ರಾಘವೇಶ್ವರ ಶ್ರೀ ಗಳ ದಿಟ್ಟ ಹೆಜ್ಜೆ ದೇಶಕ್ಕೆ ಮಾದರಿ : ಸುಬ್ರಾಯ ವಾಳ್ಕೆ

154

ಕುಮಟಾ : ತಾಲೂಕಿನ ಹೊಸಾಡದ ಅಮೃತಧಾರಾ ಗೋ ಶಾಲೆ ಯಲ್ಲಿ ಗೋ ಸಂಧ್ಯಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸುಬ್ರಾಯ ವಾಳ್ಕೆ ಶ್ರೀ ರಾಘವೇಶ್ವರ ಶ್ರೀಗಳು ನಮಗೆಲ್ಲ ಮಾರ್ಗದರ್ಶಕರು,ಅವರು ಗೋವಿನ ಬಗ್ಗೆ ತೆಗೆದುಕೊಂಡ ನಿಲುವು, ದೇಸಿ ಗೋ ಸಂರಕ್ಷಣೆಗೆ ಇಟ್ಟ ದಿಟ್ಟ ಹೆಜ್ಜೆ ದೇಶಕ್ಕೆ ಮಾದರಿ.

ಅವರ ಪ್ರತಿಯೊಂದು ಕಾರ್ಯವೂ ಸಮಾಜಕ್ಕೆ ಪೂರಕವಾಗಿರುತ್ತದೆ, ಹಾಗಾಗಿಯೇ ಶ್ರೀ ಗಳು ದೇಶದುದ್ದಕ್ಕೂ ಅಸಂಖ್ಯಾತ ಭಕ್ತರ ಮನದಲ್ಲಿ ನೆಲೆಸಿದ್ದಾರೆ.

ಈ ಅಮೃತಧಾರಾ ಗೋ ಶಾಲೆ ಅನೇಕ ಗೋವುಗಳಿಗೆ ಆಶ್ರಯತಾಣ.. ಕಟುಕರ ಕೈಯಲ್ಲಿ ಸಿಲುಕಿದ್ದ ಅವೆಷ್ಟೋ ಗೋವುಗಳನ್ನು ಗೋ ಭಕ್ತರು ರಕ್ಷಿಸಿ ಇಲ್ಲಿ ತಂದು ಬಿಟ್ಟು ಅವುಗಳು ಪೃಕೃತಿಯಲ್ಲೇ ಸ್ವಚ್ಛಂದ ಜೀವನ ನಡೆಸಲು ಶ್ರಮಿಸಿದ್ದಾರೆ.

ಇದಕ್ಕೆ ಶ್ರೀ ಗಳ ಅಪೇಕ್ಷೆ ಹಾಗೂ ಆಶೀರ್ವಾದ ವೇ ಕಾರಣ.
ನಮ್ಮ ದೇಶದಲ್ಲಿ ಗೋ ಹತ್ಯೆ ನಿಷೇಧ ಆಗಬೇಕು ಎನ್ನುವುದು ಶ್ರೀ ಗಳ ಹೋರಾಟ ಕ್ಕೆ ನಾವೆಲ್ಲ ಕೈ ಜೋಡಿಸೋಣ ಎಂದರು.

ವೇದಿಕೆಯಲ್ಲಿ ಮುರಳೀಧರ ಪ್ರಭು, ವಕೀಲರಾದ ನಾಗರಾಜ ನಾಯಕ, ಪ್ರಮೋದ ಹೆಗಡೆ, ಸುಬ್ರಾಯ ಭಟ್ಟ ಇನ್ನಿತರರು ಉಪಸ್ಥಿತರಿದ್ದರು…




Leave a Reply

Your email address will not be published. Required fields are marked *

error: Content is protected !!