ನೀವು ಬಳಸುವ ಸ್ಯಾನಿಟೈಸರ್ ನಕಲಿಯೋ, ಅಸಲಿಯೋ ತಿಳಿಯೋದು ಹೇಗೆ?ನಕಿಲಿಯಾದ್ರೆ ಏನು ಮಾಡಬೇಕೆಂದು ತಿಳಿದುಕೊಳ್ಳಿ.

588

ಕೊರೋನಾ ಹೆಚ್ಚಿದ ಬೆನ್ನಲ್ಲೇ ದೇಶದಲ್ಲಿ ಹ್ಯಾಂಡ್​ ಸ್ಯಾನಿಟೈಸರ್​ಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಈ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾದ ಕೆಲವು ಔಷಧ ಅಂಗಡಿಗಳು ಸ್ಯಾನಿಟೈಸರ್​ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಆರಂಭಿಸಿದ್ದರು. ಅಲ್ಲದೆ ಕೆಲವರು ನಕಲಿ ಸ್ಯಾನಿಟೈಸರ್​ಅನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿದ್ದರು. ನಕಲಿ ಸ್ಯಾನಿಟೈಸರ್​ ಬಳಕೆಯಿಂದ ನಿಮ್ಮ ಚರ್ಮಕ್ಕೆ ಹಾನಿ ಉಂಟಾಗಬಹುದು. ಅದರಲ್ಲಿರುವ ರಾಸಾಯನಿಕಗಳು ನಿಮ್ಮ ಚರ್ಮದ ಮೇಲೆ ದುಷ್ಪರಿಣಾಮ ಬೀರಬಹುದು. ಹೀಗಾಗಿ ಪ್ರತಿ ಸಮಯ ಬಳಸುವ ನೀವು ಎಚ್ಚರಿಕೆಯಿಂದ ಇರುವುದು ಒಳಿತು.

ಬಹಳಷ್ಟು ಮಂದಿಗೆ ನಕಲಿ ಸ್ಯಾನಿಟೈಸರ್​ ಹಾಗೂ ಅಸಲಿ ಸ್ಯಾನಿಟೈಸರ್​ಗಳು ಹೇಗೆ ಪತ್ತೆ ಹಚ್ಚಬಹುದು ಎಂಬ ಅನುಮಾನ ಹಾಗೂ ತಿಳುವಳಿಕೆ ಇರದು.ಇನ್ನು ಇದನ್ನ ಹಣ ಕೊಟ್ಟು ಲ್ಯಾಬ್ ನಲ್ಲಿ ಪರೀಕ್ಷಿಸಲು ಯಾರು ತಾನೇ ಹೋಗುತ್ತಾರೆ.
ಕರೋನಾ ಬರದಂತೆ ನೀವು ನಕಲಿ ಸ್ಯಾನಿಟೈಜರ್ ಬಳಸಿ ಕೊನೆಗೆ ಕರೋನಾ ಕ್ಕೆ ತುತ್ತಾಗುವುದು ಅನುಮಾನವೇ ಇಲ್ಲ.ಹಾಗಿದ್ರೆ ಮನೆಯಲ್ಲೇ ಹೇಗೆ ಇದನ್ನು ಪರೀಕ್ಷಿಸಬಹುದು ಅಂತೀರಾ? ಇಲ್ಲಿದೆ ಸುಲಭ ಪರೀಕ್ಷಾ ವಿಧಾನ.

ಪೇಪರ್​ ಮೂಲಕ ಪರೀಕ್ಷೆ:-

ಟಿಸ್ಯು ಅಥವಾ ಟಾಯ್ಲೆಟ್​ ಪೇಪರ್​ ತೆಗೆದುಕೊಳ್ಳಿ. ಅದರ ಮೇಲೆ ಬಾಲ್​ ಪೆನ್ ಅಥವಾ ಸ್ಕೆಚ್​ ಪೆನ್​ನಿಂದ ಒಂದು ಚಿಕ್ಕ ವೃತ್ತ ರಚನೆ ಮಾಡಿ. ವೃತ್ತದ ಮಧ್ಯದಲ್ಲಿ ಒಂದು ಹನಿ ಸ್ಯಾನಿಟೈಸರ್​ ಹಾಕಿ. ಒಂದೊಮ್ಮೆ ಆಲ್ಕೋಹಾಲ್​ ಅಂಶ ಹೆಚ್ಚಿದ್ದರೆ ಸ್ಯಾನಿಟೈಸರ್​ ನಿಧಾನವಾಗಿ ಪೇಪರ್​ಅನ್ನು ಆವರಿಸಿಕೊಳ್ಳುತ್ತದೆ. ಈ ವೇಳೆ ನೀವು ಬಾಲ್ ಪೆನ್​​ ಅಥವಾ ಸ್ಕೆಚ್​ಪೆನ್​​ನಲ್ಲಿ ಬರೆದ ವೃತ್ತ ಹಿಂಜುತ್ತದೆ. ಆಲ್ಕೋಹಾಲ್​ ಅಂಶ ಕಡಿಮೆ ಇದ್ದರೆ ನೀವು ಬರೆದ ವೃತ್ತದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಗೋಧಿ ಹಿಟ್ಟು ಪರೀಕ್ಷೆ:-

