ಕುಮಟಾ ದಲ್ಲಿ ಕುಡುಕರ ಕರಾಮತ್ತು-ಮದ್ಯದಂಗಡಿಗೆ ಕನ್ನ ಹಾಕಿ ಬ್ರಾಂಡೆಡ್ ಮದ್ಯ ಕಳ್ಳತನ

591

ಕಾರವಾರ:- ಭಾರತ್ ಬಂದ್ ,ಲಾಕ್ ಡೌನ್‌‌ ನಿಂದಾಗಿ ಕಳೆದ ಒಂದು ತಿಂಗಳುಗಳಿಂದ ಮದ್ಯ ಮಾರಾಟ ಸಹ ಬಂದ್ ಮಾಡಿರುವುದು ಮದ್ಯ ವ್ಯಸನಿಗಳಿಗೆ ನುಂಗಲಾರದ ತುತ್ತಾಗಿದೆ.

ಹೀಗಾಗಿ ಮದ್ಯ ಪ್ರಿಯರು ವೈನ್ ಶಾಪ್ ಗಳಿಗೆ ಕನ್ನ ಹಾಕುತಿದ್ದಾರೆ.

ಮದ್ಯಕ್ಕಾಗಿ ಕುಮಟಾ ಪಟ್ಟಣದ ವೈನ್ ಶಾಪ್ ಒಂದಕ್ಕೆ‌ ಕಳ್ಳರು ಕನ್ನ ಹಾಕಿದ ಘಟನೆ ನಿನ್ನೆ ರಾತ್ರಿವೇಳೆ ನಡೆದಿದೆ.

ಕುಮಟಾ ಪಟ್ಟಣದ ಎಪಿಎಂಸಿ ಬಳಿ ಇರುವ ಅಲ್ಫಾ ವೈನ್ ಶಾಪ್ ಶಟರ್ಸನ್ನ ಒಡೆದು ಬ್ರಾಂಡೆಡ್ ಮದ್ಯಗಳನ್ನು ಕಳ್ಳತನ ಮಾಡಲಾಗಿದೆ.

ಒಟ್ಟು 43,665 ರೂಗಳ ಮೌಲ್ಯದ ವಿವಿಧ ಬ್ರಾಂಡ್ ಮದ್ಯಗಳನ್ನ ಕಳ್ಳರು ಹೊತ್ತೋಯ್ದಿದ್ದಾರೆ‌.

ಇಂದು ಅಂಗಡಿ ಮಾಲಿಕ ಅಂಗಡಿ ಬಳಿ ಬಂದು ನೋಡಿದಾಗ ಶೆಟರ್ ಮೇಲಕ್ಕೆ ಎತ್ತಿರುವುದು ಕಂಡು ಬಂದಿದ್ದು ತಕ್ಷಣ ಕುಮಟಾ ಪೊಲೀಸರಿಗೆ ದೂರನ್ನ ನೀಡಿದ್ದಾನೆ.
ಮದ್ಯಕ್ಕಾಗಿ ಪರದಾಟ ನಡೆಸುತ್ತಿರುವುವರೇ ಈ ಕೃತ್ಯ ಮಾಡಿರಬಹುದು ಎಂದು ಅಂದಾಜಿಸಲಾಗಿದ್ದು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