BREAKING NEWS
Search

ಕುಮಟಾ-ಮಾಹಿತಿ ಕೊಡದ ಅಧಿಕಾರಿಗೆ ಬಿತ್ತು ದಂಡ!

562

ಕಾರವಾರ/ಕುಮಟಾ:- ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿದ ಮಾಹಿತಿ ಪೂರೈಸದೇ ನಾಲ್ಕು ವರ್ಷಗಳ ಕಾಲ ಮಹಿಳೆಯೋರ್ವಳನ್ನು ಸತಾಯಿಸಿದ್ದ ಕುಮಟಾದ ಹಿಂದಿನ ತಾಲೂಕು ದಂಡಾಧಿಕಾರಿಯವರಿಗೆ ಮಾಹಿತಿ ಹಕ್ಕು ಆಯೋಗ ದಂಡ ವಿಧಿಸಿ ಆದೇಶಿಸಿದೆ.

ನಗರದ ಚಿತ್ರಿಗಿಯ ರಾಮದೇವಸ್ಥಾನ ರಸ್ತೆಯ ನಿವಾಸಿ ಸೀತಾ ರಾಮಕೃಷ್ಣ ಭಟ್ ಅವರು ಸರ್ವೆನಂ.65/2 ಬ ಗೆ ಸಂಬಂಧಿಸಿ 2015 ರಲ್ಲಿ ಅಂದಿನ ತಹಸೀಲ್ದಾರ್ ಚಂದ್ರಶೇಖರ ಕೆ. ನಾಯ್ಕ ಅವರಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.

ತಿಂಗಳುಗಳೇ ಕಳೆದರೂ ಮಾಹಿತಿ ಕೊಡದೇ ಸತಾಯಿಸಿದ ಪ್ರಕರಣವನ್ನು ಮಾಹಿತಿ ಹಕ್ಕು ಆಯೋಗದ ಮುಂದೆ ಮಹಿಳೆ ಒಯ್ದಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಹಕ್ಕು ಆಯೋಗವು 6-6-2016ರಂದು ಆದೇಶ ಹೊರಡಿಸಿ ತಹಸೀಲ್ದಾರ್ ಸಿ.ಕೆ. ನಾಯ್ಕರಿಗೆ 2000 ರೂ. ದಂಡ ವಿಧಿಸಿತ್ತು.

ಅಂದು ವಿಧಿಸಿದ್ದ ದಂಡದ ಹಣವನ್ನು ಪಾವತಿಸದ ತಹಸೀಲ್ದಾರ್, ಬಳಿಕ ಕೆಲ ದಿನಗಳಲ್ಲೇ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು.

ನಂತರವೂ ಕೂಡ ಸೀತಾ ಭಟ್ ಅವರಿಗೆ ಹಾಲಿ ತಹಸೀಲ್ದಾರ್ ಮೇಘರಾಜ ನಾಯ್ಕ ಅವರು ಮಾಹಿತಿ ಹಕ್ಕು ಆಯೋಗದ ಆದೇಶದಂತೆ ಹಿಂದಿನ ತಹಸೀಲ್ದಾರ್ ಸಿ.ಕೆ. ನಾಯ್ಕ ಅವರಿಗೆ ಮಾಹಿತಿ ರವಾನಿಸಿ, ದಂಡದ ಮೊತ್ತ 2000 ರೂ.ಗಳ ಡಿಡಿಯನ್ನು ಇತ್ತೀಚೆಗೆ ಕಳುಹಿಸಿದ್ದಾರೆ.

ಮಾಹಿತಿ ಹಕ್ಕಿನಲ್ಲಿ ಸಾರ್ವಜನಿಕರು ಮಾಹಿತಿ ಕೇಳಿದರೂ ನೀಡದೇ ಅಧಿಕಾರಿಗಳು ಸತಾಯಿಸುವುದು ಮಾಮೂಲಿಯಾಗಿದೆ, ಇಂತಹ ಸಂದರ್ಭಗಳಲ್ಲಿ ಹಲವು ಜನರಿಗೆ ಏನುಮಾಡಬೇಕೆಂಬ ಗೊಂದಲ ಇರುವುದು ಸಹಜ ಬಹುತೇಕ ಜನರು ಮಾಹಿತಿ ಸಿಗದಾಗ ಸುಮ್ಮನಾಗಿಬಿಡುತ್ತಾರೆ,ಆದರೇ ಈ ಮಹಿಳೆ ತಮ್ಮ ಹೋರಾಟವನ್ನು ವರ್ಷಗಳ ಕಾಲ ಮುಂದುವರಿಸಿ ಕೊನೆಗೂ ಆ ಅಧಿಕಾರಿಗೆ ದಂಡ ವಿಧಿಸುವಲ್ಲಿ ಸಫಲರಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಇನ್ನಾದರೂ ಜಿಲ್ಲೆಯ ಅಧಿಕಾರಿಗಳು ಇದರಿಂದಲಾದರೂ ಬುದ್ದಿ ಕಲಿಯಬೇಕಿದೆ.




Leave a Reply

Your email address will not be published. Required fields are marked *