ಕುಮಟಾ:ಸಂಬಳ ಪಾವತಿಸಲು BSNL ದಿನಗೂಲಿ ನೌಕರರ ಒತ್ತಾಯ

40

ಕುಮಟ:-ಆರು ತಿಂಗಳಿಂದ ಸಂಬಳ ಪಾವತಿಯಾಯಾಗದ ಹಿನ್ನೆಲೆಯಲ್ಲಿ ಹೋರಾಟ ನಡೆಸುತ್ತಿರುವ ಜಿಲ್ಲೆಯ ಬಿಎಸ್‍ಎನ್‍ಎಲ್ ಗುತ್ತಿಗೆ ಆಧಾರಿತ ದಿನಗೂಲಿ ನೌಕರರು ಕುಮಟಾದ ಬಿಎಸ್‍ಎನ್‍ಎಲ್ ಕಾರ್ಯಾಲಯಕ್ಕೆ ಆಗಮಿಸಿ ಬಿಎಸ್‍ಎನ್‍ಎಲ್ ನ ಜನರಲ್ ಮ್ಯಾನೇಜರ್ ರಾಜಕುಮಾರ್ ಅವರನ್ನು ಭೇಟಿಯಾಗಿ ಸಂಬಳವನ್ನು ಬೇಗ ಪಾವತಿಸಬೇಕೆಂದು ಮನವಿ ಮಾಡಿದರು.

ಪ್ರತಿ ತಿಂಗಳು ಸಂಬಳ ಸರಿಯಾದ ಸಮಯಕ್ಕೆ ಬಾರದಿದ್ದರೇ ಜೀವನ ನಡೆಸುವುದು ಕಷ್ಟವಾಗಿರುವ ಈಗಿನ ದಿನಗಳಲ್ಲಿ ಬಿಎಸ್‍ಎನ್‍ಎಲ್ ತನ್ನ ಗುತ್ತಿಗೆ ಆಧಾರಿತ ದಿನಗೂಲಿ ನೌಕರರಿಗೆ ಬರೋಬ್ಬರಿ 6 ತಿಂಗಳಿನಿಂದ ಸಂಬಳವನ್ನು ಕೊಡದೇ ಸತಾಯಿಸುತ್ತಿದ್ದು,ಕಾರ್ಯಾಲಯಕ್ಕೆ ಆಗಮಿಸಿದ ನೌಕರರು ಅಧಿಕಾರಿಗಳ ಎದುರು ತಮ್ಮ ಅಳಲನ್ನು ತೋಡಿಕೊಂಡರು.

ಇನ್ನು ಇದೇ ಸಂಧರ್ಭದಲ್ಲಿ ಕಾರ್ಯಾಲಯದಲ್ಲಿ ಉಪಸ್ಥಿತರಿದ್ದ ಜನರಲ್ ಮೆನೆಜರ್ ರಾಜಕುಮಾರ ಮಾತನಾಡಿ, ನಿಮ್ಮ ಸಮಸ್ಯೆ ಗಮನದಲ್ಲಿದೆ. ನಿಮ್ಮ ಪರಿಶ್ರಮದ ಆದಾಯ ಎಲ್ಲೂ ಹೋಗುವುದಿಲ್ಲ. ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಕಾರಣಾಂತರದಿಂದ ಸಂಬಳ ನೀಡುವುದು ವಿಳಂಬವಾಗಿದೆ.

ಈ ತಿಂಗಳಾಂತ್ಯದೊಳಗೆ ಸಾಧ್ಯವಾದಷ್ಟು ಸಂಬಳ ಪಾವತಿ ಮಾಡಿಸುವುದಾಗಿ ಭರವಸೆ ನೀಡಿದರು.
ಕುಮಟಾ ಹಾಗೂ ಹೊನ್ನಾವರ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಬಿಎಸ್‍ಎನ್‍ಎಲ್ ದಿನಗೂಲಿ ನೌಕರರಾದ ಗೋವಿಂದ ಮುಕ್ರಿ, ಮೊದಲಾದವರು ಉಪಸ್ಥಿತರಿದ್ದರು.

-ಚಿತ್ರ ಮಾಹಿತಿ-ಮಯೂರ್ ಪಟಗಾರ್ ,ಕುಮಟಾ
Leave a Reply

Your email address will not be published. Required fields are marked *

error: Content is protected !!