BREAKING NEWS
Search

ಶಿರಸಿಯಲ್ಲಿ ಗುಡ್ಡ ಕುಸಿತ-ತೋಟಕ್ಕೆ ಹಾನಿ

318

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ನಿರಂತರ ಮಳೆ ಸುರಿಯುತ್ತಿದ್ದು, ಮಳೆಯಿಂದ ಅವಾಂತರಗಳು ಸಹಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಶಿರಸಿ ತಾಲೂಕಿನ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡ್ಡವೊಂದು ಕುಸಿದಿದ್ದು, ಒಂದು ಎಕರೆ ಅಡಕೆ ತೋಟಕ್ಕೆ ಹಾನಿಯಾಗಿದೆ.

ಮಾಜಿ ಸೈನಿಕ ಪ್ರದೀಪ್ ಹೆಗಡೆ ಅವರ ಅಡಿಕೆ ತೋಟಕ್ಕೆ ಹಾನಿಯಾಗಿ ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ಸುಮಾರು ಐದು ಅಡಿಯಷ್ಟು ಮಣ್ಣು ಕುಸಿದಿದ್ದು, ಸುಮಾರು ಎರಡು ಎಕರೆ ಪ್ರದೇಶದಲ್ಲಿ ಭೂಮಿ ಬಾಯಿ ತೆರೆದಿದೆ. ಮಣ್ಣು ಸಡಿಲವಾಗಿ ಕುಸಿಯುತ್ತಲೇ ಇದ್ದು, ಸ್ಥಳದಲ್ಲಿ ಆತಂಕ ಎದುರಾಗಿದೆ.




Leave a Reply

Your email address will not be published. Required fields are marked *