿವೆ.

ಪ್ರವಾಸಿಗರು ಹೆಚ್ಚಾಗಿ ಬರುವ ಉಡುಪಿ ಭಾಗದ ಕೊಲ್ಲೂರಿನಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿರುವ ಕೊಡಚಾದ್ರಿಗೆ ಕೇಬಲ್ ಕಾರ್ ಮಾರ್ಗ ಅನುಷ್ಠಾನವಾದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಜೊತೆ ಅತೀ ಹಿಂದುಳಿದ ಹೊಸನಗರ ತಾಲೂಕು ಸಹ ಅಭಿವೃದ್ಧಿಯಾಗಿವ ಜೊತೆಗೆ ಇಲ್ಲೇ ಸಮೀಪದ ಸಿಗಂದೂರು ಕ್ಷೇತ್ರವು ಅಭಿವೃದ್ದಿಯಾಗಲಿದ್ದು ಇದರ ಅನುಷ್ಟಾನದಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ,ಸಾಗರ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರಗಳಿಗೆ ಪ್ರವಾಸೋಧ್ಯಮ ಕ್ಷೇತ್ರಗಳು ಅಭಿವೃದ್ಧಿ ಕಾಣಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