BREAKING NEWS
Search

ಬರ್ಗಿಯಲ್ಲೊಬ್ಬ ಬರಗಾಸುರ! ಬರಗಿದ್ದು ಬಡ ರೈತರ ಹಣ!

1305

ಕಾರವಾರ:- ರೈತರ ಸಾಲಮನ್ನ ಹೆಸರಲ್ಲಿ ಸಹಕಾರಿ ಸಂಘದ ಕಾರ್ಯದರ್ಶಿನೋರ್ವ ರೈತರ ಖಾತೆಗೆ ಕನ್ನ ಹಾಕಿ ಕೊಟ್ಯಾಂತರ ರೂ ಲಪಟಾಯಿಸಿ ತಲೆಮರೆಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ರೈತರಿಗೆ ವಂಚನೆ ಮಾಡಿದ ಲಕ್ಷ್ಮಣ್ ಪಟಗಾರ್

ಕುಮಟಾ ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ ಈ ಭಾಗದ ರೈತರು ತಮಗೆ ಉಪಯುಕ್ತತೆಗಾಗಿ ಬೆಳೆಸಾಲವನ್ನ ತೆಗೆದುಕೊಂಡಿದ್ರು ಕಳೆದ ವರ್ಷ ಸಿದ್ದರಾಮಯ್ಯ ಸರಕಾರ ರೈತರ ಸಾಲಮನ್ನಾ ಮಾಡಿತ್ತು ಬಳಿಕ ಕುಮರಾಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲೂ ಕೂಡಾ ರೈತರ ಸಾಲ‌ಮನ್ನ ಮಾಡಲಾಗಿತ್ತು ಇದು ಇಲ್ಲಿನ ರೈತರಿಗೆ ಅನ್ವಯವಾಗುತ್ತಿತ್ತು ಹೀಗಾಗಿ ಇಲ್ಲಿನ ರೈತರು ತಮ್ಮ ಸಾಲಮನ್ನ ವಾಗಿದೆ ಎಂದು ಕೊಂಡಿರುವಾಗ್ಲೆ ಇಲ್ಲಿನ ಬ್ಯಾಂಕಿನ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಇವರು ತೆಗೆದುಕೊಂಡಿದ್ದ ಸಾಲದ ಮೊತ್ತಕ್ಕಿಂತ ಒಂದು ಪಟ್ಟು ಹೆಚ್ಚು ಸಾಲ ಬರೆಸಿಕೊಂಡು ಉಳಿದ ಮೊತ್ತವನ್ನು ತನ್ನ ಖಾತೆಗೆ ಇಳಿಸಿ ರೈತರ ಹೆಸರಿನಲ್ಲಿದ್ದ ಹಣಕ್ಕೆ‌ ಕನ್ನ ಹಾಕಿದ್ದಾನೆ.

ರೈತರು ಸಾಲಮನ್ನದ ಹಣವನ್ನ ಪಡೆದುಕೊಂಡಿದ್ದಾರೆ ಎನ್ನೋದಕ್ಕೆ ರೈತರಿಗೆ ಯ್ಯಾಮಾರಿಸಿ ಅವರಿಂದ ಬುದ್ದಿವಂತಿಕೆಯಲ್ಲಿ ದಾಖಲೆ‌ಪತ್ರಕ್ಕೆ ಸಹಿ ಕೂಡಾ ಮಾಡಿಕೊಂಡಿದ್ದಾನೆ.

ಇವೆಲ್ಲ ವಿಚಾರ ಈಗ ರೈತರ ಗಮನಕ್ಕೆ ಬಂದಿದ್ದು ಕೂಡಲೆ ತಮಗೆ ಸೇರಬೇಕಾದ ಕೊಟ್ಯಾಂತರ ರು ಹಣವನ್ನ ತಮಗೆ ಸೇರಬೇಕು ಎಂದು ಆಗ್ರಹಿಸಿ ಇಂದು ಕುಮಟಾ ಕೆಡಿಸಿಸಿ ಬ್ಯಾಂಕ್ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತರು ಕಾರ್ಯದರ್ಶಿ ಲಕ್ಷ್ಮಣ ಪಟಗಾರ ವಿರುದ್ದ ಪ್ರತಿಭಟನೆ ನಡೆಸಿದ್ರು.

ಈಗಾಗಲೆ ವಂಚನೆ ಮಾಡಿದ ಲಕ್ಷ್ಮಣ ಪಟಗಾರ ತಲೆಮರೆಸಿಕೊಂಡಿದ್ದಾನೆ.

