ಕಾರವಾರ :- ಪಂಚಮಸಾಲಿಗಳು ಹೋರಾಟ ಮಾಡುತ್ತಿರುವುದು ತಪ್ಪಿಲ್ಲ,ಮಿಸಲಾತಿ ಸೂಕ್ಷ್ಮ ವಿಚಾರ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದರು.
ಇಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಡ್ತಿ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾನು ಸ್ಪರ್ದಿಸುವುದಿಲ್ಲ,ಇದು ಗಾಳಿ ಸುದ್ದಿ,ಕೇವಲ ಉಸ್ತುವಾರಿ ಮಾತ್ರ ,ನಾವು ಈ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದರು.
ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಅಲ್ಲಿನ ಸರ್ಕಾರ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ,ಮಹಾರಾಷ್ಟ್ರ ಸರ್ಕಾರದ್ದು ಮನೆಯೊಂದು ಮೂರು ಬಾಗಿಲು,ಅವರಲ್ಲೇ ಸಮ್ಮತವಿಲ್ಲ ಎಂದರು.

ಗಡಿ ಕನ್ನಡ ಶಾಲೆ ಅಭಿವೃದ್ಧಿಗೆ ಸರ್ಕಾರದ ಪ್ರಯತ್ನ
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಇರುವ ಕನ್ನಡ ಶಾಲೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಲಾಗುತ್ತದೆ. ಹಲವು ಶಾಲೆಗಳು ಹಿಂದೆ ಬಿದ್ದಿವೆ,ಅವುಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಸಾರಿಗೆ ನೌಕರರ ಬೇಡಿಕೆ ಶೀಘ್ರ ಈಡೇರಿಕೆ
ಕೆ.ಎಸ್.ಆರ್. ಟಿ.ಸಿ ನೌಕರರು ಸರ್ಕಾರದ ಮುಂದೆ ಹತ್ತು ಬೇಡಿಕೆಯನ್ನು ಇಟ್ಟಿದ್ದರು. ಈ ಹತ್ತು ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ನಾಲ್ಕು ಬೇಡಿಕೆ ಈಡೇರಿಸಲು ಸಮಯಾವಕಾಶ ಬೇಕು. ನೌಕರರ ಸಂಘಟನೆಗಳು ಮೂರ್ನಾಲ್ಕು ಇದೆ. ಪ್ರತಿಯೊಬ್ಬರೂ ಒಂದೊಂದು ಬಾರಿ ಒಂದೊಂದು ಬೇಡಿಕೆ ಇಡುತಿದ್ದಾರೆ. ನೌಕರರೊಂದಿಗೆ ಇನ್ನೆರೆಡು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ,ನಾವು ಒಪ್ಪಿಕೊಂಡ ನೌಕರರ ಬೇಡಿಕೆ ಈಡೇರಿಸುತ್ತೇವೆ ಎಂದರು.
ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂಬ ಸಿದ್ದರಾಮಯ್ಯ ಹೇಳಿದ್ದಾರೆ. ಕೊರೊನಾ ಬಂದ ನಂತರ ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗಿರುವುದು ನಿಜ.
ಸಿದ್ದರಾಮಯ್ಯ ನಮ್ಮನ್ನ ಟೀಕೆ ಮಾಡ್ತಾನೆ ಇರ್ತಾರೆ
ಅವರಿರೋದೇ ಟೀಕೆ ಮಾಡೋಕೆ, ಮತ್ತೇನೂ ಹೊಗಳ್ತಾರಾ ,ಎಂದು ಟಾಂಗ್ ನೀಡಿದರು.