ಹಳಿಯಾಳ/ಕೊಪ್ಪಳ :- ನವೆಂಬರ್ ಎರಡರಂದು ಗಂಗಾವತಿಯಲ್ಲಿ ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ನಗರಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠರನ್ನ ನಿನ್ನೆ ಗಂಗಾವತಿಯ ಬಾರ್ ಎಂಡ್ ರೆಸ್ಟೋರೆಂಟ್ ನಿಂದ ಸಿನಿಮೀಯ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರು ಅಪಹರಿಸಿದ್ದರು.ಈ ಕುರಿತು ಗಂಗಾವತಿ ಠಾಣೆಯಲ್ಲಿ ಎಂಟು ಜನ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದ್ದು ಗಂಗಾವತಿ ಪೊಲೀಸರ ಮಾಹಿತಿ ಮೇಲೆ ಹಳಿಯಾಳದ ಪೊಲೀಸರು ಆತನನನ್ನು ಹಳಿಯಾಳದಲ್ಲಿ ವಸತಿ ಗೃಹಕ್ಕೆ ಕರೆದೊಯ್ಯುವ ವೇಳೆ ಬಂಧಿಸಿದ್ದಾರೆ.ಈ ವೇಳೆ ಓರ್ವ ಬಿಜೆಪಿಯ ಕಾರ್ಯಕರ್ತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.


ಹಳಿಯಾಳ ಪೊಲೀಸರದ ಪ್ರಕರಣ ಮುಚ್ಚುವ ಪ್ರಯತ್ನ!
ಇನ್ನು ಹಳಿಯಾಳದ ಪೊಲೀಸರು ಅಪಹರಣಕಾರರನ್ನು ಹಿಡಿದರೂ ಸಂದಾನ ರಾಜಿ ಮಾಡುವ ಪ್ರಯತ್ನದಲ್ಲಿದ್ದು ಪ್ರಕರಣ ತಿರುಚುವ ಪ್ರಯತ್ನ ಮಾಡಿದ್ದರು ಎಂದು ಕಾಂಗ್ರೆಸ್ ನ ರಾಜ್ಯ ಮಾಧ್ಯಮ ವಕ್ತಾರರು ಹಾಗೂ ಅಪಹರಣಕ್ಕೊಳಗಾದ ಹಿರೇಮಠ್ ಸಹೋದರ ದೂರಿದ್ದಾರೆ. ಇನ್ನು ಈ ಕುರಿತು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ರವರನ್ನು ಮಾಧ್ಯಮ ಸಂಪರ್ಕಿಸಿದ್ದು ಇಂದು ಸಂಜೆ ಗಂಗಾವತಿ ಪೊಲೀಸರಿಗೆ ಆರೋಪಿಗಳನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.ಆದರೇ ಠಾಣೆಯಲ್ಲಿ ಪೊಲೀಸ್ ಡೈರಿಯಲ್ಲಿ ಮಾಹಿತಿದಾಖಲಿಸಿ ನಂತರ ಗಂಗಾವತಿ ಪೊಲೀಸರ ಸುಪರ್ಧಿಗೆ ನೀಡುವುದಾಗಿ ತಿಳಿಸಿದ್ದಾರೆ.