ರೈತರು ಕೂಡಲೆ ತಮ್ಮ ಹಣ ತಮ್ಮ ಖಾತೆಗೆ ಸಂದಾಯ ಮಾಡದೆ ಇದ್ದಲ್ಲಿ ಉಗ್ರ ಹೋರಾಟ ನಡೆಸುವದಾಗಿ ಎಚ್ಚರಿಸಿದ್ದಾರೆ.

ಸತ್ತವರ ಹೆಸರಿನಲ್ಲೂ ದೋಖ!

ಈತ ಇಷ್ಟಕ್ಕೇ ಸುಮ್ಮನಾಗಲಿಲ್ಲ ಸತ್ತವರ ಹೆಸರಿನಲ್ಲಿಯೂ ಹಣ ವಂಚನೆ ಮಾಡಿದ್ದು ಕೋಟಿ ಕೊಟಿ ಲೂಟಿ ಹೊಡೆದಿದ್ದಾನೆ .

ಕೆಲವರ ಬಳಿ ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ತೆರಳಿ ದಾಖಲಾತಿ ,ಚಲನ್ ಗೆ ಅವರ ಮುಗ್ದತೆ ಬಳಸಿ ಸಹಿ ಹಾಕಿಸಿಕೊಂಡು ಹಣ ದೋಚಿದ್ದಾನೆ.

ಇನ್ನು ಕೆಲವರಿಗೆ ಅವರಿಗೆ ತಿಳಿಯದಂತೆ ದಾಖಲೆ ಸೃಷ್ಟಿಸಿ ವಂಚಿಸಿದ್ದಾನೆ.

ಈ ಕುರಿತು ಕೆಡಿಸಿಸಿ ಬ್ಯಾಂಕ್ ಗೆ ರೈತರು ದೂರು ಕೊಟ್ಟಿದ್ದಾರೆ. ಆದರೇ ಕಾರ್ಯದರ್ಶಿ ವಿರುದ್ಧ ಈವರೆಗೂ ಠಾಣೆಯಲ್ಲಿ ಪ್ರಕರಣ ದಾಖಲಿಸದ ರೈತರು ಬ್ಯಾಂಕ್ ನಲ್ಲಿಯೇ ಆದ ಅನ್ಯಾಯ ಸರಿಪಡಿಸಬೇಂದು ಒತ್ತಾಯಿಸಿದ್ದಾರೆ.

ತನಿಖೆ ಪ್ರಗತಿಯಲ್ಲಿ !

ಈಗಾಗಲೇ ಈ ಕುರಿತು ಕೆಡಿಸಿಸಿ ಬ್ಯಾಂಕ್ ನಿಂದ ತನಿಖೆ ನಡೆಸಲಾಗುತಿದ್ದು ಶೇಕಡಾ 40ಭಾಗ ತನಿಖೆ ಕೈಗೊಳ್ಳಲಾಗಿದ್ದು ಬರುವ ಶುಕ್ರವಾರ ದಲ್ಲಿ ತನಿಖೆ ಪೂರ್ಣ ವಾಗಲಿದೆ.

ಈ ವರೆಗೂ ಗ್ರಾಹಕರು ಕೆಡಿಸಿಸಿ ಬ್ಯಾಂಕ್ ಗೆ ಬಂದು ದೂರು ಕೊಟ್ಟಿರಲಿಲ್ಲ,ಹಿಂದೆ ಇದೇ ರೀತಿ ಆದಾಗ ಕೆಡಿಸಿಸಿ ಬ್ಯಾಂಕ್ ಅಧಿಕಾರಿಗಳು ಸರಿಪಡಿಸಿದ್ದರು.
ಆದರೇ ಈಗ ಎಲ್ಲಾ ಮುಗಿದ ಮೇಲೆ ದೂರು ನೀಡಲಾಗಿದೆ ತನಿಖೆ ನಡೆಸಲು ಸಮಯ ಬೇಕು,ತಕ್ಷಣದಲ್ಲಿ ಆಗುವುದಿಲ್ಲ ,ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ,ಆದರೇ ಈ ವ್ಯವಹಾರದಲ್ಲಿ ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿಗಳ ಪಾತ್ರವಿಲ್ಲ ಎಂದು ಕೆಡಿಸಿಸಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಉಪ ನಿರ್ದೇಶಕ ಶ್ಯಾಮ್ ಶಾಸ್ತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Leave a Reply

Your email address will not be published. Required fields are marked *