BREAKING NEWS
Search

ಕುಮಟಾದಲ್ಲಿ ಪುರಸಭೆಯಿಂದ ಮನೆ ಮನೆಗೆ ತರಕಾರಿ ಕಿಟ್! ಉಚಿತವಾಗಿ ತರಕಾರಿ ಹಂಚಿ ಮಾದರಿಯಾದ ಶಾಸಕ ದಿನಕರ್ ಶಟ್ಟಿ

413

ಕಾರವಾರ :- ಕುಮಟಾ ಪಟ್ಟಣದಲ್ಲಿ ಕೊರೋನ ನಿಯಂತ್ರಣ ಕುರಿತಾದ ಲಾಕ್‌ಡೌನ್ ಕಾರಣದಿಂದಾಗಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳದೇ ಮನೆಯಲ್ಲೇ ಇರುವ ಮೂಲಕ ಸಹಕಾರ ನೀಡಿದ್ದಾರೆ.

ಕುಮಟಾ ಪುರಸಭೆಯ ಕಾಳಜಿಯಿಂದ ದೈನಂದಿನ ಹಾಲಿನ ಪೂರೈಕಯಲ್ಲಿ ವ್ಯತ್ಯಯವಾಗದೇ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಯಿತು.

ದಿನಸಿ ವಸ್ತುಗಳ ಪೂರೈಕೆಯು ಪ್ರಾರಂಭಿಕ ಹಂತದಲ್ಲಿದ್ದು ಜನರಿಗೆ ಒಂದಿಷ್ಟು ತೊಂದರೆಗಳಾಗಿದ್ದವು.

ಆದರೆ ತರಕಾರಿ ಪೂರೈಕೆಯಲ್ಲಿ ಪುರಸಭೆಯು ಹೊಸ ಯೋಜನೆ ರೂಪಿಸಿದ್ದು ಇದರಂತೆ ವ್ಯಾಪಾರಸ್ತರು ಒಂದು ಕುಟುಂಬಕ್ಕೆ ಒಂದು ಕಿಟ್ 2೦೦.ರೂ ನಿಗಧಿಗೂಳಿಸುವ ಮೂಲಕ ಸರಗವರಿಗೂ ಸಮಾನ ಪಾಲು ಕೊಡಿಸುವ ಪ್ರಯತ್ನವನ್ನು ಪುರಸಭೆ ಮಾಡಿದೆ.

ಹೊಸಹೆರವಟ್ಟಾ, ಬಗ್ಗೋಣ, ನೆಲ್ಲಿಕೇರಿ, ಚಿತ್ರಿಗಿ, ವನ್ನಳ್ಳಿ, ಕೆಲ ಪ್ರದೇಶಗಳಲ್ಲಿ ತರಕಾರಿಯನ್ನು ವಿತರಿಸುವಸ್ಟರಲ್ಲಿಯೇ ತರಕಾರಿ ಖಾಲಿಯಾಗಿರುವುದರಿಂದ ವ್ಯಾಪಾರಸ್ತರು ಮಾಲಿಲ್ಲದೆ ಗ್ರಾಹಕರಿಗೆ ಬರಿಗೈ ತೋರಿಸುವಂತಾಗಿತ್ತು.

ಆದರೇ ಪುರಸಭೆ ತರಕಾರಿ ಕಿಟ್ ಕಾರ್ಯರೂಪಕ್ಕೆ ತಂದಿದ್ದು ಸುಮಾರು 800 ತರಕಾರಿ ಕಿಟ್ ವಿತರಿಸಿದ್ದು ನಗರದಲ್ಲಿ 7500 ಕುಟುಂಬಗಳಿದ್ದು ಮುಂದಿನ ದಿನಗಳಲ್ಲಿ ಈ ಕಿಟ್ ಎಲ್ಲರಿಗೂ ಸಿಗಲು ಅನುಕೂಲ ಮಾಡಿಕೊಡಲಿದೆ.

ಶಾಸಕ ದಿನಕರ್ ಶಟ್ಟಿ ಮನೆಯಲ್ಲಿ ಉಚಿತ ತರಕಾರಿ ವಿತರಣೆ.

ಈ ಹಿಂದೆ ಏಳನೂರು ಜನ ಬಡ ಆಟೋ ಚಾಲಕರಿಗೆ ತಮ್ಮ ವಯುಕ್ತಿಕ ಹಣ ಕರ್ಚುಮಾಡಿ ತಲಾ ಒಂದು ಸಾವಿರದಂತೆ ಏಳು ಲಕ್ಷ ಹಣವನ್ನು ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ನೀಡುವ ಮೂಲಕ ಉದಾರತೆ ತೋರಿದ್ದ ಕುಮಟಾ ಶಾಸಕರು ಇಂದು ತರಕಾರಿಯನ್ನು ತಮ್ಮ ಮನೆಯಲ್ಲಿ ಉಚಿತವಾಗಿ ಹಂಚುವ ಮೂಲಕ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ.

ಕುಮಟಾ ಪುರಸಭೆ ಪ್ರಕಟಣೆ



Leave a Reply

Your email address will not be published. Required fields are marked *