BREAKING NEWS
Search

ಪ್ರಯಾಣಿಕರಿಗೆ ಶಾಕ್! ಕೆ.ಎಸ್ ಆರ್.ಟಿ.ಸಿ ದರ ಶೇಕಡ 12 ಹೆಚ್ಚಳ

323

ಬೆಂಗಳೂರು:- ಕೆ.ಎಸ್.ಆರ್.ಟಿ.ಸಿ ,ವಾಯುವ್ಯ ಸಾರಿಗೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರವನ್ನು ಶೇಕಡ 12 ರಷ್ಟು ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಬಸ್ ಪ್ರಯಾಣದರ ಏರಿಕೆಯು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.ಆದರೆ ಬಿ.ಎಮ್.ಟಿ.ಸಿ ಬಸ್ ದರವನ್ನು ಮಾತ್ರ ಪರಿಷ್ಕರಣೆ ಮಾಡಿಲ್ಲ.

ಪೆಟ್ರೋಲ್ ,ಡಿಸೆಲ್ ದರ ಹೆಚ್ಚಳ ಹಿನ್ನಲೆಯಲ್ಲಿ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದ್ದು ಇಂದಿನ ರಾತ್ರಿಯಿಂದಲೇ ದರ ಹೆಚ್ಚಳವಾಗುತಿದ್ದು ಪ್ರಯಾಣಿಕರಿಗೆ ಹೆಚ್ಚಿನ ಹೊರೆಯಾಗಲಿದೆ.




Leave a Reply

Your email address will not be published. Required fields are marked *