ಒಂದು ಚಿಕ್ಕದಾದ ಬೌಲ್​ನಲ್ಲಿ ಒಂದು ಚಮಚ ಗೋಧಿ ಹಿಟ್ಟು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಸ್ಯಾನಿಟೈಸ್​ ಹಾಕಿ. ನಂತರ ಅದನ್ನು ಮಿಕ್ಸ್​ ಮಾಡಲು ಪ್ರಯತ್ನಿಸಿ. ಒಂದೊಮ್ಮೆ ನೀವು ಯಶಸ್ಸು ಕಂಡರೆ ನಿಮ್ಮ ಸ್ಯಾನಿಟೈಸರ್ ನಕಲಿ ಎಂದರ್ಥ. ನಿಜವಾದ ಸ್ಯಾನಿಟೈಸರ್​ ಗೋಧಿ ಹಿಟ್ಟನ್ನು ಜಿಗುಟಾಗಲು ಬಿಡುವುದೇ ಇಲ್ಲ. ಅದು ಗೋಧಿ ಹಿಟ್ಟನ್ನು ಒಣಗಿಸಿ ಬಿಡುತ್ತದೆ.

ಹೇರ್​ ಡ್ರೈಯರ್​ ನಿಂದ ಪರೀಕ್ಷೆ:-

ಎರಡು ಚಿಕ್ಕ ಬೌಲ್​ ತೆಗೆದುಕೊಳ್ಳಿ. ಸಮ ಪ್ರಮಾಣದಲ್ಲಿ ಒಂದು ಬೌಲ್​​ಗೆ ಸ್ಯಾನಿಟೈಸರ್​ ಹಾಗೂ ಮತ್ತೊಂದು ಬೌಲ್​ಗೆ ನೀರನ್ನು ಹಾಕಿ. ನಂತರ ಹೇರ್​ ಡ್ರೈರ್​ನಿಂದ ಎರಡಕ್ಕೂ ಶಾಖ ನೀಡಿ. ಶಾಖ ನೀಡುವ ಸಮಯ ಮತ್ತು ಶಾಖದ ಪ್ರಮಾಣ ಸಮನಾಗಿರಲಿ. ಒಂದೊಮ್ಮೆ ನಿಮ್ಮ ಸ್ಯಾನಿಟೈಸರ್​ನಲ್ಲಿ ಆಲ್ಕೋಹಾಲ್​ ಅಂಶ ಹೆಚ್ಚಿದ್ದರೆ, ನೀರಿಗಿಂತ ಸ್ಯಾನಿಟೈಸರ್​ ಬೇಗ ಆವಿ ಆಗಲಿದೆ.
ಇಷ್ಟವಾದರೆ ಮತ್ತಷ್ಟು ಜನರ ಅರಿವಿಗಾಗಿ ಈ ಲಿಂಕ್ ಶೇರ್ ಮಾಡಿ. ಗ್ರಾಹಕರೇ ಎಚ್ವರ! ನಿಮ್ಮ ಹಣ ಮತ್ತು ಆರೋಗ್ಯ ಅತೀ ಮುಖ್ಯವಾಗಿದೆ.
ನೀಮಗೆ ನಕಲಿ ಸ್ಯಾನಿಟೈಜರ್ ಯಾವುದೇ ಅಂಗಡಿಯವರು ನೀಡಿದರೇ ನೀವು ತೆಗೆದುಕೊಂಡ ಬಿಲ್ ಮೂಲಕ ಗ್ರಾಹಕ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವ ಮೂಲಕ ಬೇರೆಯವರು ವಂಚನೆಗೊಳಗಾಗುವುದನ್ನು ತಪ್ಪಿಸಿ.




Leave a Reply

Your email address will not be published. Required fields are marked *